More

    ಕನಿಷ್ಠ ವೇತನ, ಪಿಂಚಣಿ ಸೇರಿ ವಿವಿಧ ಈಡೇರಿಕೆಗೆ ಪಟ್ಟು; ಡಿಸಿ ಕಚೇರಿ ಎದುರು ವಿವಿಧ ಸಂಘಟನೆಗಳ ಪ್ರತಿಭಟನೆ

    ತುಮಕೂರು : ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಅಂಗನವಾಡಿ ನೌಕರರ ಸಂ, ಸಿಐಟಿಯು, ಬಿಸಿಯೂಟ ನೌಕರರ ಸಂ, ಎಐಟಿಯುಸಿ, ಸಂಯುಕ್ತ ಅಶಾ ಕಾರ್ಯಕರ್ತೆಯರ ಸಂ ಎಐಯುಟಿಯುಸಿ ಸಂಟನೆಗಳು ಜಂಟಿಯಾಗಿ ಪ್ರತಿಭಟನೆ ನಡೆಸಿದವು.

    ಅಂಗವಾಡಿ ನೌರಕರ ಸಂ ಸಿಐಟಿಯು ಜಿಲ್ಲಾಧ್ಯಕ್ಷೆ ಜಿ.ಕಮಲಾ ಮಾತನಾಡಿ, ಅಗತ್ಯ ಆರೋಗ್ಯ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದು ಸೇರಿ ಸಾರ್ವಜನಿಕ ಆರೋಗ್ಯಕ್ಕೆ ಮೂಲಸೌಕರ್ಯ ಬಲಪಡಿಸಬೇಕು, ಕರೊನಾ ಅಲ್ಲದ ರೋಗಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಪರಿಣಾಮಕಾರಿ ಚಿಕಿತ್ಸೆ ಪಡೆಯಲು ವ್ಯವಸ್ಥೆ ವಾಡಬೇಕು, ಕರ್ತವ್ಯದಲ್ಲಿದ್ದಾಗ ಅಗಿರವ ಎಲ್ಲ ಸಾವುಗಳನ್ನು ಒಳಗೊಂಡ ಎಲ್ಲ ಮುಂಚೂಣಿ ಕೆಲಸಗಾರರಿಗೆ 50 ಲಕ್ಷ ರೂ. ವಿವಾ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

    ಕರ್ತವ್ಯದಲ್ಲಿ ತೊಡಗಿರುವ ಎಲ್ಲ ಗುತ್ತಿಗೆ ಮತ್ತು ಸ್ಕೀಮ್ ಕೆಲಸಗಾರರಿಗೆ ತಿಂಗಳಿಗೆ 10 ಸಾವಿರ ರೂ. ಹೆಚ್ಚುವರಿ ಕರೊನಾ ಅಪಾಯ ಭತ್ಯೆ ನೀಡಬೇಕು. ಎಲ್ಲ ಸ್ಕೀಮ್ ನೌಕರರಿಗೆ ಬಾಕಿ ಇರುವ ಬಾಕಿ ವೇತನ ಮತ್ತು ಭತ್ಯೆಗಳು ಇತ್ಯಾದಿಗಳನ್ನು ತಕ್ಷಣವೇ ಪಾವತಿಸಬೇಕು, ಕರ್ತವ್ಯದಲ್ಲಿದ್ದಾಗ ಕರೊನಾ ಸೋಂಕಿಗೆ ಒಳಗಾದ ಎಲ್ಲರಿಗೂ ಕನಿಷ್ಠ 10ಲಕ್ಷ ರೂ. ಪರಿಹಾರ ನೀಡಬೇಕು ಎಂದರು.

    ತಾಲೂಕು ಅಧ್ಯಕ್ಷ ಗೌರಮ್ಮ ಮಾತನಾಡಿ, ಐಸಿಡಿಎಸ್ ಮತ್ತು ಎಂಡಿಎಂಎಸ್‌ನ ಎಲ್ಲ ಫಲಾನುಭವಿಗಳಿಗೆ ತಕ್ಷಣವೇ ಗುಣಮಟ್ಟದ ಸಮರ್ಪಕ ಹೆಚ್ಚುವರಿ ಪಡಿತರ ಒದಗಿಸಿ ಯೋಜನೆಗಳಲ್ಲಿ ವಲಸಿಗರನ್ನು ಸೇರಿಸಿಕೊಳ್ಳಬೇಕು. ಸ್ಕೀಮ್ ಕೆಲಸಗಾರರಾದ ಅಂಗನವಾಡಿ, ಬಿಸಿಊಟ, ಅಶಾ ನೌಕರರ ಸೇವೆಗಳನ್ನು 45 ಮತ್ತು 46ನೇ ಭಾರತೀಯ ಕಾರ್ಮಿಕರ ಸಮ್ಮೇಳನದ ಶಿಫಾರಸಿನಂತೆ ಕಾರ್ಮಿಕರು ಎಂದು ಪರಿಗಣಿಸಬೇಕು ಎಂದರು.

    ಪ್ರತಿಭಟನೆಯಲ್ಲಿ ಸಂಘಟನೆ ತಾಲೂಕು ಕಾರ್ಯದರ್ಶಿ ವಿನೋದಾ, ಬಿಸಿ ಊಟ ನೌಕರ ಸಂ ಎಐಟಿಯುಸಿನ ಕಂಬೆಗೌಡ, ಸಂಯುಕ್ತ ಅಶಾ ಕಾರ್ಯಕರ್ತ ಸಂ ಎಐಯುಟಿಯುಸಿ ಜಿಲ್ಲಾ ಸಂಚಾಲಕಿ ಮಂಜುಳ ಗೋನಾವರ, ಕಲ್ಯಾಣಿ ಮತ್ತಿತರರು ನೇತೃತ್ವ ವಹಿಸಿದ್ದರು.
    ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.
    ಸಾವಿರಾರು ಅಂಗನವಾಡಿ, ಬಿಸಿಯೂಟ ನೌಕರರು ಸರ್ಕಲ್ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಿ ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts