More

    ಚೀನಾ ವಿರುದ್ಧದ ಪ್ರಧಾನಿ ಮೋದಿ ಅವರ ಗಟ್ಟಿ ನಿಲುವು ಹೆಮ್ಮೆಯ ಸಂಗತಿ

    ವಾಷಿಂಗ್ಟನ್​: ಲಡಾಖ್​ ಬಿಕ್ಕಟ್ಟಿನ ವಿಷಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಚೀನಾದ ವಿರುದ್ಧ ಅತ್ಯಂತ ಗಟ್ಟಿಯ ನಿಲುವು ತೆಳೆದರು ಇದು ಹೆಮ್ಮೆಯ ಸಂಗತಿ ಎಂದು ಅಮೆರಿಕದ ಸಂಸತ್​ ಸದಸ್ಯ ಜಾನ್​ ಕೆನಡಿ ಹೇಳಿದ್ದಾರೆ.

    ಲಡಾಖ್​ನಲ್ಲಿ ಬಿಕ್ಕಟ್ಟು ಉಂಟಾಗಿ ಗಲ್ವಾನ್​ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಯೋಧರ ನಡುವೆ ಜೂ.15ರಂದು ರಕ್ತಸಿಕ್ತ ಘರ್ಷಣೆ ನಡೆದು ಭಾರತದ 20 ಯೋಧರು ಹುತಾತ್ಮರಾದ ಹಲವು ದಿನಗಳ ಬಳಿಕ ಕೆನಡಿ ಈ ಹೇಳಿಕೆ ನೀಡಿದ್ದಾರೆ. ಜತೆಗೆ ಚೀನಾ ವಿರುದ್ಧದ ಹೋರಾಟದಲ್ಲಿ ಅದರ ವಿರೋಧಿ ರಾಷ್ಟ್ರಗಳೆಲ್ಲವೂ ಒಂದಾಗಬೇಕು ಎಂದು ಕರೆ ನೀಡಿದ್ದಾರೆ.

    ಚೀನಾದ ಸವಾಲಿಗೆ ಭಾರತದ ಪ್ರಧಾನಿ ಮೋದಿ ಸ್ಪಂದಿಸಿದ ರೀತಿ ಅಮೋಘವಾಗಿತ್ತು. ಇದೀಗ ಕೆನಡಾದ ಪ್ರಧಾನಿ ಕೂಡ ಚೀನಾದ ಕುತ್ಸಿತ ಬುದ್ಧಿಯನ್ನು ಜಗತ್ತಿನೆದುರು ಅನಾವರಣಗೊಳಿಸಿದೆ. ಇದು ಕೂಡ ಹೆಮ್ಮೆಯ ವಿಷಯ. ಚೀನಾ ವಿರುದ್ಧದ ಅಸಮಾಧಾನವನ್ನು ಹೊರಹಾಕಲು ಯಾವುದೇ ರಾಷ್ಟ್ರಗಳು ಹಿಂದೇಟು ಹಾಕುತ್ತಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಎನ್​ಕೌಂಟರ್​ ಭೀತಿಯಲ್ಲಿ 3 ರಾಜ್ಯಗಳ ಪೊಲೀಸರ ಎದುರು ಶರಣಾಗತಿಯ ಪ್ರಸ್ತಾಪ ಇರಿಸಿದ್ದ ವಿಕಾಸ್ ದುಬೆ​

    ಅಮೆರಿಕ ಅಲ್ಲದೆ ಚೀನಾದ ಬಗ್ಗೆ ಇನ್ನೆಷ್ಟು ರಾಷ್ಟ್ರಗಳು ಅದೆಂಥ ನಂಬಿಕೆ ಹೊಂದಿವೆ ಎಂಬುದು ನಿಮಗೇ ಗೊತ್ತಾಗುತ್ತದೆ ಅಲ್ಲವೇ? ಈಗ ಅವರಲ್ಲಿ ನಡುಕ ಉಂಟಾಗಿದೆ. ಚೀನಾ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿ. ತನ್ನ ಈ ಬಲವನ್ನು ಬಳಸಿಕೊಂಡು ಇತರೆ ರಾಷ್ಟ್ರಗಳನ್ನು ಹಣಿಯಲು ಅದು ಪ್ರಯತ್ನಿಸುತ್ತದೆ. ಹಾಗಾಗಿ ಕೆಲವು ರಾಷ್ಟ್ರಗಳು ಅದರ ವಿರುದ್ಧ ಸಿಡಿದೇಳಲು ಹಿಂದೇಟು ಹಾಕುತ್ತಿವೆ ಎಂದು ಹೇಳಿದ್ದಾರೆ.

    ಹಾಗೆಂದು ಎಲ್ಲ ರಾಷ್ಟ್ರಗಳು ಅದರ ಬಗ್ಗೆ ಹೆದರಿಕೆ ಹೊಂದಿವೆ ಎಂದಲ್ಲ. ಅದಕ್ಕೆ ಅಂಜದೆ, ಇರುವುದನ್ನು ಇರುವ ಹಾಗೆ ಹೇಳುವ ರಾಷ್ಟ್ರಗಳು ಕೂಡ ಇವೆ. ಆಸ್ಟ್ರೇಲಿಯಾ, ಭಾರತ, ಕೆನಡಾ ಅದರ ವಿರುದ್ಧ ಸಿಡಿದೆದ್ದಿವೆ. ಯುರೋಪ್​ ಅಲ್ಲದೆ ಇನ್ನಿತರ ನಮ್ಮ ಸ್ನೇಹಿತ ರಾಷ್ಟ್ರಗಳು ಕೂಡ ಒಂದಾಗಿ ಚೀನಾಕ್ಕೆ, ಏನೇ ಇದ್ದರೂ ನಿಯಮ ಬದ್ಧವಾಗಿ ವ್ಯವಹಾರ ಮಾಡು. ಇಲ್ಲವಾದಲ್ಲಿ ನಿನ್ನೊಂದಿಗೆ ವ್ಯವಹರಿಸುವುದಿಲ್ಲ ಎಂದು ಹೇಳಬೇಕು. ಆಗ ಚೀನಾಕ್ಕೆ ತನ್ನ ತಪ್ಪಿನ ಅರಿವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.

    ಇದನ್ನೂ ಓದಿ: ಗ್ಯಾಂಗ್​​ಸ್ಟರ್​ ವಿಕಾಸ್​ ದುಬೆ ಎನ್​ಕೌಂಟರ್​ಗೂ ಮುನ್ನ ಸ್ಥಳದಲ್ಲಿ ನಡೆದಿತ್ತು ಭಾರಿ ಹೈಡ್ರಾಮ!

    ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಹಾಗೂ ಚೀನಾ ಕಮ್ಯುನಿಸ್ಟ್​ ಪಾರ್ಟಿಯ ಮುಖಂಡರು ಠಕ್ಕರ ಗುಂಪಿನವರಂತೆ ಕಾಣುತ್ತಿದ್ದಾರೆ. ಈ ಗುಂಪಿನ ಆಟಾಟೋಪಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತಡೆಹಾಕಬೇಕಿದೆ. ಜಾಗತಿಕ ಸ್ಥಿರತೆ ಸಾಧಿಸುವ ನಿಟ್ಟಿನಲ್ಲಿ ಚೀನಾ ಅತ್ಯಂತ ಜವಾಬ್ದಾರಿಯುತ ರಾಷ್ಟ್ರದ ಪಾತ್ರವನ್ನು ನಿರ್ವಹಿಸಬೇಕು ಎಂಬುದು ಅಮೆರಿಕದ ಬಯಕೆಯಾಗಿದೆ ಎಂದು ಹೇಳಿದ್ದಾರೆ.

    ಅಂದರೆ, ಚೀನಾ ಮೊದಲು ವಂಚಿಸುವುದನ್ನು, ಬೌದ್ಧಿಕ ಆಸ್ತಿಗಳ ಕಳ್ಳತನವನ್ನು ನಿಲ್ಲಿಸಬೇಕು. ಅವರ ಮಾರುಕಟ್ಟೆಗಳನ್ನು ಮುಕ್ತಗೊಳಿಸಬೇಕು. ದಕ್ಷಿಣ ಚೀನಾ ಮಹಾಸಾಗರದಲ್ಲಿ ದ್ವೀಪಸಮೂಹಗಳ ಅತಿಕ್ರಮಣವನ್ನು ಕೊನೆಗೊಳಿಸಬೇಕು. ಆಸ್ಟ್ರೇಲಿಯಾವನ್ನು ಲೇವಡಿ ಮಾಡುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.

    ‘ಕಾರು ಉರುಳಿದ್ದಲ್ಲ, ಸರ್ಕಾರ ಉರುಳದಿರಲು ಡ್ರಾಮಾ’: ದುಬೆ ಎನ್‌ಕೌಂಟರ್‌ಗೆ ಪ್ರತಿಕ್ರಿಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts