More

    ನಾಟಿ ಕೋಳಿ ತಿಂದ್ರೆ ರೋಗ ನಿರೋಧಕ ಶಕ್ತಿ ಹೆಚ್ಚಾಗತ್ತಂತೆ! ನಾಟಿ ಕೋಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​

    ಗದಗ: ಕರೊನಾ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಅತ್ಯವಶ್ಯಕ. ಹಣ್ಣು, ವಿಟಮಿನ್​ ಯುಕ್ತ ಆಹಾರ ಸೇವಿಸುವುದರಿಂದ ಈ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ. ಆದರೆ ಇದೀಗ ನಾಟಿ ಕೋಳಿಯಿಂದಲೂ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ ಎಂದು ವೈದ್ಯರೊಬ್ಬರು ತಿಳಿಸಿದ್ದು, ನಾಟಿ ಕೋಳಿಗೆ ಭಾರೀ ಡಿಮ್ಯಾಂಡ್​ ಶುರುವಾಗಿದೆ.

    ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಯಾರೋ ವೈದ್ಯರು ನಾಟಿ ಕೋಳಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ ಎಂದು ಹೇಳಿದ್ದಾರಂತೆ. ನಾಟಿ ಕೋಳಿಯ ಮಾಂಸದಲ್ಲಿ ಪ್ರೋಟೀನ್​ ಮತ್ತು ವಿಟಮಿನ್​ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಅದನ್ನು ತಿನ್ನುವುದರಿಂದ ದೇಹದ ಮಾಂಸಖಂಡ ಗಟ್ಟಿಯಾಗಿ ಕರೊನಾ ವಿರುದ್ಧ ಹೋರಾಡಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಲಾಗಿದೆಯಂತೆ. ಅದೇ ಕಾರಣಕ್ಕೆ ರೋಣಾ ಪಟ್ಟಣದಲ್ಲಿ ನಾಟಿ ಕೋಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ.

    ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳ ಜನರು ಬೆಳಗ್ಗೆಯೇ ಪೇಟೆಗೆ ಬಂದು ನಾಟಿ ಕೋಳಿ ಮಾರಾಟ ಮಾಡಲಾರಂಭಿಸಿದ್ದಾರೆ. ಮಾರಾಟಕ್ಕೆ ಬೆಳಗ್ಗೆ ಆರರಿಂದ 10ರವರೆಗೆ ಸಮಯಾವಕಾಶವಿದ್ದರೂ 8 ಗಂಟೆಗಾಗಲೇ ಕೋಳಿಗಳು ಖಾಲಿಯಾಗುತ್ತಿವೆಯಂತೆ. ಜನರು ಚೌಕಾಸಿ ಮಾಡದೆಯೇ ಹೇಳಿದ ರೇಟಿಗೆ ಕೋಳಿ ಕೊಳ್ಳುತ್ತಿದ್ದಾರೆ. ಕಳೆದ ವರ್ಷ ಒಂದು ನಾಟಿ ಕೋಳಿಗೆ 250 ರೂಪಾಯಿಯಿದ್ದರೆ ಅದು ಇದೀಗ 400 ರೂಪಾಯಿಗೆ ಏರಿಕೆಯಾಗಿದೆ ಎನ್ನುತ್ತಾರೆ ಅಲ್ಲಿನ ಜನರು.

    ಪ್ರೀತಿಯಲ್ಲಿ ಸಿಲುಕಿಬಿಟ್ಟ ಅಣ್ಣ-ತಂಗಿ! ಮುಂದಿನ ಜನ್ಮದಲ್ಲಿ ಪ್ರೇಮಿಗಳಾಗೋಣ ಎಂದು ಬರೆದಿಟ್ಟು ಆತ್ಮಹತ್ಯೆ

    ಕಾರು ಮಾರೋಕೆ ಫೋಟೋ ಹಾಕುವಾಗ ಗುಪ್ತಾಂಗದ್ದೂ ಫೋಟೋ ಹಾಕಿಬಿಟ್ಟ! ಮಾರಾಟ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts