More

    ಪ್ರಭಾಸ್ ಕುಟುಂಬಕ್ಕೆ ಅನುಷ್ಕಾ ಶೆಟ್ಟಿ ತೀರಾ ಹತ್ತಿರ; ಸೊಸೆಯಾಗಿ ಸ್ವೀಕರಿಸಬಹುದು ಆದ್ರೆ ಪ್ರಭಾಸ್​ಗೊಂದು ಸಮಸ್ಯೆ ಇದೆ ಏನದು?

    ಪ್ರಭಾಸ್​​​​ ಹಾಗೂ ಅನುಷ್ಕಾ ಶೆಟ್ಟಿ ಮದುವೆಯಾಗಬೇಕು ಅನ್ನೋದು ಇವರಿಬ್ಬರ ಅಭಿಮಾನಿಗಳ ಆಶಯ. ಬಹುಕಾಲದಿಂದಲೂ ಸ್ನೇಹುಇತರಾಗಿಯೇ ಇರುವ ಇವರಿಬ್ಬರು ಮದುವೆ ಆಗೋದು ತುಂಬಾನೇ ಒಳ್ಳೆಯದು ಅಂತಾರೆ ಇವರಿಬ್ಬರ ಫ್ಯಾನ್ಸ್​​​.


    ಅನುಷ್ಕಾ ಆಗಲಿ, ಪ್ರಭಾಸ್ ಆಗಲಿ ಇದೂವರೆಗೂ ತಮ್ಮ ಪ್ರೀತಿಯನ್ನು ಒಪ್ಪಿಕೊಂಡಿಲ್ಲ. ಇಬ್ಬರೂ ಆತ್ಮೀಯ ಸ್ನೇಹಿತರು ಅಂತ ಹೇಳಿಕೊಳ್ಳುತ್ತಿದ್ದಾರೆ.
    ಇತ್ತ ಕಡೆ ಪ್ರಭಾಸ್​ಗೆ 43 ವರ್ಷ ಹಾಗು ಅನುಷ್ಕಾಗೆ 41 ವರ್ಷ ಇವರಿಬ್ಬರೂ ಮದುವೆಯಾದ್ರೆ ತುಂಬಾ ಒಳ್ಳೆಯದು ಅಂತಾರೆ ಫ್ಯಾನ್ಸ್​​​. ಇನ್ನು ಪ್ರಭಾಸ್​​​ ಕುಟುಂಬದವರೂ ಕೂಡಾ ಅನುಷ್ಕಾ ಅವರನ್ನ ಸೊಸೆಯಾಗಿ ಮನೆ ತುಂಬಿಸಿಕೊಳ್ಳೋಕೆ ರೆಡಿ ಇದ್ದಾರೆ. ಆದ್ರೆ ಸಮಸ್ಯೆ ಏನಪ್ಪಾ ಅಂದ್ರೆ ಪ್ರಭಾಸ್​​​ ತಮ್ಮ ಹೆಚ್ಚಿನ ಸಮಯವನ್ನ ಸಿನಿಮಾ ಸೆಟ್​​​ನಲ್ಲಿಯೇ ಕಳೆಯುತ್ತಾರೆ.

    ಹಾಗಾಗಿ ಅವರಿಗೆ ಕುಟುಂಬದ ಜತೆ ಸಮಯ ಕಳೆಯೋಕೆ ಕಾಲಾವಕಾಶವೇ ಸಿಗುತ್ತಿಲ್ಲ.
    ಆದ್ರೀಗ ಟಾಲಿವುಡ್‌ನಲ್ಲಿ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಅದೇನಂದರೆ, ಅನುಷ್ಕಾ ಶೆಟ್ಟಿಯನ್ನು ಸೊಸೆಯಾಗಿ ಸ್ವೀಕರಿಸಲು ಪ್ರಭಾಸ್ ಕುಟುಂಬ ರೆಡಿಯಾಗಿದೆಯಂತೆ. ಆದರೆ, ಇಲ್ಲೊಂದು ಸಮಸ್ಯೆ ಎಂದು ವರದಿಗಳಾಗಿವೆ.


    ವರ್ಷದಲ್ಲಿ ಬಹುತೇಕ ದಿನಗಳನ್ನು ಸೆಟ್ಟಿನಲ್ಲಿಯೇ ಕಾಲ ಕಳೆಯುತ್ತಾರೆ. ಹೀಗಾಗಿ ಪ್ರಭಾಸ್ ಮನೆಯವರಲ್ಲಿ ಆತಂಕ ಹೆಚ್ಚಾಗಿದೆಯಂತೆ. ಇದೇ ಕಾರಣಕ್ಕೆ ಪ್ರಭಾಸ್ಸ್​ ಈವರೆಗೂ ಮದುವೆಯಾಗಿಲ್ಲ ಎಂದು ಹೇಳಲಾಗುತ್ತಿದೆ.


    ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಇಬ್ಬರೂ ಉತ್ತಮ ಸ್ನೇಹಿತರು. ಅವರಲ್ಲಿ ಗೆಳೆತನ ಬಿಟ್ಟು ಬೇರೆ ಏನೂ ಇಲ್ಲ. ಆದರೆ, ಇಬ್ಬರೂ ಒಂದಾಗಬೇಕು ಅಂತ ಪ್ರಭಾಸ್ ಕುಟುಂಬವೇ ಬಯಸುತ್ತಿದೆ.

    ಈ ಗೆಳೆತನ ಪ್ರೀತಿಯಾಗಿ ಬದಲಾಗಬೇಕಿದೆ ಎಂದು ಡಾರ್ಲಿಂಗ್ ಕುಟುಂಬ ಬಯಸುತ್ತಿದೆ ಎಂದು ಟಾಲಿವುಡ್ ಮಾಧ್ಯಮಗಳು ವರದಿ ಮಾಡುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts