More

    ಪ್ರಧಾನಿಯಿಂದ ಭ್ರಷ್ಟಾಚಾರ ರಹಿತ ಆಡಳಿತ

    ಚಿಕ್ಕೋಡಿ: ಕೇಂದ್ರ ಬಿಜೆಪಿ ಸರ್ಕಾರದ ಆರು ವರ್ಷಗಳಲ್ಲಿ ಭ್ರಷ್ಟಾಚಾರ ರಹಿತ ಸ್ವಚ್ಛ ಆಡಳಿತ ನೀಡಿದ ಕೀರ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದ್ದಾರೆ.

    ಪಟ್ಟಣದ ಸಿಎಇಲ್ ಸಂಸ್ಥೆಯ ಸಭಾಗೃಹದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಭಯೋತ್ಪಾದಕತೆ, ಕೋಮುಗಲಭೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಮೋದಿ ಆಡಳಿತ ನಡೆಸಿದ್ದಾರೆ ಎಂದರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಎಲ್ಲ ಗ್ರಾಮ ಪಂಚಾಯಿತಿಗಳನ್ನು ಡಿಜಿಟಲೀಕರಣ ಮಾಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಮನೆ, ಮನೆಗೆ ಮುಟ್ಟಿಸುವ ಕೆಲಸ ಮಾಡಿದ್ದಾರೆ. 3973 ಕಿಮೀ ರಸ್ತೆ ನಿರ್ಮಿಸಿ ದಾಖಲೆ ಮಾಡಿದ್ದಾರೆ ಎಂದ ಅವರು, ಜನೌಷಧ ಕೇಂದ್ರ, ಪೌರತ್ವ ಕಾಯ್ದೆ ಜಾರಿ, ಅಯೋಧ್ಯಾ ತೀರ್ಪು, ಉಡಾನ್ ಯೋಜನೆ, 1.04 ಕೋಟಿ ಮನೆ ನಿರ್ಮಾಣ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದರು.

    ಕೋವಿಡ್-19 ಸಂದರ್ಭದಲ್ಲಿ ಜನಸಾಮಾನ್ಯರ ರಕ್ಷಣೆ ಮಾಡುವ ಮೂಲಕ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಕರೊನಾ ಕಷ್ಟಕಾಲದಲ್ಲಿ 20 ಲಕ್ಷ ಕೋಟಿ ರೂ.ವಿಶೇಷ ಪ್ಯಾಕೇಜ್ ನೀಡಿ, ಆತ್ಮನಿರ್ಭರ ಯೋಜನೆ ಮೂಲಕ ಜನರೊಂದಿಗೆ ಸರ್ಕಾರವಿದೆ ಎಂಬ ಸಂದೇಶವನ್ನು ಪ್ರಧಾನಿ ನೀಡಿದ್ದಾರೆ ಎಂದು ತಿಳಿಸಿದರು. ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ, ರಾಜ್ಯ ಬಿಜೆಪಿ ಕೃಷಿ ಮೋರ್ಚಾ ಸದಸ್ಯ ಮಹೇಶ ಭಾತೆ ಇತರರಿದ್ದರು.

    ಡಾ.ಕೋರೆ ರಾಜ್ಯಸಭಾ ಸದಸ್ಯರಾಗುವುದು ನಿಶ್ಚಿತ

    ಕಳೆದ ಲೋಕಸಭೆ ಚುನಾವಣೆಗೆ ಡಾ.ಪ್ರಭಾಕರ ಅವರು ಕೋರೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಅಂದು ಸಿಎಂ ಬಿ.ಎಸ್. ಯಡಿಯೂರಪ್ಪನವರು ಡಾ. ಕೋರೆ ಅವರನ್ನು ಮತ್ತೊಮ್ಮೆ ರಾಜ್ಯಸಭಾ ಸದಸ್ಯರನ್ನಾಗಿಸುವುದಾಗಿ ಹೇಳಿದ್ದರು. ಅದರಂತೆ ಈ ಬಾರಿ ಡಾ. ಕೋರೆ ಅವರು ರಾಜ್ಯಸಭಾ ಸದಸ್ಯರಾಗಲಿದ್ದಾರೆ ಎಂದು ಮಹಾಂತೇಶ ಕವಟಗಿಮಠ ಹೇಳಿದ್ದಾರೆ. ಕೋರೆ ಅವರು ಬೆಳಗಾವಿಯನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ ಎಂದು ಅಮೃತಸರದಲ್ಲಿ ಮಾಜಿ ಸಚಿವ ದಿವಂತಗ ಅರುಣ ಜೇಟ್ಲಿ ಹೇಳಿದ ಮಾತನ್ನು ನೆನಪಿಸಿ, ಕೋರೆ ಅವರು ರಾಜ್ಯಸಭಾ ಸದಸ್ಯರಾಗುವುದು ನಿಶ್ಚಿತ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts