More

    ಅಂಚೆ ಕಚೇರಿ ಎಟಿಎಂನಿಂದ ಹಣ ಡ್ರಾ

    ಮಂಗಳೂರು: ಎಟಿಎಂ ಯಂತ್ರಗಳಲ್ಲಿ ರಹಸ್ಯ ಕ್ಯಾಮರಾ, ಚಿಪ್‌ಗಳನ್ನು ಅಳವಡಿಸಿ ಹಣ ಎಗರಿಸುವ ‘ಎಟಿಎಂ ಸ್ಕಿಮ್ಮಿಂಗ್’ ದಂಧೆಕೋರರು ನಕಲಿ ಕಾರ್ಡ್ ಬಳಸಿ ಹಣ ತೆಗೆಯಲು ಭಾರತೀಯ ಅಂಚೆ ಇಲಾಖೆ ಎಟಿಎಂಗಳನ್ನೇ ಹೆಚ್ಚಾಗಿ ಬಳಕೆ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್ ತಿಳಿಸಿದರು.

    ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೆಚ್ಚಿನ ಬ್ಯಾಂಕ್‌ಗಳು ಈಗ ಚಿಪ್ ಆಧಾರಿತ ಎಟಿಎಂ ಯಂತ್ರಗಳನ್ನು ಹೊಂದಿದ್ದರೆ, ಭಾರತೀಯ ಅಂಚೆ ಇಲಾಖೆ ಎಟಿಎಂಗಳು ಮಾತ್ರ ಈ ವ್ಯವಸ್ಥೆಯನ್ನು ಇನ್ನೂ ಅಳವಡಿಸಿಲ್ಲ. ಹಾಗಾಗಿ ಆರೋಪಿಗಳು ಅಂಚೆ ಎಟಿಎಂಗಳನ್ನೇ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರು.

    ಸಾರ್ವಜನಿಕರು ಎಟಿಎಂ ಕೇಂದ್ರಗಳಿಗೆ ಹೋಗುವಾಗ ಯಂತ್ರದ ಕೀಪ್ಯಾಡ್‌ನ ಎರಡೂ ಬದಿಗಳಲ್ಲಿ ರಹಸ್ಯ ಕ್ಯಾಮರಾ ಇರುವುದನ್ನು ಕೈಗಳಿಂದ ಮುಟ್ಟಿ ನೋಡಿ ಖಚಿತಪಡಿಸಿಕೊಂಡು ನಂತರ ಮುಂದುವರಿಯಬಹುದು. ಖಾತೆಯಿಂದ ಹಣ ಎಗರಿಸಿರುವುದು ತಿಳಿದು ಬಂದ ಕೂಡಲೇ 3 ದಿನದೊಳಗೆ ಬ್ಯಾಂಕ್‌ಗೆ ಮಾಹಿತಿ ನೀಡಬೇಕಾಗುತ್ತದೆ. ಹಾಗಾದರೆ ಮಾತ್ರ ಕಳೆದುಕೊಂಡ ಪೂರ್ತಿ ಮೊತ್ತ ಸಿಗಲಿದೆ ಎಂದರು.

    ಉಡುಪಿ ಘಟನೆ ತನಿಖೆ: ಬಂಧಿತರು ಅಂತಾರಾಜ್ಯ ತಂಡದವರಾಗಿದ್ದು ತಾವು ಕೃತ್ಯ ನಡೆಸುವ ನಗರಗಳಲ್ಲಿ ಸ್ಥಳೀಯವಾಗಿ ಕೆಲಸ ಮಾಡುವ ಯುವಕರನ್ನು ಸೇರಿಸಿಕೊಂಡು ಅವರಿಗೆ ಹಣ ನೀಡುತ್ತಿದ್ದರು. ಉಡುಪಿಯಲ್ಲಿ ನಡೆದಿರುವ ಸ್ಕಿಮ್ಮಿಂಗ್ ಪ್ರಕರಣಗಳಲ್ಲಿಯೂ ಇವರು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಹೇಳಿದರು.

    ಇದೊಂದು ದೊಡ್ಡ ತಂಡ. ಆರೋಪಿಗಳು ಸ್ಕಿಮ್ಮಿಂಗ್ ಉಪಕರಣಗಳನ್ನು ಎಲ್ಲಿಂದ ಖರೀದಿಸಿದ್ದಾರೆ ಎಂಬ ತನಿಖೆಯೂ ನಡೆಯುತ್ತಿದೆ. ಸಾಮಾನ್ಯವಾಗಿ ಇಂತಹ ಉಪಕರಣ ಸುಲಭವಾಗಿ ಸಿಗುವುದಿಲ್ಲ. ಅದನ್ನು ಅಳವಡಿಸಲು ವಿಶೇಷ ಕೌಶಲವೂ ಬೇಕು. ಇದನ್ನು ಭಾರಿ ವ್ಯವಸ್ಥಿತವಾಗಿ ಮಾಡಲಾಗಿದೆ.
    ಹರಿರಾಂ ಶಂಕರ್ ಡಿಸಿಪಿ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts