More

    ಲೋಕಕಲ್ಯಾಣಕ್ಕಾಗಿ ‘ಪವಿತ್ರ ಗುರುವಾರ’ ಪ್ರಾರ್ಥನೆ, ಬಲಿಪೂಜೆ ನೆರವೇರಿಸಿದ ಬಿಷಪ್

    ಮಂಗಳೂರು: ಶುಭ ಶುಕ್ರವಾರದ ಪೂರ್ವದ ಪವಿತ್ರ ಗುರುವಾರ ಮಂಗಳೂರಿನಲ್ಲಿ ಕ್ರೈಸ್ತರು ಯೇಸು ಕ್ರಿಸ್ತರ ಕೊನೆಯ ಭೋಜನದ ದಿನವನ್ನು ಮನೆಯಲ್ಲಿಯೇ ಆಚರಿಸಿದರು. ಕೊವಿಡ್ ಕಾರಣದಿಂದಾಗಿ ಚರ್ಚ್‌ಗಳಲ್ಲಿ ಬಲಿಪೂಜೆ ರದ್ದುಗೊಳಿಸಲಾಯಿತು.

    ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಸಂಜೆ 5 ಗಂಟೆಗೆ ರೊಸಾರಿಯೊ ಕೆಥೆಡ್ರಲ್‌ನಲ್ಲಿ ನಡೆಸಿದ ಬಲಿಪೂಜೆಯನ್ನು ಯೂಟ್ಯೂಬ್ ಹಾಗೂ ಖಾಸಗಿ ವಾಹಿನಿಯಲ್ಲಿ ನೇರಪ್ರಸಾರ ಮಾಡಲಾಗಿದ್ದು, ಅದನ್ನು ಕ್ರೈಸ್ತರು ತಮ್ಮ ತಮ್ಮ ಮನೆಗಳಲ್ಲಿಯೇ ವೀಕ್ಷಿಸಿದರು. ಕೆಥೆಡ್ರಲ್‌ನ ರೆಕ್ಟರ್ ಾ.ಜೆ.ಬಿ.ಕ್ರಾಸ್ತಾ ಮತ್ತು ಸಹಾಯಕ ಗುರು ್ಲೇವಿಯನ್ ಲೋಬೊ ಬಲಿಪೂಜೆಯಲ್ಲಿ ಉಪಸ್ಥಿತರಿದ್ದರು.

    ಬಲಿಪೂಜೆ ಸಂದರ್ಭದಲ್ಲಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು. ಕರೊನಾ ಕಾಯಿಲೆಯಿಂದ ಬಳಲುತ್ತಿರುವವರು ಶೀಘ್ರ ಗುಣಮುಖರಾಗಲಿ ಹಾಗೂ ಈ ರೋಗ ಆದಷ್ಟು ಬೇಗನೆ ನಿರ್ಮೂಲನವಾಗಲಿ, ರೋಗಿಗಳಿಗೆ ಸೇವೆ ಒದಗಿಸುತ್ತಿರುವ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ದೇವರು ಉತ್ತಮ ಆರೋಗ್ಯ ಹಾಗೂ ಇನ್ನಷ್ಟು ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸಲಾಯಿತು. ಕಾಯಿಲೆಯಿಂದ ಮಡಿದವರಿಗೆ ಶಾಂತಿ ಕೋರಲಾಯಿತು.

    ಪವಿತ್ರ ಗುರುವಾರ ಆಚರಣೆ ಹಿನ್ನೆಲೆ: ಯೇಸು ಕ್ರಿಸ್ತರು ಶಿಲುಬೆಯಲ್ಲಿ ಸಾವನ್ನಪ್ಪುವ ಮುಂಚಿನ ದಿನ ರಾತ್ರಿ ತನ್ನ ಶಿಷ್ಯರ ಜತೆ ಕೊನೆಯ ಭೋಜನ ಸೇವಿಸಿದ್ದು, ಈ ದಿನವನ್ನು ಪವಿತ್ರ ಗುರುವಾರವನ್ನಾಗಿ ಆಚರಿಸುತ್ತಿದೆ. ಕೊನೆಯ ಭೋಜನದ ಸಂದರ್ಭ ಯೇಸು ಕ್ರಿಸ್ತರು ಯಾಜಕರ (ಧರ್ಮಗುರುಗಳ) ಸಂಸ್ಕಾರ ಮತ್ತು ಪರಮ ಪ್ರಸಾದದ ಸಂಸ್ಕಾರವನ್ನು ಸ್ಥಾಪಿಸಿದರು. 12 ಶಿಷ್ಯಂದಿರ ಪಾದಗಳನ್ನು ತೊಳೆಯುವ ಮೂಲಕ ಸೇವೆಯ ಉಪದೇಶ ನೀಡಿದ್ದರು. ಈ ಆಚರಣೆಯನ್ನೂ ಕೊರೊನಾ, ಸಾಮಾಜಿಕ ಅಂತರ ಕಾಪಾಡುವ ಕಾರಣದಿಂದ ರದ್ದುಪಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts