More

    ಖಾಸಗಿ ಬಸ್ ರಸ್ತೆಗಿಳಿಯದೆ ಸಾರ್ವಜನಿಕರ ಪರದಾಟ

    ಹನೂರು: ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ವಾಹನ ಚಾಲಕರಿಗೆ ಕಠಿಣ ಶಿಕ್ಷೆ ಹಾಗೂ ಹೆಚ್ಚು ದಂಡದ ಕಾನೂನು ರೂಪಿಸಿರುವುದನ್ನು ಖಂಡಿಸಿ ಬುಧವಾರ ಕರೆ ನೀಡಿದ್ದ ಲಾರಿ ಹಾಗೂ ಖಾಸಗಿ ಬಸ್ ಮುಷ್ಕರದ ಹಿನ್ನೆಲೆಯಲ್ಲಿ ಹನೂರಿನಲ್ಲಿ ಖಾಸಗಿ ಬಸ್‌ಗಳು ರಸ್ತೆಗಿಳಿಯದೆ ಸಾರ್ವಜನಿಕರು ಪರದಾಡುವಂತಾಯಿತು.

    ಹನೂರು ತಾಲೂಕಿನ ಶಾಗ್ಯ, ಬಂಡಳ್ಳಿ, ಒಡೆಯರಪಾಳ್ಯ, ಪಿ.ಜಿ ಪಾಳ್ಯ, ಲೊಕ್ಕನಹಳ್ಳಿ, ಕುರಟ್ಟಿಹೊಸೂರು, ದಂಟಳ್ಳಿ, ಮಾರ್ಟಳ್ಳಿ, ಹೂಗ್ಯಂ ಹಾಗೂ ಇನ್ನಿತರ ಕಡೆಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಕಡಿಮೆ ಇದ್ದು, ಸಾರ್ವಜನಿಕರು ಖಾಸಗಿ ಬಸ್‌ಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಬಸ್ ಸೌಲಭ್ಯ ಇಲ್ಲದೆ ಪರದಾಡುವಂತಾಯಿತು. ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವಂತಾಯಿತು.

    ಕೆಎಸ್‌ಆರ್‌ಟಿಸಿ ಬಸ್ ಸಂಚರಿಸುವ ಕಡೆಗಳಲ್ಲಿ ಪ್ರಯಾಣಿಕರು ಹೆಚ್ಚಾಗಿದ್ದರಿಂದ ಸಮಸ್ಯೆ ಉಂಟಾಯಿತು. ಕೆಲವರು ರಿಕ್ಷಾಗಳನ್ನು ಅವಲಂಬಿಸಿದರು. ಕೂಡಲೂರಿನ ಶ್ರೀ ಏಳುದಂಡೆ ಮುನೇಶ್ವರಸ್ವಾಮಿ ಜಾತ್ರೆಗೆ ಸಾರ್ವಜನಿಕರು ಬಸ್ ವ್ಯವಸ್ಥೆಗಳಿಲ್ಲದೆ ರಿಕ್ಷಾ, ಬೈಕ್ ಇತರ ವಾಹನಗಳ ಮೂಲಕ ತೆರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts