More

    ಖಾಸಗಿ ಶಾಲೆಗಳಿಂದ ಶುಲ್ಕ ಭರಿಸಲು ಒತ್ತಡ, ಸಭೆ ನಡೆಸಿ ಪಾಲಕರ ಗೊಂದಲ ಬಗೆಹರಿಸಲು ಹಬೊಹಳ್ಳಿಯಲ್ಲಿ ಕನ್ನಡ ಯುವಶಕ್ತಿ ವೇದಿಕೆ, ಸ್ವಯಂ ಸೇವಕರ ಒತ್ತಾಯ

    ಹಗರಿಬೊಮ್ಮನಹಳ್ಳಿ: ಪಟ್ಟಣದ ಖಾಸಗಿ ಶಾಲೆಗಳು ಮಕ್ಕಳ ನೋಂದಣಿ ಶುಲ್ಕ ಪಾವತಿಸುವಂತೆ ಪಾಲಕರಿಗೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿ ಕನ್ನಡ ಯುವಶಕ್ತಿ ವೇದಿಕೆ ಹಾಗೂ ಕರೊನಾ ಸ್ವಯಂ ಸೇವಕರು ಬುಧವಾರ ಬಿಇಒ ಕಚೇರಿ ಅಧೀಕ್ಷಕ ಟಿ.ಗಿರೀಶ್‌ಗೆ ಮನವಿ ಸಲ್ಲಿಸಿದರು.

    ಸಂಘದ ಮುಖಂಡ ಕೆ.ವೀರೇಶ್ ಮಾತನಾಡಿ, ಕರೊನಾ ಭೀತಿಯಿಂದ ಮಕ್ಕಳನ್ನು ಶಾಲೆಗಳಿಗೆ ಕಳಿಸಲು ಪಾಲಕರು ಭಯಪಡುತ್ತಿದ್ದಾರೆ. ಸದ್ಯ ರಾಜ್ಯ ಸರ್ಕಾರ ಸರ್ಕಾರಿ ಶಾಲೆ ತೆರೆಯುವ ಪ್ರಯತ್ನ ಮಾಡಿಲ್ಲ. ಆದರೆ, ಖಾಸಗಿ ಶಾಲೆಗಳು ತರಗತಿ ಆರಂಭಿಸದೇ ಮಕ್ಕಳ ನೋಂದಣಿ ಮಾಡಿಸಿ ಶುಲ್ಕ ಕಟ್ಟುವಂತೆ ಫೋನ್ ಮಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ತಾಲೂಕು ಆಡಳಿತ ಮತ್ತು ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ಮುಖ್ಯಸ್ಥರ ಜತೆಗೆ ಸಭೆ ನಡೆಸಿ ಪಾಲಕರ ಗೊಂದಲ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

    ಜಿಂದಾಲ್ ತಾತ್ಕಾಲಿಕ ಸ್ಥಗಿತಗೊಳಿಸಿ: ಜಿಂದಾಲ್ ಕಾರ್ಖಾನೆ ತಾತ್ಕಾಲಿಕ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಆಶಪ್ಪ ಪೂಜಾರ್‌ಗೆ ಮನವಿ ಸಲ್ಲಿಸಲಾಯಿತು. ಕಾರ್ಖಾನೆಯ 165 ಜನರಿಗೆ ಈಗಾಗಲೆ ಕರೊನಾ ಸೋಂಕು ತಗುಲಿದೆ. ಜಿಲ್ಲೆಯ ವಿವಿಧ ತಾಲೂಕಿನಲ್ಲಿ ನೌಕರರಿದ್ದಾರೆ. ಹಳ್ಳಿಗಳಿಗೂ ವೈರಸ್ ಹರಡುವ ಸಾಧ್ಯತೆ ಇದೆ. ಆದ್ದರಿಂದ ಜನರ ಆರೋಗ್ಯ ದೃಷ್ಟಿಯಿಂದ ಜಿಲ್ಲಾಡಲಿತ ಕಾರ್ಖಾನೆ ಬಂದ್ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಮುಖಂಡರಾದ ಸಂಚಿ ಶಿವಕುಮಾರ್, ಎ.ಚಂದ್ರಶೇಖರ್, ಸಂತೋಷ ಪೂಜಾರ್, ಕೆ.ರಾಮಣ್ಣ, ಚಿಂತ್ರಪಳ್ಳಿ ನಾಗರಾಜ, ಎಂ.ಗುರುಬಸವರಾಜ, ಅವಿನಾಶ ಜಾಧವ್, ಜಿ.ಎಂ.ಜಗದೀಶ್, ಹರ್ಷಗೌಡ, ವಿನಯ್, ವೈ.ಎಂ.ರಾಜೇಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts