More

  ಕಾಡು ಪ್ರಾಣಿ, ಪಕ್ಷಿಗಳ ಮಾಂಸದಿಂದ ಆಹಾರ ತಯಾರಿಸಿ ಮಾರಾಟ ಮಾಡುತ್ತಿದ್ದ ಹೋಟೆಲ್​ ಮೇಲೆ ಅರಣ್ಯ ಅಧಿಕಾರಿಗಳ ದಾಳಿ

  ತುಮಕೂರು: ಕಾಡು ಪ್ರಾಣಿ ಹಾಗೂ ಪಕ್ಷಿಗಳ ಮಾಂಸದಿಂದ ಆಹಾರ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಅರಣ್ಯ ಅಧಿಕಾರಿಗಳು ಖಾಸಗಿ ಹೊಟೇಲ್​ ಮೇಲೆ ದಾಳಿ ನಡೆಸಿದ್ದಾರೆ.

  ಕುಣಿಗಲ್​ ತಾಲೂಕಿನ ಅಂಚೆಪಾಳ್ಯ ಸಮೀಪದಲ್ಲಿರುವ ಖಾಸಗಿ ಹೋಟೆಲ್​ ಮೇಲೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಹೋಟೆಲ್​ನಲ್ಲಿ 5 ಕೆ.ಜಿ. ಮಾಂಸ ಪತ್ತೆಯಾಗಿದ್ದು, ಮಾಂಸವನ್ನು ಪರೀಕ್ಷೆಗಾಗಿ ಹೈದ್ರಾಬಾದ್​ನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

  ಹೋಟೆಲ್​ನಲ್ಲಿ ಜಿಂಕೆ ಹಾಗೂ ನವಿಲು ಮಾಂಸದಲ್ಲಿ ಆಹಾರ ತಯಾರಿಸಿ ಗ್ರಾಹಕರಿಗೆ ಅಧಿಕ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.

  ಅರಣ್ಯ ಅಧಿಕಾರಿಗಳು ಸತೀಶ್​ ಎಂಬುವನನ್ನು ಬಂಧಿಸಿದ್ದಾರೆ. ಕುಣಿಗಲ್​ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ವಲಯ ಅರಣ್ಯ ಅಧಿಕಾರಿ ಮಂಜುನಾಥ್​ ನೇತೃತ್ವದಲ್ಲಿ ದಾಳಿ ನಡೆದಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts