More

    ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ ವಿಸ್ತರಣೆ ವಿಳಂಬ ಖಂಡಿಸಿ ಪ್ರತಿಭಟನೆ

    ಬ್ಯಾಡಗಿ: ಪಟ್ಟಣದಲ್ಲಿ ಹಾಯ್ದು ಹೋಗಿರುವ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ ವಿಸ್ತರಣೆ ವಿಳಂಬ ನೀತಿ ಖಂಡಿಸಿ ಮುಖ್ಯ ರಸ್ತೆ ಅಗಲೀಕರಣ ಸಮಿತಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ, ಶಿರಸ್ತೇದಾರ್ ಎಚ್.ಬಿ. ಹತ್ತಿಮತ್ತೂರ ಅವರಿಗೆ ಮನವಿ ಸಲ್ಲಿಸಿದರು.

    ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಮಾತನಾಡಿ, 15 ವರ್ಷಗಳಿಂದ ನಿರಂತರವಾಗಿ ರಸ್ತೆ ವಿಸ್ತರಣೆ ಮಾಡುವಂತೆ ಸಾಕಷ್ಟು ಹೋರಾಟ ನಡೆಸಿದ್ದೇವೆ. ಉಪವಾಸ ಸತ್ಯಾಗ್ರಹ, ಪ್ರತಿಭಟನೆ, ಡಂಗುರ, ಕತ್ತೆ ಮೆರವಣಿಗೆ, ಅರೆಬೆತ್ತಲೆ ಮೆರವಣಿಗೆ ಇತ್ಯಾದಿಗಳು ಜರುಗಿವೆ. ರಸ್ತೆ ಸುಗಮವಾಗಿಲ್ಲದ ಕಾರಣ ಸಾಕಷ್ಟು ತೊಂದರೆಯಾಗಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳುತ್ತಿಲ್ಲ ಎಂದರು.

    ವಕೀಲ ನಿಂಗಪ್ಪ ಬಟ್ಟಲಕಟ್ಟಿ ಮಾತನಾಡಿ, ನನೆಗುದಿಗೆ ಬಿದ್ದಿರುವ ರಸ್ತೆ ಅಗಲೀಕರಣದಿಂದಾಗಿ ಪಟ್ಟಣ ಕುಗ್ರಾಮಕ್ಕಿಂತಲೂ ಕಡೆ ಎಂಬಂತಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಬ್ಯಾಡಗಿಯಲ್ಲಿ ಗುಣಮಟ್ಟದ ರಸ್ತೆ ಆಗಬೇಕಿದೆ. ಮುಖ್ಯ ರಸ್ತೆಯನ್ನುಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವಿಸ್ತರಣೆ ಮಾಡಬಾರದು ಎನ್ನುವ ಉದ್ದೇಶ ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಎಲ್ಲರಿಗೂ ಸಂಶಯ ಉಂಟಾಗುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಕೈಬಿಡಬೇಕು. ನಮ್ಮ ಹೋರಾಟ ತಡೆಗಟ್ಟಲು ಸಾಧ್ಯವಿಲ್ಲ. ಫೆ. 27ರಿಂದ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಲಾಗುವುದು ಎಂದರು.

    ಹೋರಾಟದ ಸಂಚಾಲಕ ಪಾಂಡುರಂಗ ಸುತಾರ, ವಕೀಲ ಎಂ.ಜೆ. ಪಾಟೀಲ, ಎನ್.ಜಿ. ಮೋಟೆಬೆನ್ನೂರ, ಗುತ್ತೆಮ್ಮ ಮಾಳಗಿ, ಶಿವಕುಮಾರ ಸರವಂದ, ವಿನಯ ರಾವಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts