More

    ಪ್ರಜಾಪ್ರಭುತ್ವ,ಸಂವಿಧಾನ ರಕ್ಷಿಸಲು ಭಾರತ್ ಜೋಡೋ ಯಾತ್ರೆ ಬೆಂಬಲಿಸ ಬೇಕಿದೆ

    ಚಿತ್ರದುರ್ಗ: ಬಹುತ್ವ ಭಾರತ್ವನ್ನು ರಕ್ಷಿಸುವ ದೇಶದ ದೊಡ್ಡ ಶಕ್ತಿಗಳಾದ ಪ್ರಜಾಪ್ರಭುತ್ವ,ಸಂವಿಧಾನ ರಕ್ಷಣೆಗೆ ಎಲ್ಲರೂ ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸಬೇಕಿದೆ ಎಂದು ಭಾರತ ಜೋಡಿಸುವ ಯಾತ್ರೆಯೊಂದಿಗೆ ಭಾವೈಕ್ಯ ಕರ್ನಾಟಕ ವೇದಿಕೆ ಪ್ರಮುಖರು ಹೇಳಿದರು.

    ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಜಿ.ಸಿದ್ದರಾಮಯ್ಯ,ಕೋಮು,ಮನುವಾದಗಳಿಂದ ಉಂಟಾಗುತ್ತಿರುವ ಅಪಾ ಯಗಳಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸದಿದ್ದರೆ ಮುಂದಿನ ಪೀಳಿಗೆ ಎದುರು ನಾವು ತಪ್ಪಿತಸ್ಥರಾಗಿ ನಿಲ್ಲಬೇಕಾಗುತ್ತ ದೆ. ಬಿಜೆಪಿಗೆ ಸುಳ್ಳೆ ಮನೆ ದೇವರು. ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ಕಿತ್ತು ಹಾಕಬೇಕಿದೆ. ರಾಹುಲ್‌ಗಾಂಧಿಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಆದರೆ ಅವರು ಯುವಕರನ್ನು ಅರ್ಥ ಮಾಡಿಕೊಂಡು ಬೆಳೆಯುತ್ತಿರುವ ನಾಯಕರಾಗಿದ್ದಾರೆ.

    ರಥಯಾತ್ರೆಗೆ ಕೋಮು ಸ್ಪರ್ಶವಿತ್ತು. ನಮ್ಮೆಲ್ಲರ ಆಶಯಕ್ಕೆ ಪೂರಕವಾಗಿ ಯಾತ್ರೆ ನಡೆಯುತ್ತಿದೆ. ತುರ್ತು ಪರಿಸ್ಥಿತಿ ವಿರುದ್ಧ ಹೇಗೆ ಹೋರಾಟ ನಡೆದಿತ್ತೋ ಆದೇ ಮಾದರಿ ಎಲ್ಲರೂ ಒಂದಾಗಿ ಇಂದು ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸಬೇಕಿದೆ ಎಂದರು. ಪ್ರಕಾಶ ಕಮ್ಮರಡಿ ಮಾತನಾಡಿ,ದೇಶಕ್ಕೆ ಬೆಂಕಿ ಬಿದ್ದಿದೆ,ಅದನ್ನು ಆರಿಸಲು ಕಾಂಗ್ರೆಸ್ ನೀರು ಹಾಕಲು ಮುಂದಾಗಿದೆ.

    ನಾವೆಲ್ಲರೂ ಬೆಂಕಿ ನಂದಿಸಲು ಕೈ ಜೋಡಿಸ ಬೇಕಿದೆ. ಕಾಂಗ್ರೆಸ್ ತಪ್ಪು ಮಾಡಿದರೆ ಅದನ್ನೂ ವಿರೋಧಿಸುತ್ತೇವೆ. ಈ ಯಾತ್ರೆ ಪಕ್ಷವನ್ನೂ ಮೀರಿದ್ದಾಗಿದೆ ಎಂದರು.

    ತೇಜಸ್ವಿ ವಿ.ಪಟೇಲ್ ಮಾತನಾಡಿ,ಕಾಂಗ್ರೆಸ್ಸಿಗಿಂತ ಮೊದಲು ಯಾವುದೇ ಪಕ್ಷ,ಭಾರತವನ್ನು ಒಂದಾಗಿಸುವ ಇಂಥ ಕಾರ‌್ಯಕ್ರಮವನ್ನು ರೂಪಿಸಿದ್ದರೆ ಅದಕ್ಕೆ ನಮ್ಮ ಬೆಂಬಲ ಇರುತ್ತಿತ್ತು. ಸಾಮರಸ್ಯ ಎಂಬುದು ಈ ದೇಶದ ದೊಡ್ಡ ಸಂಪತ್ತು. ನರೇಂದ್ರ ಮೋದಿ ಸರ್ಕಾರ ಆರ್ಥಿಕ ವೈಫಲ್ಯಗಳನ್ನು ಮರೆ ಮಾಚಲು ಭಾವಾನತ್ಮಕ ವಿಚಾರಗಳನ್ನು ಕೆದಕುತ್ತಿದೆ. ಕೃಷಿ ವೈಜ್ಞಾನಿಕ ಬೆಲೆ ಕೊಡಿ ಎಂದರೆ ಕಿಸಾನ್ ಸಮ್ಮಾನ್ ಯೋಜನೆ ರೂಪಿಸಿದೆ. ರಾಹುಲ್‌ಗಾಂಧಿ ಅವರು ಯಾತ್ರೆಗೆ ಅನ್‌ಕಂಡಿಷನಲ್ ಬೆಂಬಲ ಬೇಡ ಎಂದಿದ್ದಾರೆ ಎಂದರು.

    ರುದ್ರಪ್ಪ ಹನಗವಾಡಿ ಮಾತನಾಡಿ,ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಾಂವಿಧಾನಕ ಸಂಸ್ಥೆಗಳು ಸ್ವಾಯತ್ತೆಯಿಂದ ಕೆಲಸ ನಿರ್ವಹಿಸದಂಥ ಪರಿಸ್ಥಿತಿ ಉಂಟಾಗಿದೆ. ನೋಟು ಅಮಾನ್ಯೀಕರಣ ದುಷ್ಪರಿಣಾಮದ ಪರಿಶೀಲನೆ ಈಗ ನಡೆಯುತ್ತಿರುವುದು ದುರದೃಷ್ಟಕರ ಎಂದರು.

    ಮಲ್ಲಿಕಾರ್ಜುನ ಕಲಮರಹಳ್ಳಿ ಮಾತನಾಡಿ,ಬುಡಕಟ್ಟು,ತಳ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಜಿಲ್ಲೆಯಲ್ಲಿ ಯಾತ್ರೆ ನಡೆಯುತ್ತಿದೆ. ಎಲ್ಲ ವರ್ಗದ ತಳ ಸಮುದಾಯಗಳ ಸಮಸ್ಯೆಗಳನ್ನು ರಾಷ್ಟ್ರ ಮಟ್ಟದಲ್ಲಿ ಬಿಂಬಿಸಬೇಕಿದೆ ಎಂದರು.

    ವಕೀಲ ರವೀಂದ್ರ ನಾಯಕ್ ಮಾತನಾಡಿ,ಯಾತ್ರೆಯಲ್ಲಿ ವೇದಿಕೆಯ ನೂರಕ್ಕೂ ಹೆಚ್ಚು ಪ್ರಮುಖರು ನಿತ್ಯವೂ ಹೆಜ್ಜೆ ಹಾಕುತ್ತಿದ್ದೇವೆ. ಬಿಜೆಪಿ ಸರ್ಕಾರ ಸಂವಿಧಾನವನ್ನು ಸಡಿಲಗೊಳಿಸುತ್ತಿದ್ದು,ದೇಶದ ಆರ್ಥಿಕ ಮಟ್ಟ ಕುಸಿಯುತ್ತಿದೆ ಎಂದರು.

    ರಾಜಶೇಖರಯ್ಯ ಮಾತನಾಡಿ,ಡಾ.ಬಿ.ಆರ್.ಅಂಬೇಡ್ಕರ್ ಅವರ ಅವಿರತ ಶ್ರಮದಿಂದ ನಮಗೆ ಸಿಕ್ಕಿರುವ ಸಂವಿಧಾನ ವಿಂದು ಮಾ ಯವಾಗುತ್ತಿದೆ. ಸಂವಿಧಾನಕ್ಕೆ ಧಕ್ಕೆ ಆದರೆ ಬದುಕುವುದು ಕಷ್ಟವಾಗುತ್ತದೆ. ಯಾತ್ರೆ ಸೆಕ್ಯೂಲಿರಿಸಂ ಸಂಕೇತವಾಗಿದೆ ಎಂದರು.ಜೆ.ಯಾದ ವರೆಡ್ಡಿ ಮಾತನಾಡಿದರು. ಮೆಹಬೂಬಪಾಶ,ಎನ್.ಡಿ.ಕುಮಾರ್ ಇದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts