More

    ಆಯುಷ್ಮಾನ್​ ಭಾರತ್​ ಯೋಜನೆಯನ್ನು ಅನುಷ್ಠಾನಗೊಳಿಸದ ದೆಹಲಿ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿ…

    ನವದೆಹಲಿ: ಈ ದೇಶದಲ್ಲಿ ಬಿಜೆಪಿ ಪರವಾಗಿ ಇರುವ ಅಲೆ ಅನೇಕ ಜನರ ನಿದ್ದೆ ಕೆಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದರು.

    ದೆಹಲಿ ಚುನಾವಣೆ ನಿಮಿತ್ತ ದ್ವಾರಕಾದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ದೆಹಲಿಯಲ್ಲಿಯೂ ಬಿಜೆಪಿಗೆ ಜನರು ಅಭೂತಪೂರ್ವ ಬೆಂಬಲ ನೀಡುತ್ತಿರುವುದನ್ನು ಕಳೆದ ನಾಲ್ಕು ದಿನಗಳಿಂದ ನೋಡುತ್ತಿದ್ದೇನೆ. ಬಿಜೆಪಿ ಪರ ಅಲೆಯಿಂದಾಗಿ ಹಲವು ಜನರಿಗೆ ನೆಮ್ಮದಿಯಿಂದ ನಿದ್ದೆ ಮಾಡಲಾಗುತ್ತಿಲ್ಲ ಎಂದು ಪರೋಕ್ಷವಾಗಿ ಪ್ರತಿಪಕ್ಷಗಳನ್ನು ಟೀಕಿಸಿದರು.

    ದೆಹಲಿಯ ಆಮ್​ ಆದ್ಮಿ ಪಕ್ಷದ ಸರ್ಕಾರ ಕೇಂದ್ರ ಸರ್ಕಾರದ ಬಡವರ ಪರ ಯೋಜನೆಯಾದ ಆಯುಷ್ಮಾನ್​ ಭಾರತ್​ವನ್ನು ಸ್ಥಗಿತಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು. ಅಲ್ಲದೆ ಫೆ.11ರ ನಂತರ ಆಯುಷ್ಮಾನ್​ ಭಾರತ್​ ಮತ್ತೆ ಅನುಷ್ಠಾನಗೊಳ್ಳುತ್ತದೆ ಎಂದು ಹೇಳುವ ಮೂಲಕ ದೆಹಲಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.

    ಅಷ್ಟೊಂದು ಒಳ್ಳೆಯ, ಅನುಕೂಲಕರ ಆಯುಷ್ಮಾನ್​ ಭಾರತ್​ ಯೋಜನೆಯನ್ನು ದೆಹಲಿಯ ಸರ್ಕಾರ ಕೈಬಿಟ್ಟಿದೆ. ಈ ಸರ್ಕಾರಕ್ಕೆ ಜನರ ಒಳಿತು ಮುಖ್ಯವಲ್ಲ ಎಂದರು.

    ದೆಹಲಿಯಲ್ಲಿ ಬೇರೊಬ್ಬರನ್ನು ದೂಷಿಸುತ್ತ ಕಾಲಹರಣ ಮಾಡುವ, ದ್ವೇಷ ರಾಜಕಾರಣ ಮಾಡುವ ಸರ್ಕಾರದ ಅಗತ್ಯವಿಲ್ಲ. ಬಡವರಿಗಾಗಿ ಕೆಲಸ ಮಾಡುವ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಮೋದಿ ಹೇಳಿದರು.
    ದೆಹಲಿಯ ಮೆಟ್ರೋ ಜಾಲವನ್ನು ವಿಸ್ತರಿಸಲು ನಮ್ಮ ಸರ್ಕಾರ ಯೋಜನೆ ರೂಪಿಸಿದೆ. ಈ ನಗರವನ್ನು ಸುಂದರ ಮತ್ತು ಸುರಕ್ಷಿತ ಮಾಡುವುದು ನಮ್ಮ ಗುರಿ ಎಂದರು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts