More

    VIDEO: ಚೆಂಡು ಎಸೆಯುವ ಭರದಲ್ಲಿ ಪೃಥ್ವಿ ಷಾ ಮಾಡಿದ ಎಡವಟ್ಟೇನು ಗೊತ್ತಾ..?

    ಬ್ರಿಸ್ಬೇನ್: ಆಸ್ಟ್ರೇಲಿಯಾ ಪ್ರವಾಸ ಮುಂದುವರಿದಂತೆ ಭಾರತ ತಂಡದ ಗಾಯಾಳುಗಳ ಪಟ್ಟಿ ಕೂಡ ದೊಡ್ಡದಾಗಿ ಬೆಳೆಯುತ್ತಿದೆ. ಬ್ರಿಸ್ಬೇನ್‌ನಲ್ಲಿ ಶುಕ್ರವಾರ ಆರಂಭಗೊಂಡ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಬರೋಬ್ಬರಿ ನಾಲ್ಕು ಬದಲಾವಣೆಯೊಂದಿಗೆ ಅಜಿಂಕ್ಯ ರಹಾನೆ ಪಡೆ ಕಣಕ್ಕಿಳಿದಿದೆ. ಪ್ರಮುಖರ ಅನುಪಸ್ಥಿತಿಯಿಂದಾಗಿ ಅನನುಭವಿ ಬೌಲಿಂಗ್ ಪಡೆ ಆಸೀಸ್ ತಂಡವನ್ನು ಕಟ್ಟಿಹಾಕಲು ಯತ್ನಿಸುತ್ತಿದೆ. ನವದೀಪ್ ಸೈನಿ ಗಾಯದಿಂದಾಗಿ ಹೊರಹೋದ ಬಳಿಕ ಫೀಲ್ಡಿಂಗ್‌ಗಿಳಿದ ಯುವ ಆಟಗಾರ ಪೃಥ್ವಿ ಷಾ ಫೀಲ್ಡಿಂಗ್ ಮಾಡುವ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ. ಬದಲಿ ಫೀಲ್ಡರ್ ಪೃಥ್ವಿ ಷಾ, ಚೆಂಡು ಎಸೆಯುವ ಭರದಲ್ಲಿ ರೋಹಿತ್ ಶರ್ಮ ಕಡೆಗೆ ಎಸೆದಿದ್ದಾರೆ. ರೋಹಿತ್ ಶರ್ಮ ಎದೆ ಮೇಲೆ ಚೆಂಡು ಬಿದ್ದರೂ ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ. ಈ ವೇಳೆ ಕಕ್ಕಾಬಿಕ್ಕಿಯಾದಂತೆ ಕಂಡ ಪೃಥ್ವಿ ಷಾಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಲೆಳೆಯಲಾಗಿದೆ.

    ಇದನ್ನೂ ಓದಿ: ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ಟಿ.ನಟರಾಜನ್, ಆಸ್ಟ್ರೇಲಿಯಾ ತಂಡಕ್ಕೆ ಲಬುಶೇನ್ ಆಸರೆ,

    ಭಾರತದ ವೇಗಿಗಳ ಮಾರಕ ದಾಳಿಯಿಂದಾಗಿ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತ ಎದುರಿಸಿತು. ಮಾರ್ನಸ್ ಲಬುಶೇನ್, ಸ್ಟೀನ್ ಸ್ಮಿತ್, ಮ್ಯಾಥ್ಯೂ ವೇಡ್ ಆಸೀಸ್‌ಗೆ ನೆರವಾದರು. ಲಬುಶೇನ್ ಹಾಗೂ ವೇಡ್ ಜೋಡಿ 4ನೇ ವಿಕೆಟ್‌ಗೆ 113 ರನ್ ಜತೆಯಾಟವಾಡಿತು. ಈ ಜೋಡಿ ಭಾರತದ ಬೌಲರ್‌ಗಳು ಮೇಲುಗೈ ಸಾಧಿಸಲು ಅಡ್ಡಿಯಾಯಿತು. ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಲಬುಶೇನ್, ಮಿಡ್ ಆ್ನಲ್ಲಿದ್ದ ಪೃಥ್ವಿ ಷಾ ಕಡೆಗೆ ತಳ್ಳಿ ವೇಡ್ ಅವರನ್ನು ಒಂಟಿ ರನ್‌ಗೆ ಕರೆದರು. ಈ ವೇಳೆ ವೇಡ್ ಕೂಡ ರನ್ ಪೂರೈಸಿದರು. ಆದರೆ, ವೇಡ್ ಕ್ರೀಸ್ ತಲುಪಿದರೂ ಪೃಥ್ವಿ ಷಾ ರನ್‌ಔಟ್ ಮಾಡುವಂತೆ ಏಕಾಏಕಿ ಚೆಂಡನ್ನು ವಿಕೆಟ್ ಕೀಪರ್ ಕಡೆಗೆ ಎಸೆದರು. ಆದರೆ, ಅಯಾತಪ್ಪಿ ಮಧ್ಯದಲ್ಲಿದ್ದ ರೋಹಿತ್ ಶರ್ಮ ಎದೆಗೆ ಚೆಂಡು ಬಿದ್ದಿದೆ. ಚೆಂಡು ಬಿದ್ದರೂ ಯಾವುದೇ ರೀತಿ ಪ್ರತಿಕ್ರಿಯಿಸದ ರೋಹಿತ್ ಶರ್ಮ ಸುಮ್ನನಾಗಿದ್ದಾರೆ.

    ಇದನ್ನೂ ಓದಿ: VIDEO: ನೆಟ್ ಬೌಲರ್ ಕೋಟಾದಲ್ಲಿ ಆಸೀಸ್‌ಗೆ ಹೋದವ…ಈಗ ಟೀಮ್ ಇಂಡಿಯಾದ ಭರವಸೆ..!,

    ಕಳೆದ ಪಂದ್ಯದಲ್ಲಿ ಆಡಿದ್ದ ಜಸ್‌ಪ್ರೀತ್ ಬುಮ್ರಾ ಆರ್.ಅಶ್ವಿನ್, ರವೀಂದ್ರ ಜಡೇಜಾ, ಹನುಮ ವಿಹಾರಿ ಗಾಯದ ಸಮಸ್ಯೆಯಿಂದ ಹೊರಬಿದ್ದಿದ್ದಾರೆ. ಉಮೇಶ್ ಯಾದವ್, ಮೊಹಮದ್ ಶಮಿ ಹಾಗೂ ರಾಹುಲ್ ಕೂಡ ಗಾಯಕ್ಕೆ ತುತ್ತಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts