More

    ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ‌್ಯಕ್ರಮ ಸ್ವಾರ್ಥದ ರಾಜಕಾರಣಕ್ಕೆ ನಾಂದಿ

    ಮಂಗಳೂರು: ಅಯ್ಯೋಧೆಯಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ‌್ಯಕ್ರಮ ಕೇಂದ್ರ ಸರ್ಕಾರದ ಸ್ವಾರ್ಥದ ರಾಜಕಾರಣಕ್ಕೆ ನಾಂದಿ ಹಾಡಿದೆ ಎಂದು ಹಿಂದೂ ಮಹಾಸಭಾ ಕರ್ನಾಟಕದ ಸಂಸ್ಥಾಪಕ ರಾಜೇಶ್ ಪವಿತ್ರನ್ ಹೇಳಿದರು.

    ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿಷ್ಠಾಪನಾ ಕಾರ‌್ಯಕ್ರಮದಲ್ಲಿ ಮೂಲವಕಾಲತ್ತುದಾರರಾದ ಹಿಂದೂ ಮಹಾಸಭಾ ಹಾಗೂ ನಿರ್ಮೂಯಿ ಅಖಾಡಕ್ಕೆ ಆಮಂತ್ರಣ ನೀಡದೇ ಪೂರ್ಣ ರೂಪದಲ್ಲಿ ಕೇಂದ್ರ ಸರ್ಕಾರ ಕಡೆಗಣನೆ ಮಾಡಿದೆ. ಹಿಂದೂ ಮಹಾಸಭಾ ಎಂದಿಗೂ ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಮಾಡಿಲ್ಲ. ಪ್ರಸ್ತುತ ಕೇಂದ್ರ ಸರ್ಕಾರ ಲೋಕಸಭೆ ಚುನಾವಣಾ ದೃಷ್ಟಿಯಿಂದ ಪ್ರಭು ಶ್ರೀರಾಮನ ಮಂದಿರವನ್ನು ಅಪೂರ್ಣವಸ್ಥೆಯಲ್ಲಿ ಉದ್ಘಾಟನೆ ಮಾಡುವುದು ಧರ್ಮಶಾಸಕ್ಕೆ ಮಾಡುವ ಅಪಚಾರ. ಇದನ್ನು ಹಿಂದೂ ಮಹಾಸಭಾ ಖಂಡಿಸುತ್ತದೆ. ಶ್ರೀರಾಮನನ್ನು ಚುನಾವಣಾ ಸರಕನ್ನಾಗಿ ಮಾಡಿದ್ದೆ ಆದಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಪ್ರಭು ಶ್ರೀರಾಮನ ಶಾಪ ಕಟ್ಟಿಟ್ಟ ಬುತ್ತಿ ಎಂದರು.

    ಜ.22ರಂದು ನಗರದ ಪಿವಿಎಸ್ ವೃತ್ತದ ಬಳಿ ಇರುವ ಲಕ್ಷ್ಮಿ ನಾರಾಯಣ ದೇವಸ್ಥಾನದ ವಠಾರದಲ್ಲಿ ರಾಮ ಮಹೋತ್ಸವವನ್ನು ಆಚರಣೆ ಮಾಡಲು ನಿರ್ಧಾರ ಮಾಡಿದ್ದು, ಈ ವಿಶೇಷ ಸಂದರ್ಭದಲ್ಲಿ ಮಂದಿರದ ಪುನರ್ ನಿರ್ಮಾಣಕ್ಕೆ ತ್ಯಾಗ ಬಲಿದಾನ ಮಾಡಿದವರನ್ನು ನೆನಪು ಮಾಡುವ ದೃಷ್ಟಿಯಿಂದ ಕರಸೇವಕರನ್ನು ಗೌರವಿಸಿ, ಸನ್ಮಾನಿಸುವ ಕಾರ‌್ಯಕ್ರಮ ಕೂಡ ನಡೆಯಲಿದೆ ಎಂದರು.

    ಹಿಂದೂ ಮಹಾಸಭಾ ಕರ್ನಾಟಕದ ರಾಜ್ಯಾಧ್ಯಕ್ಷ ಡಾ.ಎಲ್.ಕೆ. ಸುವರ್ಣ, ರಾಜ್ಯ ಖಜಾಂಚಿ ಲೋಕೇಶ್ ಉಳ್ಳಾಲ್, ಸಂಘಟನೆಯ ಪ್ರಮುಖರಾದ ಇಮಾಂಶು ಶರ್ಮ, ಪ್ರವೀಣ್ ಚಂದ್ರರಾವ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts