More

    ಧರ್ಮ, ಸಂಪ್ರದಾಯ ಸಂರಕ್ಷಣೆ ಎಲ್ಲರ ಕರ್ತವ್ಯ

    ಹೊಸನಗರ: ಸನಾತನ ಧರ್ಮ ಅತ್ಯಂತ ಪವಿತ್ರವಾದುದು. ಧರ್ಮ ಮತ್ತು ಸಂಪ್ರದಾಯ ಸಂರಕ್ಷಣೆ ಎಲ್ಲರ ಕರ್ತವ್ಯ ಆಗಬೇಕು ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಸ್ವಾಮೀಜಿ ಹೇಳಿದರು.
    ತಾಲೂಕಿನ ದಳವಾಯಿ ಜಡ್ಡು ಸುಖನ್ಯಾ, ವಾಸುದೇವ ಉಡುಪ ಅವರ ಮನೆ ಆವರಣದಲ್ಲಿ ಬುಧವಾರ ಆಯೋಜಿಸಲಾದ ಶಾಖಲಾ ಋಕ್‌ಸಂಹಿತಾ ಯಾಗದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
    ಬದುಕಿನಲ್ಲಿ ಒಳ್ಳೆಯದು ಮಾಡುವುದನ್ನು ಕಂಡುಕೊಳ್ಳಬೇಕು. ಆಚರಣೆ ಮತ್ತು ಬದುಕಿನಲ್ಲಿ ಒಳ್ಳೆಯದನ್ನು ಅಳವಡಿಸಿಕೊಳ್ಳಬೇಕು. ಮತ್ತೊಬ್ಬರಿಗೆ ಒಳ್ಳೆಯದು ಮಾಡಿದರೆ ಅದುವೇ ಶ್ರೇಷ್ಠ ಬದುಕು ಅನಿಸಿಕೊಳ್ಳುತ್ತದೆ ಎಂದರು.
    ಡಿ.೨೭ರಿAದ ಆರಂಭವಾದ ಯಾಗವು ಶ್ರೀಗಳ ಸಾನ್ನಿಧ್ಯದಲ್ಲಿ ಬುಧವಾರ ಪೂರ್ಣಾಹುತಿಯೊಂದಿಗೆ ಸಂಪನ್ನಗೊAಡಿತು. ಇದಕ್ಕೂ ಮುನ್ನ ನಗರದ ಪಾರ್ವತಿ, ಶ್ರೀ ನೀಲಕಂಠೇಶ್ವರ ದೇಗುಲಕ್ಕೆ ಭೇಟಿ ನೀಡಿದ ಶ್ರೀಗಳು ದೇವರಿಗೆ ಪೂಜೆ ನೆರವೇರಿಸಿದರು. ಮಂಗಳಾರತಿಯ ಬಳಿಕ ಭಕ್ತರಿಗೆ ಆಶೀರ್ವಚನ, -Àಲ ಮಂತ್ರಾಕ್ಷತೆ ನೀಡಿದರು.
    ಶೃಂಗೇರಿ ಮಠದ ಆಡಳಿತಾಽಕಾರಿ ಡಾ. ವಿ.ಆರ್.ಗೌರಿಶಂಕರ, ಶೃಂಗೇರಿ ಸಚ್ಚಿದಾನಂದ ಉಡುಪ, ಪ್ರಮುಖರಾದ ಗೋಪಾಲ ಉಡುಪ, ನಾರಾಯಣ ಉಪಾಧ್ಯ, ವಿಘ್ನೇಶ್ವರ ಉಡುಪ, ಸ್ಥಳೀಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts