More

    ಲವ್ಲಿಸ್ಟಾರ್​ ಪ್ರೇಮ್​ ಜನ್ಮದಿನಕ್ಕೆ ‘ಪ್ರೇಮಂ ಪೂಜ್ಯಂ’ ಚಿತ್ರತಂಡದಿಂದ ಸಿಕ್ತು ಲಿರಿಕಲ್​ ಹಾಡಿನ ಉಡುಗೊರೆ

    ಬೆಂಗಳೂರು: ಲವ್ಲಿ ಸ್ಟಾರ್​ ಪ್ರೇಮ್​ಗಿವತ್ತು ಹುಟ್ಟುಹಬ್ಬದ ಸಂಭ್ರಮ. ಆದರೆ, ಮೊದಲ ಬಾರಿ ಅಭಿಮಾನಿಗಳಿಲ್ಲದೆ ಜನ್ಮವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಸ್ವತಃ ಪ್ರೇಮ್​ ಅಭಿಮಾನಿಗಳಿಗೆ ಮನೆ ಬಳಿ ಬಾರದಂತೆ ಮನವಿ ಮಾಡಿದ್ದಾರೆ. ಇತ್ತ ಪ್ರೇಮ್​ ಸಿನಿಮಾ ಕರಿಯರ್​ನ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಚಿತ್ರತಂಡ ಜನ್ಮದಿನದ ಪ್ರಯುಕ್ತ ಹಾಡೊಂದನ್ನು ಉಡುಗೊರೆ ರೂಪದಲ್ಲಿ ನೀಡಿದೆ. ಲಿರಿಕಲ್​ ಹಾಡಿನ ಮೂಲಕ ಶುಭಾಶಯ ಕೋರಿದೆ. ಅಂದಹಾಗೆ, ಡಾ. ರಾಘವೇಂದ್ರ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದಲ್ಲಿ ಒಟ್ಟು ಒಂಬತ್ತು ಶೇಡ್​ಗಳಲ್ಲಿ ಪ್ರೇಮ್ ಕಾಣಿಸಿಕೊಳ್ಳಲಿದ್ದು, 14 ಹಾಡುಗಳು ಸಿನಿಮಾದಲ್ಲಿವೆ. ಈಗಾಗಲೇ ಬಹುತೇಕ ಶೂಟಿಂಗ್​ ಮುಗಿಸಿಕೊಂಡಿರುವ ಚಿತ್ರತಂಡ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಿಗೂ ಚಾಲನೆ ನೀಡಿದೆ. ನಿರ್ದೇಶಕರೇ ಸಂಗೀತದ ಉಸ್ತುವಾರಿ ಹೊತ್ತಿದ್ದು, ನವೀನ್ ಕುಮಾರ್​ ಛಾಯಾಗ್ರಹಣ ನಿಭಾಯಿಸುತ್ತಿದ್ದಾರೆ. ಬೃಂದಾ ಮತ್ತು ಐಂದ್ರಿತಾ ರೇ ನಾಯಕಿಯರಾಗಿ ನಟಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts