More

    ಪ್ರೋಬಸ್ ಕ್ಲಬ್ ಪದಗ್ರಹಣ 23ರಂದು

    ಹುಬ್ಬಳ್ಳಿ: ಲಿಂಗರಾಜನಗರ ಪ್ರೋಬಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಲಿಂಗರಾಜ ನಗರದ ಸಮುದಾಯ ಭವನದಲ್ಲಿ ಜು. 23ರಂದು ಬೆಳಗ್ಗೆ 11ಕ್ಕೆ ಏರ್ಪಾಟಾಗಿದೆ.

    ಪ್ರೊ. ಕೆ.ಎಸ್. ಕೌಜಲಗಿ (ಅಧ್ಯಕ್ಷ), ಡಾ.ಬಿ. ಸಿ. ಕೋಟಿ (ಉಪಾಧ್ಯಕ್ಷ), ಡಾ. ಬಿ.ಎಸ್. ಮಾಳವಾಡ (ಕಾರ್ಯದರ್ಶಿ), ಎಂ.ವಿ. ಕಡಗಾಂವಿ (ಕೋಶಾಧ್ಯಕ್ಷ), ಎಸ್.ಎಸ್. ಕರಡಿ, ಎಂ.ಜಿ. ಸಜ್ಜನರ, ಡಾ. ಎಂ.ಐ. ಸಾಂಬ್ರಾಣಿ, ಸಿ.ಜಿ. ಝಳಕಿ, ಪ್ರೊ. ಜಿ.ಆರ್. ಸಾಲಿಮಠ, ವಿ.ಬಿ. ಕಣವಿ, ಆರ್.ಜಿ. ಹೊಸೂರ (ನಿರ್ದೇಶಕರು) ಅಧಿಕಾರ ಸ್ವೀಕರಿಸಲಿದ್ದಾರೆ.

    ರೋಟರಿ ಕ್ಲಬ್ ಹುಬ್ಬಳ್ಳಿ (ಉತ್ತರ) ಅಧ್ಯಕ್ಷ ಡಾ. ನಾಗರಾಜ ಶೆಟ್ಟಿ ಪ್ರಮಾಣ ವಚನ ಬೋಧಿಸುವರು. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಸಚಿವ ಡಾ.ಜಿ.ಬಿ. ಪಾಟೀಲ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅಧ್ಯಕ್ಷ ಡಾ.ಎಂ.ಐ. ಸಾಂಬ್ರಾಣಿ ಮತ್ತು ಕಾರ್ಯದರ್ಶಿ ಎಸ್. ಎಸ್. ಕರಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts