More

    ವಿದ್ಯುತ್ ದರ ಪರಿಷ್ಕರಣೆಗೆ ಸಿದ್ಧತೆ ನಡೆಸಿರುವ ಕೆಇಆರ್‌ಸಿ

    ಬೆಂಗಳೂರು:
    ವಾರ್ಷಿಕ ವಿದ್ಯುತ್ ದರ ಪರಿಷ್ಕರಣೆಗೆ ಮುಂದಾಗಿರುವ ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಮಂಡಳಿ (ಕೆಇಆರ್‌ಸಿ) ೆಬ್ರವರಿಯಲ್ಲಿ ಅದಾಲತ್ ನಿಗದಿ ಮಾಡಲಿದೆ.
    ಬೆಸ್ಕಾಂ, ಮೆಸ್ಕಾಂ, ಜೆಸ್ಕಾಂ, ಹೆಸ್ಕಾಂ ಮತ್ತು ಸೆಸ್ಕ್ ವಿದ್ಯುತ್ ಸರಬರಾಜು ಕಂಪನಿಗಳಿಂದ
    ವಿದ್ಯುತ್ ದರ ಹೆಚ್ಚಳ ಬಗ್ಗೆ ಪ್ರಸ್ತಾವನೆ ಶೀಘ್ರವೇ ಸಲ್ಲಿಕೆಯಾಗಲಿದ್ದು, ಬಳಿಕ ಕೆಇಆರ್‌ಸಿ ಕ್ರಮಕ್ಕೆ ಮುಂದಾಗಲಿದೆ.
    ಎಸ್ಕಾಂಗಳು ಸಲ್ಲಿಸಿರುವ ಬೇಡಿಕೆಗಳ ಮುಂದಿಟ್ಟು, ಕೆಇಆರ್‌ಸಿ ಅಧ್ಯಕ್ಷ ರವಿಕುಮಾರ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಅದಾಲತ್‌ಗಳನ್ನು ಎಲ್ಲಾ ಎಸ್ಕಾಂಗಳಲ್ಲಿಯೂ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಕೆಇಆರ್‌ಸಿ ಮೂಲಗಳು ತಿಳಿಸಿವೆ.

    ಲೋಕಸಭೆ ಚುನಾವಣೆ ಸಾಧ್ಯತೆ?
    ವಿದ್ಯುತ್ ದರ ಪರಿಷ್ಕರಣೆಗೆ ಲೋಕಸಭೆ ಚುನಾವಣೆ ಅಡ್ಡಿಯಾಗಬಹುದು ಎಂದು ಹೇಳಲಾಗುತ್ತಿದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯುವ ಅಂದಾಜಿದೆ. ಒಂದು ವೇಳೆ ಚುನಾವಣೆಗೆ ದಿನಾಂಕ ನಿಗಧಿ ಮಾಡಿ ಚುನಾವಣಾ ಆಯೋಗ ಚುನಾವಣೆ ೋಷಣೆ ಮಾಡಿದರೆ, ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದನ್ನು ಜಾರಿಗೆ ಕೊಡಲು ಸಮಸ್ಯೆ ಎದುರಾಗಬಹುದು. ಚುನಾವಣೆ ಮುಗಿದ ಬಳಿಕವೇ ದರ ಪರಿಷ್ಕರಣೆ ಪ್ರಕಟಿಸಬೇಕಾಗುತ್ತದೆ ಎಂದು ಕೆಇಆರ್‌ಸಿ ಅಧಿಕಾರಿಗಳು ತಿಳಿಸಿದ್ದಾರೆ.

    ಸದಸ್ಯರೊಬ್ಬರ ನಿವೃತ್ತಿ
    ಕೆಇಆರ್‌ಸಿಗೆ ಕಾನೂನು ವಿಭಾಗದಿಂದ ಸದಸ್ಯರಾಗಿದ್ದ ಎಚ್.ಎಂ.ಮಂಜುನಾಥ್ ಅವರು ಡಿಸೆಂಬರ್ ಅಂತ್ಯಕ್ಕೆ ನಿವೃತ್ತರಾಗಿದ್ದು, ಅವರ ಸ್ಥಾನಕ್ಕೆ ಮತ್ತೊಬ್ಬರನ್ನು ಸರ್ಕಾರ ನೇಮಕ ಮಾಡಬೇಕಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಈ ಬಗ್ಗೆ ಸಮಿತಿಯನ್ನು ರಚನೆ ಮಾಡಲಾಗಿದ್ದು, ಶೀಘ್ರವೇ ಹೊಸ ಸದಸ್ಯರು ನೇಮಕಗೊಳ್ಳಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts