More

    ಹಬ್ಬಗಳ ಹೆಸರಿನಲ್ಲಿ ಕ್ರೀಡೆಗಳಿಗೆ ಉತ್ತೇಜನ

    ವಿರಾಜಪೇಟೆ: ಹಬ್ಬಗಳ ಹೆಸರಿನಲ್ಲಿ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ ಎಂದು ಅಂತಾರಾಷ್ಟ್ರೀಯ ರಗ್ಬಿ ಪಟು ಮತ್ತು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಮಾದಂಡ ತಿಮ್ಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

    ಪೆರುಂಬಾಡಿ ಯೂತ್ ಫ್ರೆಂಡ್ಸ್ ವತಿಯಿಂದ ಮಾಹಾ ಶಿವರಾತ್ರಿ ಪ್ರಯುಕ್ತ ಇತ್ತೀಚೆಗೆ ಬಾಳೂಗೋಡು ಶ್ರೀ ಅಯ್ಯಪ್ಪ ಭಜನಾ ಮಂದಿರದ ಮೈದಾನದಲ್ಲಿ ಆಯೋಜಿಸಿದ್ದ 3ನೇ ವರ್ಷದ ಪೆರುಂಬಾಡಿ ಪ್ರೋ ಕಬಡ್ಡಿ ಪ್ರೀಮಿಯರ್ ಲೀಗ್ ಹೊನಲು ಬೆಳಕಿನ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಕಬಡ್ಡಿ ಹೆಚ್ಚು ಜನಪ್ರಿಯಗೊಳ್ಳುವ ಮೂಲಕ ಪ್ರಸ್ತುತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರೋ ಕಬಡ್ಡಿ ಲೀಗ್ ಆಯೋಜಿಸುತ್ತಿರುವ ಪರಿಣಾಮ ಹಲವಾರು ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ ಎಂದರು.

    ಕಬಡ್ಡಿ ಪಂದ್ಯಾಟಕ್ಕೆ ಪ್ರೋತ್ಸಾಹ ದೊರಕುವುದರೊಂದಿಗೆ ಆಯೋಜಕರ ಶ್ರಮಕ್ಕೂ ಗೌರವ ಸಿಗುವಂತಾಗಬೇಕು. ಹಬ್ಬದ ವಾತಾವರಣವಿದ್ದರೂ ಗ್ರಾಮದಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮದ ಜನತೆಯನ್ನು ಒಂದುಗೂಡಿಸುವ ಕಾರ್ಯ ಶ್ಲಾಘನೀಯ ಎಂದರು.
    ಹಿಂದು- ಮಲಯಾಳಿ ಅಸೋಸಿಯೇಷನ್ ನಗರಾಧ್ಯಕ್ಷ ಎ.ವಿನೂಪ್ ಮಾತನಾಡಿ, ಕ್ರೀಡಾ ಸಂಸ್ಥೆಗಳು ಕ್ರೀಡೆಗೆ ಪ್ರೋತ್ಸಾಹ ನೀಡುವುದರೊಂದಿಗೆ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಜತೆಗೆ ಗ್ರಾಮ ಮಟ್ಟದ ಸೇವೆಗೂ ಸಂಸ್ಥೆಯೂ ಮುಂದಾಗಬೇಕು ಎಂದು ಹೇಳಿದರು.

    ಗ್ರಾಮದ ಹಿರಿಯರಾದ ಕಬ್ಬಚ್ಚೀರ ಕಾವೇರಪ್ಪ ಪಂದ್ಯಾಟವನ್ನು ಉದ್ಘಾಟಿಸಿದರು. ಉದ್ಯಮಿ ಚುಪ್ಪ ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಅಚ್ಚಪಂಡ ಮಹೇಶ್ ಗಣಪತಿ, ಯೂತ್ ಫ್ರೆಂಡ್ಸ್ ಸಂಸ್ಥೆ ಅಧ್ಯಕ್ಷ ಉಮೇಶ್, ಗೌರವ ಸಲಹೆಗಾರ ಟಿ.ಆರ್. ಗಣೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ.ಗಣೇಶ್, ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಪಿ. ನವೀನ್, ಆರ್ಜಿ ಗ್ರಾಮ ಪಂಚಾಯಿತಿ ಸದಸ್ಯ ಟಿ.ಎನ್.ಉಪೇಂದ್ರ, ಕೆ.ಕೆ.ಅನಿಲ್ಕುಮಾರ್ ಇದ್ದರು.

    ಅಭಿಮನ್ಯು ವಾರಿಯರ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ: ಕಬಡ್ಡಿ ಪಂದ್ಯಾಟದಲ್ಲಿ ವಿರಾಜಪೇಟೆ ನಗರ ಸೇರಿದಂತೆ ಗ್ರಾಮೀಣ ಭಾಗದಿಂದ ಏಳು ತಂಡಗಳು ಭಾಗವಹಿಸಿದ್ದವು. ಫೇತಂ ಬುಲ್ಸ್, ಡ್ರೀಂ ವಲ್ಡ್, ಸೇವನ್ ಈಗಲ್ಸ್, ಎಸ್.ಬಿ.ಆರ್‌ವಿ.ಪೇಟೆ, ಅಭಿಮನ್ಯು ವಾರಿಯರ್ಸ್, ಜಿಂಗಾಲಕ್ಕ ಬಾಯ್ಸ್ ಮತ್ತು ರಾಯಲ್ಸ್ ಬೆಟಾಲಿಯನ್ ಬೋಯಿಕೇರಿ ತಂಡ ಪಂದ್ಯಾಟದಲ್ಲಿ ಭಾಗವಹಿಸಿದ್ದವು.

    ಪ್ರಥಮ ಸೆಮಿಫೈನಲ್ ಪಂದ್ಯಾಟ ಎಸ್.ಬಿ.ಆರ್.ವಿ ಪೇಟೆ ಮತ್ತು ಅಭಿಮನ್ಯು ವಾರಿಯರ್ಸ್ ತಂಡಗಳ ಮಧ್ಯೆ ನಡೆಯಿತು. ಅಂತಿಮವಾಗಿ ಎಸ್‌ಬಿಆರ್ ತಂಡ ಅಭಿಮನ್ಯು ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ದ್ವಿತೀಯ ಸೆಮಿಫೈನಲ್ ಪಂದ್ಯಾಟ ಸೆವನ್ ಈಗಲ್ಸ್ ತಂಡ ಮತ್ತು ಜಿಂಗಾಲಕ್ಕ ತಂಡಗಳ ಮಧ್ಯೆ ನಡೆಯಿತು. ಅಂತಿಮಗಾಗಿ ಸೆವೆನ್ ಈಗಲ್ಸ್ ತಂಡ ಜಯಗಳಿಸಿತು. ತೃತೀಯ ಸೆಮಿ ಫೈನಲ್‌ನಲ್ಲಿ ಗರಿಷ್ಠ ಅಂಕಪಡೆದ ಅಭಿಮನ್ಯು ವಾರಿಯರ್ಸ್ ತಂಡ ಮತ್ತು ಸೇನ್ ಈಗಲ್ಸ್ ತಂಡಗಳ ಮಧ್ಯೆ ಪಂದ್ಯಾಟ ನಡೆದು ಅಭಿಮನ್ಯು ವಾರಿಯರ್ಸ್ ತಂಡ ಸೆವನ್ ಈಗಲ್ಸ್ ತಂಡವನ್ನು ಮಣಿಸಿ ಫೈನಲ್ಗೆ ಅರ್ಹತೆ ಪಡೆಯಿತು.

    ವಿರಾಜಪೇಟೆಯ ಎಸ್.ಬಿ.ಆರ್ ಮತ್ತು ಅಭಿಮನ್ಯು ವಾರಿಯರ್ಸ್ ತಂಡಗಳ ನಡುವೆ ಫೈನಲ್ ಪಂದ್ಯಾಟ ನಡೆಯಿತು. ಪಂದ್ಯಾ ಟವು ರೋಚಕ ಹಂತಕ್ಕೆ ತಲುಪಿ ಕೊನೇಘಟ್ಟದಲ್ಲಿ ಎಸ್.ಬಿ.ಆರ್ ತಂಡ ಎಡವಿತು. ಅಂಕಪಟ್ಟಿಯಲ್ಲಿ 25-23 ಎಂದಾಗಿ, ಎರಡು ಅಂಕಗಳ ಮುನ್ನಡೆ ಪಡೆದ ಅಭಿಮನ್ಯು ವಾರಿಯರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ 33,333 ರೂ.ನಗದು ಮತ್ತು ಟ್ರೂಫಿ, ದ್ವೀತಿಯ ಬಹುಮಾನವಾಗಿ 22,222 ರೂ.ನಗದು ಮತ್ತು ಟ್ರೋಫಿ, ತೃತೀಯ ಬಹುಮಾನವಾಗಿ 6666 ರೂ.ನಗದು ಮತ್ತು ಟ್ರೋಫಿ ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ 4,444 ರೂ. ನಗದು ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts