More

    ರಾಷ್ಟ್ರಪತಿ ಚುನಾವಣೆ; ಪ್ರತಿಪಕ್ಷಗಳ ಸಭೆ, ಅಭ್ಯರ್ಥಿಯಾಗಲು ಒಪ್ಪದ ಶರದ್ ಪವಾರ್..

    ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಎನ್​ಡಿಒ ಅಭ್ಯರ್ಥಿಗೆ ಪ್ರತಿಯಾಗಿ ತಮ್ಮ ಕಡೆಯಿಂದ ಅಭ್ಯರ್ಥಿ ಆರಿಸುವ ಸಲುವಾಗಿ ಇಂದು ಒಂದಷ್ಟು ಪ್ರಮುಖ ಪ್ರತಿಪಕ್ಷಗಳ ಮುಖಂಡರು ಸಭೆ ಸೇರಿದ್ದು, ಬಹಳಷ್ಟು ಚರ್ಚೆ ನಡೆದಿದೆ. ಆದರೆ ಇಲ್ಲಿ ಶರದ್ ಪವಾರ್ ಅಭ್ಯರ್ಥಿಯಾಗಲು ನಿರಾಕರಿಸಿದ್ದರಿಂದ ಇನ್ನಿಬ್ಬರ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ.

    ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಕಾಂಗ್ರೆಸ್​, ಸಮಾಜವಾದಿ ಪಕ್ಷ, ಎನ್​ಸಿಪಿ, ಡಿಎಂಕೆ, ಆರ್​ಜೆಡಿ, ಜೆಡಿಎಸ್​ ಹಾಗೂ ಇತರ ಎಡಪಂಥೀಯ ಪಕ್ಷಗಳ ನಾಯಕರು ಭಾಗವಹಿಸಿದ್ದು, ಈ ಸಂದರ್ಭದಲ್ಲಿ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಹೆಸರು ಸೂಚಿಸಲಾಗಿದ್ದು, ಅವರು ಅಭ್ಯರ್ಥಿಯಾಗಲು ನಿರಾಕರಿಸಿದ್ದಾರೆ.

    ಇನ್ನು ಈ ಸಭೆಯಲ್ಲಿ ನಾವೆಲ್ಲ ಸೇರಿ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದ್ದೇವೆ. ಆದರೆ ಶರದ್ ಪವಾರ್ ಅಭ್ಯರ್ಥಿಯಾಗಲು ನಿರಾಕರಿಸಿದ್ದರಿಂದ, ನಾನು ಫಾರೂಕ್ ಅಬ್ದುಲ್ಲಾ ಮತ್ತು ಗೋಪಾಲಕೃಷ್ಣ ಗಾಂಧಿಯನ್ನು ಸಂಭಾವ್ಯ ಅಭ್ಯರ್ಥಿಯಾಗಿ ಸೂಚಿಸಿದ್ದೇನೆ ಎಂದು ಸಭೆ ಬಳಿಕ ಮಮತಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಇನ್ನು ಈ ಸಭೆಗೆ ಇತರ ವಿರೋಧ ಪಕ್ಷಗಳಾದ ಆಪ್​, ಎಸ್​ಎಡಿ, ಎಐಎಂಐಎಂ, ಟಿಆರ್​ಎಸ್​, ಬಿಜೆಡಿ ಪಕ್ಷಗಳ ನಾಯಕರು ಗೈರಾಗಿದ್ದರು. ಅಂದಹಾಗೆ ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ.

    ರಾಜ್ಯಸಭೆ ಅಡ್ಡಮತದಾನದ ಅಡ್ಡಪರಿಣಾಮ; ಕಾಂಗ್ರೆಸ್​ ಬಳಿಕ ಬಿಜೆಪಿಯಿಂದ ಶಾಸಕಿಯ ಉಚ್ಚಾಟನೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts