More

    ಪ್ರಿಯಾಂಕಾ ಗಾಂಧಿ ವಾದ್ರಾಗೆ ಶಾಕ್​ ನೀಡಿದ ಕೇಂದ್ರ ವಸತಿ ಸಚಿವಾಲಯ…

    ನವದೆಹಲಿ: ಕಳೆದ ನವೆಂಬರ್​ನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಮಕ್ಕಳಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್​ ಗಾಂಧಿಗೆ ನೀಡಲಾಗಿದ್ದ ಎಸ್​ಪಿಜಿ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದು, ಅವರಿಗೆ Z ಪ್ಲಸ್​ ಭದ್ರತೆಯನ್ನು ನೀಡಿತ್ತು.

    ಇದೀಗ ಪ್ರಿಯಾಂಕಾ ಗಾಂಧಿಯವರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್​ ನೀಡಿದೆ. ದೆಹಲಿಯ ಲೋಧಿ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಯನ್ನು ಆಗಸ್ಟ್​ 1ರ ಒಳಗೆ ಖಾಲಿ ಮಾಡುವಂತೆ ಸೂಚನೆ ನೀಡಿದೆ. ಇದನ್ನೂ ಓದಿ: ನನ್ನ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವುದನ್ನು ಬಿಡಿ, ನನ್ನ ಆತ್ಮೀಯರಲ್ಲಿ ಹಾರ್ಟ್​ ಪೇಷೆಂಟ್ಸ್​ ಇದ್ದಾರೆ: ಎಸ್​.ಜಾನಕಿ

    ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಿಯಾಂಕಾ ಗಾಂಧಿಯವರಿಗೆ ಪತ್ರವನ್ನು ಕಳಿಸಿದ್ದು, ಅದರಲ್ಲಿ ನಿಮಗೆ ನೀಡಲಾಗಿದ್ದ ಎಸ್​ಪಿಜಿ ಭದ್ರತೆಯನ್ನು ವಾಪಸ್​ ಪಡೆದು, Zಪ್ಲಸ್ ಭದ್ರತೆ ನೀಡಲಾಗಿದೆ. ಇದರಿಂದ ನಿಯಮದ ಪ್ರಕಾರ ನಿಮಗೆ ಸರ್ಕಾರಿ ಮನೆಯನ್ನು ನೀಡಲು ಸಾಧ್ಯವಿಲ್ಲ. ಹಾಗಾಗಿ ಇಷ್ಟು ದಿನ ನಿಮಗೆ ನೀಡಲಾಗಿದ್ದ ಲೋಧಿ ಎಸ್ಟೇಟ್​​ನಲ್ಲಿರುವ ಟೈಪ್​ 6ಬಿ, ಮನೆ ಸಂಖ್ಯೆ 35ನ್ನು ವಾಪಸ್​ ಪಡೆಯುತ್ತಿದ್ದೇವೆ. ಆಗಸ್ಟ್​ ಒಂದರ ಒಳಗೆ ಮನೆ ಖಾಲಿ ಮಾಡಬೇಕು ಎಂದು ಪತ್ರದಲ್ಇ ಉಲ್ಲೇಖಿಸಲಾಗಿದೆ. ಆಗಸ್ಟ್​ 1 ರ ನಂತರವೂ ಮನೆ ಬಿಟ್ಟುಕೊಡದೆ ಇದ್ದರೆ ದಂಡ ವಿಧಿಸಲಾಗುವುದು ಎಂದೂ ಕೂಡ ಪತ್ರದಲ್ಲಿ ಉಲ್ಲೇಖಿಸಲಾಗಿದೆ. (ಏಜೆನ್ಸೀಸ್​)

    5,000ದ ಗಡಿ ದಾಟಿತು ಬೆಂಗಳೂರಿನಲ್ಲಿ ಕೋವಿಡ್​ 19 ಕೇಸ್​- ರಾಜ್ಯದಲ್ಲಿಂದು 1272 ಪ್ರಕರಣಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts