More

    ಪ್ಲೇಆಫ್‌ ಸನಿಹ ಗುಜರಾತ್‌: ಬೆಂಗಳೂರು ಬುಲ್ಸ್‌ ಪ್ಲೇಆಫ್‌ ಕನಸು ಭಗ್ನ

    ಕೋಲ್ಕೊತಾ: ರೇಡಿಂಗ್‌ ಮತ್ತು ಟ್ಯಾಕಲ್‌ ಎರಡೂ ವಿಭಾಗಗಳಲ್ಲೂನೀರಸ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯ 116ನೇ ಪಂದ್ಯದಲ್ಲಿಗುಜರಾತ್‌ ಜಯಂಟ್ಸ್‌ ವಿರುದ್ಧ ಪರಾಭವಗೊಂಡಿತು. ಇದರೊಂದಿಗೆ 11ನೇ ಸೋಲಿಗೆ ಗುರಿಯಾದ ಬುಲ್ಸ್‌ ತಂಡ ತನ್ನ ಪ್ಲೇಆಫ್‌ ಹಂತದಿಂದ ಬಹುತೇಕ ದೂರ ಸರಿದಿದೆ. ಆದರೆ 12ನೇ ಗೆಲುವು ಸಾಧಿಸಿದ ಗುಜರಾತ್‌ ಜಯಂಟ್ಸ್‌ ಒಟ್ಟಾರೆ 65 ಅಂಕಗಳೊಂದಿಗೆ ಪ್ಲೇಆಫ್‌ ಹಂತಕ್ಕೆ ಮತ್ತಷ್ಟು ಹತ್ತಿರಗೊಂಡಿದೆ. ಪ್ರಸ್ತುತ 48 ಅಂಕಗಳನ್ನು ಹೊಂದಿರುವ ಬುಲ್ಸ್‌ ಲೀಗ್‌ ಹಂತದಲ್ಲಿಉಳಿದಿರುವ ತನ್ನ ಇನ್ನೆರಡು ಪಂದ್ಯಗಳಲ್ಲಿಗೆದ್ದರೂ ಪ್ಲೇಆಫ್‌ ಹಂತ ಪ್ರವೇಶಿಸಲು ಅಸಾಧ್ಯವಾಗಿರುವ ಕಾರಣ ಪ್ರಶಸ್ತಿ ಸ್ಪರ್ಧೆಯಿಂದ ಹೊರಬಿದ್ದಾಂತಾಗಿದೆ.

    ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿಭಾನುವಾರ ನಡೆದ ಎರಡನೇ ಪಂದ್ಯದಲ್ಲಿಬುಲ್ಸ್‌ 28-50 ಅಂಕಗಳ ಅಂತರದಿಂದ ಗುಜರಾತ್‌ಗೆ ಮಂಡಿಯೂರಿತು.
    ಪಂದ್ಯ ಕೊನೆಗೊಳ್ಳಲು ಹತ್ತು ನಿಮಿಷಗಳ ಆಟ ಬಾಕಿ ಇರುವಾಗ 36-15ರಲ್ಲಿಅಂತರ ಕಾಯ್ದುಕೊಂಡ ಜಯಂಟ್ಸ್‌ ಆಟಗಾರರು, ಪಂದ್ಯ ಮುಕ್ತಾಯಕ್ಕೂ ಮುನ್ನವೇ ಗೆಲುವಿನ ಸುಳಿವು ನೀಡಿದರು. ಪಂದ್ಯದ ಆರಂಭದಿಂದ ಕೊನೆಯವರೆಗೂ ಮಿಂಚಿನ ಸಂಚಲನ ಮೂಡಿಸಿದ ಪರ್ತೀಕ್‌ ದಹಿಯಾ 13 ಅಂಕಗಳನ್ನು ಗಳಿಸಿ ನೆರೆದಿದ್ದ ಪ್ರೇಕ್ಷ ಕರ ಹೃದಯ ಗೆದ್ದರು. ಇವರಿಗೆ ಉತ್ತಮ ಸಾಥ್‌ ನೀಡಿದ ಸ್ಟಾರ್‌ ಡಿಫೆಂಡರ್‌ ಫಜಲ್‌ ಹತ್ರಾಚಲಿ ಮತ್ತು ನಿತಿನ್‌ ಕ್ರಮವಾಗಿ 6 ಮತ್ತು 7 ಅಂಕಗಳ ಕೊಡುಗೆ ನೀಡಿದರು. ಅತ್ತ ನಿಸ್ತೇಜ ಪ್ರದರ್ಶನ ನೀಡಿದ ಬುಲ್ಸ್‌ ಪರ ಯಾರೊಬ್ಬರು ಸೂಪರ್‌ 10 ಅಂಕಗಳಿರಲಿ ಕನಿಷ್ಠ ವೈಯಕ್ತಿಕ 5 ಅಂಕಗಳನ್ನು ದಾಟಲು ಸಾಧ್ಯವಾಗಲಿಲ್ಲ. ಪಂದ್ಯದ 35ನೇ ನಿಮಿಷದಲ್ಲಿ41-19ರಲ್ಲಿಹಿಡಿತ ಸಾಧಿಸಿದ ಜಯಂಟ್ಸ್‌, ಮುಕ್ತಾಯದ ವೇಳೆಗೆ ಗೆಲುವಿನ ಅಂತರವನ್ನು 22 ಅಂಕಗಳಿಗೆ ಹಿಗ್ಗಿಸಿಕೊಂಡಿತು.

    ಹಿಂದಿನ ಸೋಲಿನಿಂದ ಹೊರಬರುವ ಹುಮ್ಮಸ್ಸಿನಲ್ಲಿಕಣಕ್ಕಿಳಿದ ಬುಲ್ಸ್‌ ಆಟಗಾರರು ಗುಜರಾತ್‌ ತಂಡದ ಅಬ್ಬರಕ್ಕೆ ಆರಂಭದಲ್ಲಿಬೆದರಿದರು. 8ನೇ ನಿಮಿಷದಲ್ಲಿಆಲೌಟ್‌ ಬಲೆಗೆ ಸಿಲುಕಿದ ಬೆಂಗಳೂರು ತಂಡ ವಿರಾಮದವರೆಗೂ ಪುಟಿದೇಳುವ ಯಾವುದೇ ಪ್ರಯತ್ನ ನಡೆಸಲಿಲ್ಲ. ಎದುರಾಳಿಯ ದೋಷಗಳನ್ನು ಸಮರ್ಥವಾಗಿ ಬಳಸಿಕೊಂಡ ಗುಜರಾತ್‌ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅದರಲ್ಲೂಪರ್ತೀಕ್‌ ಗುಜರಾತ್‌ ತಂಡದ ಮೇಲುಗೈನಲ್ಲಿನಿರ್ಣಾಯಕ ಪಾತ್ರವಹಿಸಿದರು. 15ನೇ ನಿಮಿಷದಲ್ಲಿ15-8 ಅಂಕಗಳ ಅಂತರದಲ್ಲಿಮುನ್ನಡೆ ಸಾಧಿಸಿದ ಗುಜರಾತ್‌ ತಂಡ, ವಿರಾಮಕ್ಕೆ ತನ್ನ ಮುನ್ನಡೆಯನ್ನು 12 ಅಂಕಗಳಿಗೆ ವಿಸ್ತರಿಸಿಕೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts