More

    ಶಿಕ್ಷಕರ ನೇಮಕಾತಿ ಕರಡು ನಿಯಮ ಬದಲಾಗಲಿ

    ಸೊರಬ: ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಹಾಗೂ ನೇಮಕಾತಿ ಕರಡು ನಿಯಮಗಳು ಬದಲಾಗಬೇಕು ಎಂದು ಒತ್ತಾಯಿಸಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಬಿಇಒಗೆ ಮಂಗಳವಾರ ಮನವಿ ಸಲ್ಲಿಸಿದರು.

    ಸಂಘದ ಅಧ್ಯಕ್ಷ ಶಿವಕುಮಾರ ಮಾತನಾಡಿ, ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ವೃಂದ ಹಾಗೂ ನೇಮಕಾತಿ ಕರಡು ನಿಯಮಗಳು ಅವೈಜ್ಞಾನಿಕವಾಗಿವೆ ಮತ್ತು ಲೋಪಗಳಿವೆ. ಇದರಿಂದ ಸೇವಾನಿರತ ಪದವೀಧರ ಶಿಕ್ಷರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ ಸೂಕ್ತ ತಿದ್ದುಪಡಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    2017 ವೃಂದ ಮತ್ತು ನೇಮಕಾತಿ ನಿಯಮ ಜಾರಿಗೆ ಬರುವ ಪೂರ್ವದಲ್ಲಿ ನೇಮಕಾತಿ ಹೊಂದಿದ ಎಲ್ಲ ಸೇವಾನಿರತ ಪದವೀಧರ ಶಿಕ್ಷಕರನ್ನು ಜಿಪಿಟಿ ವೃಂದಕ್ಕೆ ಒಳಪಡಿಸಿ ಮುಂಬಡ್ತಿ ನೀಡಿ, ಪ್ರತ್ಯೇಕ ವೇತನ ಶ್ರೇಣಿ ನಿಗದಿಪಡಿಸಬೇಕು. ಸೇವಾ ಅನುಭವ ಪರಿಗಣಿಸಿ ಸ್ಪರ್ಧಾತ್ಮಕ ಪರೀಕ್ಷೆ ರದ್ದುಪಡಿಸಬೇಕು. ಜಿಪಿಟಿ ಹಾಗೂ ಪಿಎಸ್​ಟಿ ವೃಂದಗಳಿಗೆ ಪ್ರತ್ಯೇಕ ಮುಖ್ಯ ಶಿಕ್ಷಕರ ಹುದ್ದೆ ಸೃಜಿಸಿ ಸೇವಾನಿರತ ಶಿಕ್ಷಕರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

    ಸಂಘದ ಕಾರ್ಯದರ್ಶಿ ಎಸ್.ಚಂದ್ಯಾನಾಯ್್ಕ ಉಪಾಧ್ಯಕ್ಷ ಮಲ್ಲೇಶಪ್ಪ, ಖಜಾಂಚಿ ಆಂಜನೇಶ್, ಸಹಕಾರ್ಯದರ್ಶಿ ಬಿ.ಎಲ್.ಸುದರ್ಶನ, ಸಂಘಟನಾ ಕಾರ್ಯದರ್ಶಿ ಜಿ.ಗಂಗಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts