More

    ಮಕ್ಕಳೇ, ಸ್ಕೂಲಿಗೆ ರೆಡಿಯಾಗಿ! ಅ.25 ರಿಂದ ಪ್ರಾಥಮಿಕ ಶಾಲೆಗಳೂ ಶುರು

    ಬೆಂಗಳೂರು: ಕೋವಿಡ್​ನಿಂದಾಗಿ ಮಾರ್ಚ್​ 2020ರಲ್ಲಿ ಪ್ರಾಥಮಿಕ ಶಾಲೆಗಳ ಭೌತಿಕ ತರಗತಿಗಳಿಗೆ ಬಿದ್ದಿದ್ದ ಲಾಕ್​ ಇದೀಗ ತೆರೆಯಲಿದೆ. ಬರೋಬ್ಬರಿ ಒಂದೂವರೆ ವರ್ಷದ ಬ್ರೇಕ್​ನ ಬಳಿಕ ಅಕ್ಟೋಬರ್ 25 ರಿಂದ 1ನೇ ಇಯತ್ತೆಯಿಂದ 5ನೇ ಇಯತ್ತೆಯವರೆಗಿನ ವಿದ್ಯಾರ್ಥಿಗಳಿಗೆ ಮತ್ತೆ ಶಾಲೆಗಳ ಬಾಗಿಲು ತೆರೆಯಲಿವೆ.

    ಅ.25ರಿಂದ ಒಂದು ವಾರದ ಕಾಲ ಪುಟಾಣಿ ಮಕ್ಕಳಿಗೆ ಕೋವಿಡ್ ಮಾರ್ಗಸೂಚಿ ಕುರಿತು ತರಬೇತಿ ನೀಡಲು, 1 ರಿಂದ 5ನೇ ತರಗತಿಗಳಿಗೆ ಅರ್ಧ ಮಾತ್ರ ಪಾಠ-ಪ್ರವಚನ ಮಾಡಲಾಗುತ್ತದೆ. ನಂತರ ನವೆಂಬರ್ 1 ರಿಂದ ಪೂರ್ಣ ಪ್ರಮಾಣದಲ್ಲಿ ಭೌತಿಕ ತರಗತಿಗಳು ಆರಂಭವಾಗುತ್ತವೆ ಎಂದು ರಾಜ್ಯ ಶಿಕ್ಷಣ ಇಲಾಖೆ ತಿಳಿಸಿದೆ. ಅಕ್ಟೋಬರ್ 25 ರಂದು ಶಾಲೆ ಆರಂಭಕ್ಕೆ ದಿನಾಂಕ ಫಿಕ್ಸ್ ಆಗಿದ್ದು, ಶಿಕ್ಷಣ ಇಲಾಖೆಯು ಈ ನಿಟ್ಟಿನಲ್ಲಿ ಮಾರ್ಗಸೂಚಿಗಳೊಂದಿಗೆ ಆದೇಶ ಹೊರಡಿಸಿದೆ.

    ಇದನ್ನೂ ಓದಿ: ಡಿ.15ರೊಳಗೆ ಕಾಮಗಾರಿ ಪೂರ್ಣಗೊಳಿಸಿ; ಶಾಸಕ ಕೆ.ಶಿವನಗೌಡ ನಾಯಕ ಗಡುವು

    ಬಿಸಿಯೂಟ ಇಲ್ಲ: ಕೋವಿಡ್ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪುಟಾಣಿ ಮಕ್ಕಳಿಗೆ ಬಿಸಿಯೂಟ ನೀಡುವುದಕ್ಕೆ ತಡೆ ವಿಧಿಸಲಾಗಿದೆ. ನವೆಂಬರ್ ನಂತರ ಇವರಿಗೂ ಬಿಸಿಯೂಟ ಯೋಜನೆ ವಿಸ್ತರಣೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಠಿಣ ನಿಯಮಗಳ ಪಾಲನೆಯೊಂದಿಗೆ ಪುಟಾಣಿಗಳ ಶಾಲೆ ಶುರುವಾಗುತ್ತಿದೆ. ಹೀಗಿರಲಿದೆ, ಪ್ರೈಮರಿ ಸ್ಕೂಲ್ ಗೈಡ್ ಲೈನ್ಸ್ –

    • ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ. ಆನ್​ಲೈನ್ ಮತ್ತು ಆಫ್​ಲೈನ್ ಎರಡೂ ತರಗತಿಗೂ ಅವಕಾಶವಿರುತ್ತದೆ.
    • ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರವೇ ಶಾಲೆಗಳು ಓಪನ್. ಇನ್ನುಳಿದ ಎರಡು ದಿನ ಶಾಲೆ ಕೊಠಡಿಗಳ ಸ್ವಚ್ಛತಾ ಕಾರ್ಯ, ಸ್ಯಾನಿಟೈಸೇಷನ್​ಗೆ ಅವಕಾಶ
    • ಮೊದಲಿಗೆ, ಶೇ.50 ರಷ್ಟು ಹಾಜರಾತಿಯಲ್ಲಿ ತರಗತಿ ನಡೆಸಲು ಅವಕಾಶ. ಒಂದು ದಿನ ತರಗತಿ ಒಂದು ದಿನ ರಜೆ
    • ಪಾಸಿಟಿವಿಟಿ ಶೇ.1ಕ್ಕಿಂತ ಕಡಿಮೆ ಇರುವ ಜಿಲ್ಲೆ, ತಾಲೂಕು, ವಲಯಗಳಲ್ಲಿ ಮಾತ್ರ ಶಾಲೆ ಆರಂಭ
    • ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ. ಒಪ್ಪಿಗೆ ಪತ್ರದಲ್ಲಿ ವಿದ್ಯಾರ್ಥಿಗೆ ಕೋವಿಡ್ ಸೋಂಕು ಇಲ್ಲದೆ ಇರೋದನ್ನ ಪೋಷಕರು ಧೃಢೀಕರಿಸಬೇಕು
    • ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು
    • 15 ರಿಂದ 20 ಮಕ್ಕಳ ತಂಡ ರಚಿಸಿ ಮಕ್ಕಳಿಗೆ ಪಾಠ ಮಾಡಬೇಕು
    • ಎರಡು ಡೋಸ್ ಪಡೆದ ಶಿಕ್ಷಕರಿಗೆ ಮಾತ್ರ ಪಾಠ ಮಾಡಲು ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts