More

    ಅಪ್ಪ-ಮಗಳಾಗಿ ಪ್ರಕಾಶ್ ರೈ, ಸಾಯಿ ಪಲ್ಲವಿ

    ಓವರ್ ದಿ ಟಾಪ್ (ಓಟಿಟಿ) ವೇದಿಕೆ ದಿನಕಳೆದಂತೆ ಹಿರಿದಾಗುತ್ತಿದೆ. ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತ ಎಲ್ಲೆಡೆ ಹಬ್ಬುತ್ತಿದೆ. ಸಿನಿಮಾದ ಸ್ಟಾರ್ ಕಲಾವಿದರೂ ಇದರತ್ತ ಆಕರ್ಷಿತರಾಗುತ್ತಿದ್ದಾರೆ. ಬಾಲಿವುಡ್​ನಲ್ಲಂತೂ ಎ ಗ್ರೇಡ್ ನಟ, ನಟಿಯರಿಗೂ ವೆಬ್​ಸರಣಿ ಇಷ್ಟವಾಗುತ್ತಿವೆ. ದಕ್ಷಿಣ ಭಾರತದ ಚಿತ್ರರಂಗದಲ್ಲೂ ಅದರ ಘಮ ಕಮ್ಮಿ ಏನಿಲ್ಲ. ಇದೀಗ ಆ ವೇದಿಕೆ ಪ್ರವೇಶಿಸಲು ನಟಿ ಸಾಯಿ ಪಲ್ಲವಿ ಸಿದ್ಧರಾಗುತ್ತಿದ್ದಾರೆ. ಅವರೊಂದಿಗೆ ಬಹುಭಾಷಾ ನಟ ಪ್ರಕಾಶ್ ರೈ ಸಹ ಕೈ ಜೋಡಿಸಿದ್ದಾರೆ. ಅಂದಹಾಗೆ, ತಮಿಳಿನಲ್ಲಿ ಸಿದ್ಧವಾಗಲಿರುವ ಈ ವೆಬ್​ಸಿರೀಸ್​ನಲ್ಲಿ ಪ್ರಕಾಶ್ ರೈ ಮತ್ತು ಸಾಯಿ ಪಲ್ಲವಿ ಅಪ್ಪ-ಮಗಳಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಇದನ್ನೂ ಓದಿ: ದೇಶದ ಮೂರು ಹೈಟೆಕ್​ ಕೊವಿಡ್​-19 ಟೆಸ್ಟ್​ ಲ್ಯಾಬ್​ಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

    ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ವೆಬ್​ಸರಣಿ ಇದಾಗಿರಲಿದ್ದು, ಖ್ಯಾತ ನಿರ್ದೇಶಕ ವೆಟ್ರಿಮಾರನ್ ಆಕ್ಷನ್ ಕಟ್ ಹೇಳಲಿದ್ದಾರೆ. ನೆಟ್​ಫ್ಲಿಕ್ಸ್ ಇಂಡಿಯಾ ಬಂಡವಾಳ ಹೂಡಲಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಈ ವೆಬ್​ಸರಣಿ ಬಗ್ಗೆ ಯಾವುದೇ ಮಾಹಿತಿಯನ್ನು ನಿರ್ದೇಶಕರು ಹೇಳಿಕೊಂಡಿರಲಿಲ್ಲ. ಇದೀಗ ಶೂಟಿಂಗ್​ಗೆ ಅನುಮತಿ ಸಿಕ್ಕಿರುವ ಬೆನ್ನಲ್ಲೇ ಇನ್ನು ಕೆಲ ದಿನಗಳಲ್ಲಿ ಅಧಿಕೃತ ಘೋಷಣೆ ಮಾಡಲಿದ್ದಾರಂತೆ. (ಏಜೆನ್ಸೀಸ್)

    ಕರೊನಾ ನೆಗೆಟಿವ್​: ಆಸ್ಪತ್ರೆಯಿಂದ ಐಶ್ವರ್ಯಾ ಮತ್ತು ಆರಾಧ್ಯಾ ಡಿಸ್ಚಾರ್ಜ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts