More

    ರಾತ್ರಿ ಪ್ರಯಾಣದ ವೇಳೆ ಹಂಪ್​ನಲ್ಲಿ ಬಸ್​ ನೆಗೆದ ನೆಗೆತಕ್ಕೆ ಮಗುವಿಗೆ ಜನ್ಮನೀಡಿದ ಮಹಿಳೆ!

    ಹಾಸನ: ಬಸ್​ಗಳಲ್ಲಿ ರಾತ್ರಿ ಸಂಚಾರ ಗರ್ಭಿಣಿಯರ ಮಟ್ಟಿಗೆ ತುಸು ಅಪಾಯಕಾರಿಯೇ. ಬಸ್ಸನ್ನು ವೇಗವಾಗಿ ಚಲಾಯಿಸುವ ಚಾಲಕರಿಗೆ ಕೆಲವೊಮ್ಮೆ ಹಂಪ್​ಗಳು ಕಾಣಿಸಿರುವುದಿಲ್ಲ. ಸಮೀಪ ತಲುಪಿದಾಗಲೋ ಅಥವಾ ಹಂಪ್ ಹಾರಿಸಿದ ನಂತರವೋ ಬ್ರೇಕ್ ಹಾಕುವುದನ್ನು ಮಾಡುತ್ತಿರುತ್ತಾರೆ. ಒಂದೊಮ್ಮೆ ಗರ್ಭಿಣಿಯರು ಪ್ರಯಾಣಿಸಿದರೆ ಡೆಲಿವರಿಯಾಗೋದು ಗ್ಯಾರೆಂಟಿ ಎನ್ನುವ ಮಾತುಗಳನ್ನು ಆಗಾಗ ಜನ ಹೇಳುವುದನ್ನು ಕೇಳುತ್ತಿರುತ್ತೇವೆ. ಇದು ಹಾಸನದಲ್ಲಿ ನಿಜವಾಗಿದೆ!

    ಮಡಿಕೇರಿ-ಹುಬ್ಬಳ್ಳಿ ಬಸ್​ ಹಾಸನ ನಗರ ನಿಲ್ದಾಣಕ್ಕೆ ಮಂಗಳವಾರ ರಾತ್ರಿ ತಲುಪಿದ್ದು, ಅಲ್ಲಿನ ಹಂಪ್​ ಅನ್ನು ವೇಗವಾಗಿ ದಾಟಿದ ವೇಳೆ ಅದರಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಶುರುವಾಗಿ ಬಿಟ್ಟಿತ್ತು. ಕೂಡಲೇ ಆ ಮಹಿಳೆಯನ್ನು 108 ಆಂಬುಲೆನ್ಸ್ ಮೂಲಕ ಹಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪ್ರಸವವಾಗಿದ್ದು, ತಾಯಿ ಮತ್ತು ಮಗು ಸದ್ಯ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

    ಇದೇ ವೇಳೆ, ಬಸ್​ ಚಾಲಕನ ಅಜಾಗರೂಕತೆಯ ಚಾಲನೆ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಅಧಿಕಾರಿಗಳು ಸಂಬಂಧಪಟ್ಟ ಚಾಲಕನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಎಲ್ಲ ಚಾಲಕರಿಗೂ ಜಾಗರೂಕತೆಯಿಂದ ಬಸ್ ಚಲಾಯಿಸುವಂತೆ ಸೂಚಿಸಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts