More

    ಪ್ರಗತಿಪಥದತ್ತ ಜಯ ಹನುಮಾನ ಸೊಸೈಟಿ

    ಸಂಬರಗಿ: ಜಯ ಹನುಮಾನ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘವು 4.97 ಕೋಟಿ ರೂ. ಸಾಲ ವಿತರಿಸಿದ್ದು, ಸಂಘದ ಪ್ರಸಕ್ತ ವರ್ಷ 9.73 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಮಹಾದೇವ ಕೋರೆ ಹೇಳಿದರು.

    ಸಮೀಪದ ಮದಬಾವಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಯ ಹನುಮಾನ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ 7ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಸಂಘದ ಷೇರು ಬಂಡವಾಳ 70.36 ಲಕ್ಷ ರೂ. ಇದ್ದು, 703 ಸದಸ್ಯರನ್ನು ಹೊಂದಿದೆ. ಚಿಕ್ಕ ಉದ್ಯೋಗದಾರರಿಗೆ ಸಾಲ ನೀಡಿ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ. ಜಕಾರಟ್ಟಿ, ವಿಷ್ಣುವಾಡಿ, ತೆವರಟ್ಟಿಗಳಲ್ಲಿ ಸಂಘದ ಶಾಖೆ ಹೊಂದಿದ್ದೇವೆ ಎಂದರು.

    ಸಂಘದ ಉಪಾಧ್ಯಕ್ಷ ದಾದಾಸಾಹೇಬ್ ಮೇತ್ರೆ, ನಿರ್ದೇಶಕರಾದ ಹನುಮಂತ ತೊಡಕರ, ಸಿದ್ದಪ್ಪ ಪೋತದಾರ, ಮಹಾದೇವ ಕಾಂಬಳೆ, ಮಹಾದೇವ ಮಾಳಿ, ಮಾರುತಿ ಪಾಟೀಲ, ಬಾಹುಬಲಿ ಟಗ್ರಜ, ವಿಜಯಾನಂದ ಮೇತ್ರೆ, ಬಾಳವ್ವ ಮೇತ್ರಿ, ಸುಮಿತ್ರಾ ಪಾಟೀಲ, ಕುಮಾರ ಕೋರೆ, ಅರ್ಜುನ ಜಾಧವ, ಬ್ಯಾಂಕ್ ನಿರೀಕ್ಷಕರಾದ ಮಹಾದೆವ ಉಳಾಗಡ್ಡಿ, ಪೊಪಟ ನರುಟೇ, ರಾಹುಲ ಮಾಲಗಾರ ಇತರರು ಇದ್ದರು. ಸಂಘದ ಮುಖ್ಯಕಾರ್ಯನಿರ್ವಾಹಕ ಪರಶುರಾಮ ಬಾಡಗಿ ವರದಿ ಓದಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts