More

    ಸರ್ವ ಜನಾಂಗದವರ ಏಳಿಗೆಗೆ ಶ್ರಮಿಸುವೆ

    ಕೂಡ್ಲಿಗಿ: ಹಿಂದುಳಿದ ಈ ತಾಲೂಕಿಗೆ ಆರೋಗ್ಯ ಸೇವೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

    ಶಾಸಕರಾಗಿ ಆಯ್ಕೆಯಾದ ನಂತರ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ನಂತರ, ಪಟ್ಟಣದ ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕಕ್ಕೆ ಶನಿವಾರ ರಾತ್ರಿ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

    ಶಾಸಕನಾಗಿ ಮೊದಲ ಆದ್ಯತೆಯಾಗಿ ಹಿಂದುಳಿದ ಅದರಲ್ಲೂ ಬಡ ಕೂಲಿ ಕಾರ್ಮಿಕರು ಇರುವ ಈ ಕ್ಷೇತ್ರದಲ್ಲಿ ಅನಾರೋಗ್ಯದಿಂದ ಬಳಲಿದರೆ ಸುಸಜ್ಜಿತವಾದ ಆಸ್ಪತ್ರೆ ವ್ಯವಸ್ಥೆ ಇಲ್ಲ. ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯಕೀಯ ಸೇವೆ ಸಿಗುತ್ತಿಲ್ಲ. ಇದನ್ನ ಮನಗಂಡು ನಾನು ಸ್ವತಃ ವೈದ್ಯನಾದ ಕಾರಣ ನನ್ನ ಸಹೋದ್ಯೋಗಿ ಡಾಕ್ಟರ್‌ಗಳ ಜತೆಗೂಡಿ ಆಸ್ಪತ್ರೆ ಆರಂಭಿಸುವ ಗುರಿ ಹೊಂದಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲೂ ನುರಿತ ತಜ್ಞ ವೈದ್ಯರು ಹಾಗೂ ಸುಸಜ್ಜಿತ ವೈದ್ಯಕೀಯ ಎಲ್ಲಾ ಸೇವೆಗಳು ಇಲ್ಲಿಯೇ ಸಿಗುವಂತೆ ನೋಡಿಕೊಳ್ಳುವ. ಇದರಿಂದ ಬಡ ಜನರು ದೂರದ ಪಟ್ಟಣಗಳಿಗೆ ಅಲೆದಾಡದೇ ಆರ್ಥಿಕ ಹೊರೆ ತಪ್ಪಿಸಿದಂತಾಗುತ್ತದೆ ಎಂದರು. ಇನ್ನೂ ಪ್ರಚಾರದ ವೇಳೆ ಬಡ ಜನರ ಸಮಸ್ಯೆಗಳನ್ನು ಆಲಿಸಿದ್ದು, ಅವರಿಗೆ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

    ಇದನ್ನೂ ಓದಿ: ಅಜಾತಶತ್ರು ವಾಜಪೇಯಿ ಜನ್ಮ ವಾರ್ಷಿಕೋತ್ಸವ: ಸದೈವ್​ ಅಟಲ್​ ಸ್ಮಾರಕಕ್ಕೆ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಪುಷ್ಪ ನಮನ

    ಸೇವೆಗೆ ಸದಾ ಸಿದ್ದ

    ನನ್ನ ಗೆಲುವಿಗೆ ಕ್ಷೇತ್ರದ ಎಲ್ಲಾ ವರ್ಗದ ಜನರು ಸ್ವಯಂ ಪ್ರೇರಿತರಾಗಿ ಮತಗಳನ್ನು ನೀಡಿ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿದ್ದು, ನಾನು ಅವರುಗಳ ಸೇವೆಗೆ ಸದಾ ಸಿದ್ದನಿದ್ದೇನೆ. ಕ್ಷೇತ್ರದಲ್ಲಿ ಕಾನೂನು ಸೇವೆಗಳಿಗೆ ಧಕ್ಕೆ ಬಾರದಂತೆ ಶಾಂತಿ ಹಾಗೂ ಸುವ್ಯವಸ್ಥೆಗೆ ಆದ್ಯತೆ ನೀಡಿ ಸರ್ವ ಜನಾಂಗದವರ ಏಳಿಗೆಗೆ ನನ್ನ ಸೇವೆ ಮುಂದುವರಿಸುವೆ ಎಂದು ಭರವಸೆ ನೀಡಿದರು. ಈಗಾಗಲೆ ನೀರಾವರಿ ಕಾಮಾಗಾರಿ ಮುಗಿಯುವ ಹಂತ ತಲುಪಿದ್ದು ಮುಂದಿನ ದಿನಗಳಲ್ಲಿ ಆ ಕಾಮಾಗಾರಿ ಸಂಪೂರ್ಣ ಗೊಳಿಸಿ, ರೈತರಿಗೆ ಅನುಕೂಲ ಕಲ್ಲಿಸುವುದಾಗಿ ತಿಳಿಸಿದರು.

    ಪತ್ನಿ ಪುಷ್ಪ ಶ್ರೀನಿವಾಸ್, ಬ್ಲಾಕ್ ಅಧ್ಯಕ ಎಂ.ಗುರುಸಿದ್ದನ ಗೌಡ, ಮುಖಂಡರಾದ ಸಾವಜ್ಜಿ ರಾಜೇಂದ್ರ ಪ್ರಸಾದ್, ಕಾವಲಿ ಶಿವಪ್ಪನಾಯಕ, ನಾಗಮಣಿ ಜಿಂಕಾಲ್, ಉದಯ ಜನ್ನು, ಸಿ.ಬಿ.ಜಯರಾಂ, ಟಿ.ಜಿ.ಮಲ್ಲಿಕಾರ್ಜುನ ಗೌಡ, ಹಡಗಲಿ ವೀರಭದ್ರಪ್ಪ, ಜಿಲಾನ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts