More

    ಕುಡಿಯುವ ನೀರಿಗೆ ತತ್ವಾರ

    ಮರಿದೇವ ಹೂಗಾರ ಹುಬ್ಬಳ್ಳಿ
    ಅವಳಿನಗರದಲ್ಲಿ ನೀರಿಗೆ ಹಾಹಾಕಾರ ಶುರುವಾಗಿದ್ದು, ನೀರು ಸಮರ್ಪಕವಾಗಿ ಪೂರೈಕೆ ಆಗದಿರುವುದರಿಂದ ಮಹಾನಗರ ಪಾಲಿಕೆ, ಕೆಯುಐಡಿಎಫ್‌ಸಿ ಮತ್ತು ಎಲ್‌ಆ್ಯಂಡ್‌ಟಿ ಕಂಪನಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


    ಹುಬ್ಬಳ್ಳಿ-ಧಾರವಾಡದ ಜಲಮೂಲ ಆಗಿರುವ ಸವದತ್ತಿಯ ನವಿಲುತೀರ್ಥ ಜಲಾಶಯ ಮತ್ತು ನೀರಸಾಗರ ಜಲಾಶಯದಲ್ಲಿನ ಸಾಕಷ್ಟು ಪ್ರಮಾಣದಲ್ಲಿ ನೀರಿನ ಸಂಗ್ರಹವಿದೆ. ಆದರೂ, ನೀರಿನ ಸಮಸ್ಯೆ ಉಂಟಾಗಲು ನಿರ್ವಹಣೆಯಲ್ಲಿನ ವೈಫಲ್ಯ ಮುಖ್ಯ ಕಾರಣವಾಗಿದೆ.


    ಈ ಮೊದಲು ವಾರ್ಡ್‌ವಾರು ನಿಗದಿತ ದಿನದಂದು (ಚೈನ್‌ಲಿಂಕ್) ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ, ಈ ವ್ಯವಸ್ಥೆ ವಿಧಾನಸಭಾ ಚುನಾವಣೆ ವೇಳೆ ಈ ವ್ಯವಸ್ಥೆ ತಪ್ಪಿದ ಪರಿಣಾಮ ಕುಡಿಯುವ ನೀರಿಗಾಗಿ ನಾಗರಿಕರು ಪರಿತಪಿಸುವಂತಾಗಿದೆ.

    ನವಿಲುತೀರ್ಥ ಜಲಾಶಯದಿಂದ ಅವಳಿ ನಗರಕ್ಕೆ ನಿತ್ಯ 224 ಎಂಎಲ್‌ಡಿ (ದಶಲಕ್ಷ ಲೀಟರ್) ನೀರು ಪಂಪ್ ಮಾಡಲಾಗುತ್ತಿತ್ತು. ಈಗ ಇದರ ಪ್ರಮಾಣ 215 ಎಂಎಲ್‌ಡಿಗೆ ಇಳಿಕೆ ಆಗಿದೆ. ನೀರಸಾಗರ ಜಲಾಶಯದಿಂದಲೂ ನಿತ್ಯ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ. 24್ಡ7 ಪೂರೈಕೆ ಆಗುವ ವಾರ್ಡ್‌ಗಳಲ್ಲಿಯೇ 3 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲವೆಡೆ 8 ರಿಂದ 10 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.


    ನಿರಂತರ ನೀರು ಪೂರೈಕೆ ನಿರ್ವಾಹಕರಾದ ಲಾರ್ಸನ್ ಆ್ಯಂಡ್ ಟುಬ್ರೂ (ಎಲ್ ಆ್ಯಂಡ್ ಟಿ) ಕಂಪನಿ ಮೇಲಿಂದ ಮೇಲೆ ಸಮಸ್ಯೆ ಹುಟ್ಟು ಹಾಕುತ್ತಿದೆ. ಯಾವ ವಾರ್ಡ್‌ಗಳಿಗೆ ಎಷ್ಟು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಬೇಕೆಂಬ ಲೆಕ್ಕಾಚಾರದ ಪುಸ್ತಕ ಇದ್ದರೂ ಕಡೆಗಣಿಸಿದ್ದಾರೆ. ಒಟ್ಟಿನಲ್ಲಿ ಸರಿಯಾಗಿ ನೀರು ಪೂರೈಕೆ ಆಗದ್ದಕ್ಕೆ ನಾಗರಿಕರು ಸಮಸ್ಯೆ ಅನುಭವಿಸುವಂತಾಗಿದೆ.


    ಪೂರೈಸುವ ನೀರು ಕಲುಷಿತ


    ಕೆಲ ವಾರ್ಡ್‌ಗಳಲ್ಲಿ ತಡವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೂ, ನೀರು ಕಲುಷಿತಗೊಂಡಿರುತ್ತದೆ. ನೀರು ಕುಡಿದ ಜನರಲ್ಲಿ ಗಂಟಲು ಕೆರೆತ, ವಾಂತಿ-ಭೇದಿಯಂತಹ ಸಮಸ್ಯೆ ಕಂಡುಬಂದಿವೆ. ನೀರು ಇಲ್ಲ ಎನ್ನುವುದು ಒಂದೆಡೆಯಾದರೆ, ಜನರು ರೋಗ-ರುಜಿನಗಳಿಗೆ ತುತ್ತಾಗುವಂತಾಗುವುದು ಇನ್ನೊಂದೆಡೆ

    ಎಲ್ ಆ್ಯಂಡ್ ಟಿ ಅವರು ಸಮಸ್ಯೆ ಬಗೆಹರಿಸಿ ಸರಾಗವಾಗಿ ನೀರು ಹರಿಸುತ್ತಾರೆ ಎಂದುಕೊಂಡಿದ್ದೆವು. ಮೇಲಿಂದ ಮೇಲೆ ಅವಳಿ ನಗರದಲ್ಲಿ ನೀರು ಪೂರೈಕೆಯಲ್ಲಿ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಸದ್ಯ ಜಲಮಂಡಳಿ ಸಿಬ್ಬಂದಿಗೆ ಸರಿಯಾಗಿ ನೀರು ಪೂರೈಕೆ ಮಾಡಲು ಸೂಚಿಸಿದ್ದೇವೆ. ಇನ್ನು ಮುಂದೆ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಲಾಗುವುದು.
    ಈರೇಶ ಅಂಚಟಗೇರಿ ಮಹಾಪೌರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts