More

    ರೇವಾದಲ್ಲಿನ ಸೋಲಾರ್​ ಘಟಕವನ್ನು ರಾಷ್ಟ್ರಕ್ಕೆ ಅರ್ಪಿಸಿದ ಪ್ರಧಾನಿ ಮೋದಿ

    ನವದೆಹಲಿ: ಮಧ್ಯಪ್ರದೇಶದ ರೇವಾದಲ್ಲಿ ಅಳವಡಿಸಲಾಗಿರುವ 750 ಮೆಗವ್ಯಾಟ್​ ಸೋಲಾರ್ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಅರ್ಪಿಸಿದರು.

    ವಿಡಿಯೋ ಕಾನ್ಫರೆನ್ಸ್​ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ರೇವಾದಲ್ಲಿನ ಸೌರಶಕ್ತಿ ಘಟಕದಿಂದ ಕೇವಲ ಇಂಡಸ್ಟ್ರಿಗಳಿಗೆ ಮಾತ್ರ ವಿದ್ಯುತ್ ದೊರೆಯುವುದಿಲ್ಲ. ಇದರಿಂದ ದೆಹಲಿಯ ಮೆಟ್ರೋ ರೈಲು ಸಹ ಲಾಭವನ್ನು ಪಡೆದುಕೊಳ್ಳಲಿದೆ. ರೇವಾ ಹೊರತಾಗಿ, ಸಹಜಾಪುರ, ನೀಮುಚ್​ ಮತ್ತು ಛತರ್​ಪುರದಲ್ಲಿಯೂ ಸೌರಶಕ್ತಿ ಘಟಕ ಸ್ಥಾಪನೆ ಕಾರ್ಯ ನಡೆಯುತ್ತಿದೆ ಎಂದರು.

    ಇದನ್ನೂ ಓದಿ: VIDEO| ಸುಮಾರು 10 ಅಡಿ ಉದ್ದದ ನಿಗೂಢ ಜೀವಿ ನೋಡಿ ಬೆಚ್ಚಿಬಿದ್ದ ಗ್ರಾಮಸ್ಥರು!

    ಸೋಲಾರ್​ ಶಕ್ತಿ ಸದ್ಯಕ್ಕೆ ಮಾತ್ರವಲ್ಲ, ಇದು 21 ನೇ ಶತಮಾನದ ಶಕ್ತಿಯ ಅಗತ್ಯಗಳ ಮಾಧ್ಯಮವಾಗಲಿದೆ. ಏಕೆಂದರೆ ಸೌರಶಕ್ತಿ ಖಚಿತ, ಶುದ್ಧ ಮತ್ತು ಸುರಕ್ಷಿತವಾಗಿದೆ ಎಂದರು.

    ನಿಜವಾಗಿಯೂ ರೇವಾ ಇಂದು ಇತಿಹಾಸವನ್ನು ಸೃಷ್ಟಿಸುತ್ತಿದೆ. ಈಗಾಗಲೇ ರೇವಾವನ್ನು ತಾಯಿ ನರ್ಮದಾ ಹೆಸರು ಮತ್ತು ಬಿಳಿ ಹುಲಿಯೊಂದಿಗೆ ಗುರುತಿಸಲಾಗಿದೆ. ಇದೀಗ ಏಷ್ಯಾದ ಅತಿದೊಡ್ಡ ಸೌರಶಕ್ತಿ ಯೋಜನೆಯ ಹೆಸರನ್ನು ಕೂಡ ಸೇರಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಉದ್ಘಾಟನಾ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ಸೇರಿದಂತೆ ಅನೇಕ ಕೇಂದ್ರ ಸಚಿವರು ಉಪಸ್ಥಿತರಿದ್ದರು. (ಏಜೆನ್ಸೀಸ್​)

    ಇದನ್ನೂ ಓದಿ: ಚೀನಾ ವಿರುದ್ಧದ ಪ್ರಧಾನಿ ಮೋದಿ ಅವರ ಗಟ್ಟಿ ನಿಲುವು ಹೆಮ್ಮೆಯ ಸಂಗತಿ

    ದುಬೆ ಜೀವ ಉಳಿಸಲು ನಿನ್ನೆಯೇ ಕೋರ್ಟ್‌ಗೆ ಸಲ್ಲಿಸಲಾಗಿತ್ತು ಅರ್ಜಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts