More

    ಶ್ರೀ ರಾಮ ದೇವರ ಪವಿತ್ರ ಮಂತ್ರಾಕ್ಷತೆ ಮನೆ ಮನೆಗೆ ಹಂಚಿಕೆ

    ವಿಜಯವಾಣಿ ಸುದ್ದಿಜಾಲ ಹೊಸಕೋಟೆ
    ಐನೂರು ವರ್ಷಗಳ ಹಿಂದೂಗಳ ಹೋರಾಟಕ್ಕೆ ಜಯ ಸಿಕ್ಕಿದ್ದು, ಜ.22ರಂದು ಅಯೋದ್ಯೆಯಲ್ಲಿ ಶ್ರೀ ರಾಮ ದೇವರ ಭವ್ಯ ಮಂದಿರ ಲೋಕಾರ್ಪಣೆಗೊಳ್ಳಲಿದ್ದು, ಶ್ರೀ ರಾಮರ ಪವಿತ್ರ ಮಂತ್ರಾಕ್ಷತೆಯನ್ನು ತಾಲೂಕಿನ ಎಲ್ಲರ ಮನೆಗಳಿಗೆ ಹಂಚುವ ಅಭಿಯಾನ ಜ.1ರಿಂದ 15 ದಿನಗಳ ಕಾಲ ನಿರಂತರವಾಗಿ ನೆಡೆಯಲಿದೆ ಎಂದು ಪ್ರಾಂತ್ಯ ಸಹ ಕಾರ್ಯದರ್ಶಿ ಸುರೇಶ್ ತಿಳಿಸಿದರು.
    ನಗರದ ವಿವೇಕಾನಂದ ಶಾಲೆಯ ಸಭಾಂಗಣದಲ್ಲಿ ಪವಿತ್ರ ಮಂತ್ರಾಕ್ಷತೆ ಹಂಚುವ ಅಭಿಯಾನದ ಬಗ್ಗೆ ಆರ್‌ಎಸ್‌ಎಸ್, ವಿಎಚ್‌ಪಿ ಹಾಗೂ ಹಿಂದೂ ಪರಸಂಘಟನೆಗಳಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
    ದೇಶದಲ್ಲಿ ಸುಮಾರು ಆರುವರೆ ಲಕ್ಷ ಗ್ರಾಮಗಳ ಮನೆ ಮನೆಗೆ ಈ ಮಂತ್ರಾಕ್ಷತೆಯನ್ನು ಹಂಚುವ ಅಭಿಯಾನವನ್ನು ಸಂಘಪರಿವಾರ ಹಾಗೂ ವಿಶ್ವಹಿಂದೂ ಪರಿಷತ್ ಹಾಗೂ ಹಿಂದೂಪರ ಸಂಘಟನೆಗಳು ಜವಾಬ್ದಾರಿ ಪಡೆದಿದೆ. 2500 ವರ್ಷಗಳಿಂದ ನಮ್ಮ ಭಾರತದ ಮೇಲೆ ಧರ್ಮಾಂದರ ದಾಳಿ ನಿರಂತರವಾಗಿ ನೆಡೆಯುತ್ತಿದ್ದು, 500 ವರ್ಷಗಳ ಹಿಂದೆ ಅಯೋದ್ಯೆಯಲ್ಲಿನ ರಾಮ ಮಂದಿರವನ್ನು ದ್ವಂಸಗಿಳಿಸುವ ಮೂಲಕ ಭಾರತದಲ್ಲಿ ರಾಮನನ್ನು ಇಲ್ಲವಾಗಿಸುವ ದುಷ್ಕೃತ್ಯಕ್ಕೆ ಸಾಕ್ಷಿಯಾದ ದಾಳಿಕೊರರಿಗೆ ಭಾರತದ ಮನೆ ಮನೆಯಲ್ಲಿ ರಾಮ ಎಂದೆಂದಿಗೂ ಇದ್ದೇ ಇರುತ್ತಾನೆ ಎಂದು ರಾಮ ಮಂದಿರ ನಿರ್ಮಾಣಕ್ಕೆ ಅಂದೇ ಚಳುವಳಿಯ ಹಾದಿ ಹಿಡಿಯಲಾಯಿತು. ಈಗ ಅದು ಸಾಕಾರಗೊಂಡಿದ್ದು, ಜ.22ರಂದು ರಾಮ ಮಂದಿರ ಉದ್ಘಾಟನೆಯಾಗಲಿದೆ ಎಂದರು.
    ರಾಮ ಮಂದಿರದ ಹೋರಟ ಬಹಳ ರೋಚಕವಾಗಿದ್ದರೆ, ರಾಮ ಮಂದಿರ ನಿರ್ಮಾಣಕ್ಕೆ ಮನೆ ಮನೆಗಳಿಂದ ಹಣ ಸಂಗ್ರಹದ ಸಂದರ್ಭದಲ್ಲಿ ಬಹಳಷ್ಟು ವಿಶೇಷ ಅನುಭವಗಳನ್ನು ಕಾಣುವ ಸೌಭಾಗ್ಯ ನಮ್ಮದಾಗಿತ್ತು. ಅದೇರೀತಿ 500 ವರ್ಷಗಳ ನಮ್ಮ ಹಿರಿಯರ ಹೋರಾಟ ನಮ್ಮ ಕಾಲದಲ್ಲಿ ನೆರವೇರುತ್ತಿದ್ದು, ಉದ್ಘಾಟನೆಯಾಗುತ್ತಿದೆ. ಇದು ನಾವೆಲ್ಲ ಹೆಮ್ಮೆ ಪಡುವ ವಿಚಾರ ಎಂದು ಆರ್‌ಎಸ್‌ಎಸ್‌ನ ದಕ್ಷಿಣ ಪ್ರಾಂತೀಯ ಪ್ರಮುಖ್ ಶೇಷಣ್ಣ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts