More

    ವಿದ್ಯುತ್ ಖಾಸಗೀಕರಣ ಕೈಬಿಡುವಂತೆ ಒತ್ತಾಯಿಸಿ ಜೆಸ್ಕಾಂ ನೌಕರರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ

    ಕಂಪ್ಲಿ: ಸರ್ಕಾರ ವಿದ್ಯುತ್ ಖಾಸಗೀಕರಣವನ್ನು ಕೈಬಿಡಬೇಕೆಂದು ಆಗ್ರಹಿಸಿ ಇಲ್ಲಿನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘ ಪಟ್ಟಣದ ಜೆಸ್ಕಾಂ ಕಚೇರಿ ಆವರಣದಲ್ಲಿ ಸೋಮವಾರ ಕಪ್ಪು ಬಟ್ಟೆ ಧರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

    ಬಳಿಕ ಮಾತನಾಡಿದ ಸಂಘದ ಕಾರ್ಯದರ್ಶಿ ದಾಸರ ಶ್ರೀನಿವಾಸ್, ಜೆಸ್ಕಾಂ ಸೇರಿ ವಿವಿಧ ವಿಭಾಗಗಳ ನಷ್ಟದ ನೆಪ ಹೇಳಿ, ನೌಕರರ ಹಿತಾಸಕ್ತಿ ಕಡೆಗಣಿಸಿ, ಬಂಡವಾಳಶಾಹಿಗಳಿಗೆ ಪೂರಕ ವಾತಾವರಣ ಕಲ್ಪಿಸಲು ವಿದ್ಯುತ್ ಖಾಸಗೀಕರಣ ಮಾಡುತ್ತಿರುವುದು ಖಂಡನೀಯ ಎಂದರು.

    ವಿದ್ಯುತ್ ಖಾಸಗೀಕರಣದಿಂದ ಜೆಸ್ಕಾಂ ನೌಕರರಿಗೆ, ರೈತರಿಗೆ, ಜನಸಾಮಾನ್ಯರಿಗೆ ತೊಂದರೆಯಾಗಲಿದ್ದು, ವಿದ್ಯುತ್ ಖಾಸಗೀಕರಣ ಪ್ರಕ್ರಿಯೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

    ಎಇಗಳಾದ ಶ್ರೀನಿವಾಸ್‌ರಾಜ್, ಮೋಹನ್‌ಬಾಬು, ಜೆಇ ಮಹಾಂತೇಶ್ ತುಂಬದ್, ಮಹಮದ್ ಸಮೀವುಲ್ಲಾ, ಸಿಬ್ಬಂದಿ ಬಿ.ಎಚ್.ಮಯೂರ್, ವಿಜಯಕುಮಾರ್, ವೆಂಕಟಾಚಲ, ರಾಜಾ, ಕೆ.ಬಸಪ್ಪ, ಅಂಜಿನಪ್ಪ, ಗೋಪಾಲ್, ಶೆಕ್ಷಾವಲಿ, ಶೇಕ್‌ಪೀರಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts