More

    ಪ್ರಧಾನಿ ನರೇಂದ್ರ ಮೋದಿ ಮೇ 7ಕ್ಕೆ ಆಯನೂರಿಗೆ

    ಆಯನೂರು: ಪ್ರಧಾನಿ ನರೇಂದ್ರ ಮೋದಿ ಅವರು ಮೇ 7ರಂದು ಆಯನೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದು, ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಆಯನೂರಿನಲ್ಲಿ ಶನಿವಾರ ಪ್ರಧಾನಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ವೇದಿಕೆ ನಿರ್ಮಾಣಕ್ಕೆ ಶಾಸಕರಾದ ಕೆ.ಎಸ್.ಈಶ್ವರಪ್ಪ, ಕೆ.ಬಿ.ಅಶೋಕ್ ನಾಯ್ಕ ಭೂಮಿ ಪೂಜೆ ನೆರವೇರಿಸಿದರು.

    ಆಯನೂರಿನಲ್ಲಿ ನಡೆಯುವ ಸಮಾವೇಶದ ಸ್ಥಳಕ್ಕೆ 4 ಗಂಟೆ ಸುಮಾರಿಗೆ ಶಿವಮೊಗ್ಗದಿಂದ ಪ್ರಧಾನಿ ಆಗಮಿಸುವರು. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ತರೀಕೆರೆ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಜನರು ಭಾಗವಹಿಸುವರು. ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮೇ 7 ಕಡೆಯ ದಿನವಾಗಿದ್ದು ರಾಜ್ಯಕ್ಕೆ ಪ್ರೇರಣೆ ನೀಡುವ ಸಂದೇಶವನ್ನು ಪ್ರಧಾನಿ ನೀಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ತಿಳಿಸಿದರು.
    ಮೋದಿ ಅವರು ಚುನಾವಣಾ ಪ್ರಚಾರ ನಡೆಸಲು ಗ್ರಾಮಾಂತರ ಕ್ಷೇತ್ರಕ್ಕೆ ಆಗಮಿಸುತ್ತಿರುವುದು ಸಂತೋಷದ ವಿಚಾರ. ಸುಮಾರು 3 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ಇದಕ್ಕೆ ಬೇಕಾದ ತಯಾರಿಯನ್ನು ನಡೆಸಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ, ಶಾಸಕ ಅಶೋಕ್ ನಾಯ್ಕ ಹೇಳಿದರು.
    ಭಾನುವಾರದಿಂದಲೇ ವೇದಿಕೆ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದ್ದು ಮಿನಿ ಹೆಲಿಪ್ಯಾಡ್, ಸಾರ್ವಜನಿಕರಿಗೆ ಆಸನದ ವ್ಯವಸ್ಥೆ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಅತಿಥಿ ಗಣ್ಯರು ಹಾಗೂ ಸಾರ್ವಜನಿಕರು ವೇದಿಕೆ ಆಗಮಿಸಲು ಮಾರ್ಗದ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಗೆ ಪ್ಲಾನ್ ಮಾಡಲಾಗಿದೆ. ಹಿರಿಯರ ಮಾರ್ಗದರ್ಶನದಲ್ಲಿ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದರು.
    ಸಮಾವೇಶಕ್ಕೆ ಸ್ಥಳ ನೀಡಿದ ಧರ್ಮಣ್ಣ, ಲಚ್ಚಾನಾಯ್ಕಾ, ಶಂಕರನಾಯ್ಕ, ಪ್ರಹ್ಲಾದ್, ಪದ್ಮಾನಾಯ್ಕಾ, ನಾನ್ಯಾ ನಾಯ್ಕ, ಜವರೇಗೌಡ, ನವಾಜ್ ಜಾನ್ ಸಾಬ್, ತನು, ಕೇಶವ ನಾಯರ್, ಭೀಮಾನಾಯ್ಕ ಅವರನ್ನು ಸನ್ಮಾನಿಸಲಾಯಿತು.
    ಮಾಜಿ ಎಂಎಲ್ಸಿ ಸಿದ್ದರಾಮಣ್ಣ, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ವಿಭಾಗ ಸಹ ಸಂಘಟನಾ ಕಾರ್ಯದರ್ಶಿ ನಟರಾಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್, ಜಿಲ್ಲಾ ಕಾರ್ಯದರ್ಶಿ ಕುಪೇಂದ್ರ, ಒಬಿಸಿ ಜಿಲ್ಲಾಧ್ಯಕ್ಷ ಮಾಲತೇಶ್, ಪ್ರಭಾಕರ, ತಮ್ಮಡಿಹಳ್ಳಿ ನಾಗರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts