More

    ಜಿಲ್ಲೆಯ 16 ಹಿರಿಯ ಪ್ರಾಥಮಿಕ ಶಾಲೆಗಳಿಗೆ ಬಡ್ತಿ ಯೋಗ

    ಹಾವೇರಿ: ರಾಜ್ಯದ 95 ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಿ ಸರ್ಕಾರವು ಶನಿವಾರ ಆದೇಶ ಹೊರಡಿಸಿದ್ದು, ಅದರಲ್ಲಿ ಜಿಲ್ಲೆಯ 16 ಹಿರಿಯ ಪ್ರಾಥಮಿಕ ಶಾಲೆಗಳಿಗೆ ಬಡ್ತಿ ಯೋಗ ಲಭಿಸಿದೆ.

    ಜಿಲ್ಲೆಯ ಅಲ್ಲಿಪುರ, ತೆಗ್ಗಿಹಳ್ಳಿ, ತೊಂಡೂರ, ಮಂತ್ರೋಡಿ, ವಿ.ಡಿ. ತಡಸ, ಹುಲಗೂರ, ಹನುಮರಹಳ್ಳಿ, ವನಹಳ್ಳಿ, ಹಿರೇಮಲ್ಲೂರ, ಹಿರೇಮಣಕಟ್ಟಿ, ಕುರ್ಸಾಪುರ, ಬೆಳವಲಕೊಪ್ಪ, ಮುಗಳಿ, ತವರಮೆಳ್ಳಿಹಳ್ಳಿ, ಸಿದ್ದಾಪುರ, ಕಾಕೋಳ ಗ್ರಾಮದಲ್ಲಿನ ಹಿರಿಯ ಪ್ರಾಥಮಿಕ ಶಾಲೆಗಳು ಪೌಢಶಾಲೆಗಳಾಗಿ ಉನ್ನತೀಕರಣಗೊಳ್ಳಲಿವೆ. ಇದರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸುವ ಶಿಗ್ಗಾಂವಿ, ಸವಣೂರ ಕ್ಷೇತ್ರದಲ್ಲಿನ 15 ಶಾಲೆಗಳು ಸೇರಿವೆ.

    ಸಮಗ್ರ ಶಿಕ್ಷಣದಡಿಯಲ್ಲಿ ನಿಗದಿಪಡಿಸಿರುವ ವಸ್ತುನಿಷ್ಠ, ಮಾನದಂಡಗಳು, ಅವಶ್ಯಕತೆಗಳು, ಸೌಲಭ್ಯಗಳ ಲಭ್ಯತೆ ಹಾಗೂ ಮಾರ್ಗಸೂಚಿಗಳ ಪ್ರಕಾರ ರಾಜ್ಯದಲ್ಲಿ 79 ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದನ್ನು ಸರ್ಕಾರದ ಹಂತದಲ್ಲಿ ಪರಿಶೀಲಿಸಿ ಇನ್ನು ಕೆಲವು ಗ್ರಾಮಗಳಲ್ಲಿ ಪ್ರೌಢಶಾಲೆಗಳು ಇಲ್ಲದಿರುವುದನ್ನು ಗಮನಿಸಿ ಅವಶ್ಯವಿರುವ ಇನ್ನು ಕೆಲ ಸ್ಥಳಗಳನ್ನು ಸೇರಿಸಿ ಒಟ್ಟು 103 ಶಾಲೆಗಳನ್ನು ಉನ್ನತೀಕರಿಸುವ ಕುರಿತು ಆಯುಕ್ತರು ವರದಿ ನೀಡಿದ್ದರು. ಇದರಲ್ಲಿ ಆಯುಕ್ತರು ಪರಿಶೀಲಿಸಿ ಏಕ ಕಡತದಲ್ಲಿ ಸಲ್ಲಿಸಿರುವ ವರದಿಯಲ್ಲಿ ರಾಜ್ಯದ 100 ಶಾಲೆಗಳನ್ನು ಉನ್ನತೀಕರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದರಲ್ಲಿ 5ಶಾಲೆಗಳನ್ನು ಈಗಾಗಲೇ ಉನ್ನತೀಕರಿಸಲಾಗಿತ್ತು. ಇನ್ನುಳಿದ 95 ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಿ ಶನಿವಾರ ಸರ್ಕಾರ ಆದೇಶ ಹೊರಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts