More

    ವಿದ್ಯುತ್ ಮಾರ್ಗ ವಿರುದ್ಧ ದೈವ-ದೇವರುಗಳಿಗೆ ಮೊರೆ

    ವಿಟ್ಲ: ರೈತಾಪಿ ವರ್ಗದ ಪಾಲಿಗೆ ಕಂಟಕವಾಗಿರುವ ಉಡುಪಿ- ಕಾಸರಗೋಡು ವಿದ್ಯುತ್ ಮಾರ್ಗ ನಿರ್ಮಾಣ ವಿರುದ್ಧ ದೈವ ದೇವರ ಬಳಿ ದೂರು ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಹೇಳಿದರು.

    400 ಕೆ.ವಿ. ವಿದ್ಯುತ್ ಮಾರ್ಗ ವಿರೋಧಿಸಿ ಮಂಗಳವಾರ ಮುಖ್ಯಮಂತ್ರಿ, ದ.ಕ. ಹಾಗೂ ಉಡುಪಿ ಜಿಲ್ಲಾಧಿಕಾರಿಗಳಿಗೆ ಅಂಚೆ ಕಾರ್ಡ್‌ನಲ್ಲಿ ಪತ್ರ ಬರೆಯುವ ಚಳವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

    ಪ್ರಸಿದ್ಧ ಕ್ಷೇತ್ರಗಳಾದ ಕಟೀಲು, ಪೊಳಲಿ, ಪಣೋಲಿಬೈಲು, ವಿಟ್ಲ ಶ್ರೀ ಪಂಚಲಿಂಗೇಶ್ವರ, ಕೇಪು ಶ್ರೀ ಉಳ್ಳಾಲ್ತಿ ಕ್ಷೇತ್ರ, ಬದಿ ಅಡ್ಕ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಮೂಲ ಸನ್ನಿಧಿ, ಕಡಂಬು ಕಲ್ಲುರ್ಟಿ ಕ್ಷೇತ್ರ, ಆಲಂಗಾರು ಶ್ರೀ ಮೂಕಾಂಬಿಕಾ ದೇವಸ್ಥಾನ, ಕುತ್ತಾರು ಕೊರಗಜ್ಜ ಕ್ಷೇತ್ರ, ಪ್ರಸಿದ್ಧ ಮಸೀದಿಗಳು ಹಾಗೂ ಚರ್ಚ್‌ಗಳಲ್ಲಿ ವಿಶೇಷ ಹರಕೆ ಪ್ರಾರ್ಥನೆ ಸಲ್ಲಿಸಲಾಗುವುದು ಎಂದರು.

    ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ವಿಟ್ಲ ರೈತ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ ಕೆ. ಮಾತನಾಡಿದರು. ಹೋರಾಟ ಸಮಿತಿ ಕಾರ್ಯದರ್ಶಿ ರೋಹಿತಾಕ್ಷ ಬಂಗ ವೀರಕಂಭ, ಲಕ್ಷ್ಮೀ ನಾರಾಯಣ, ಕೃಷ್ಣ ಪ್ರಸಾದ್, ಸುಭಾಷ್ ರೈ ಮೂಡಿಮಾರು, ಚಿತ್ತರಂಜನ್ ನೆಕ್ಕಿಲಾರ್, ಪದ್ಮನಾಭ ಕೊಚ್ಚೋಡಿ, ಶಶಿ ಕೊಚ್ಚೋಡಿ, ಸಂಜೀವ ಮಂಜಲಾಡಿ, ಅಣ್ಣ ಗೌಡ ಮಂಜಲಾಡಿ, ವಿಶುಕುಮಾರ್, ಭಾಸ್ಕರ್ ಗೌಡ, ಜಾನ್ ಮಸ್ಕರೇನಸ್, ಶಿವರಾಮ ಗೌಡ, ರಾಬರ್ಟ್ ಮಸ್ಕಾರೆನ್ಹಸ್, ಸಾಲಿ ಮಂಗಲಪದವು, ರಜಾಕ್ ಮಂಗಲಪದವು, ಆನಂದ ಗೌಡ, ವಿಷ್ಣು ಭಟ್ ಆಲಂಗಾರು ಮತ್ತಿತರರಿದ್ದರು.

    ವಿಟ್ಲ ಪಪಂಗೆ ಪತ್ರ: 400 ಕೆ.ವಿ. ವಿದ್ಯುತ್ ಮಾರ್ಗವನ್ನು ರೈತರ ಭೂಮಿಯಲ್ಲಿ ನಿರ್ಮಾಣ ಮಾಡುವುದಕ್ಕೆ ವಿರೋಧವಿದೆ. ವಿಟ್ಲ ಪಟ್ಟಣ ಪಂಚಾಯಿತಿ ಈ ಯೋಜನೆಗೆ ಯಾವುದೇ ಕಾರಣಕ್ಕೂ ನಿರಾಕ್ಷೇಪಣಾ ಪತ್ರ ನೀಡಬಾರದು ಎಂದು ಆಗ್ರಹಿಸಿ ರೈತರು ಹೋರಾಟ ಸಮಿತಿ ಮೂಲಕ ವಿಟ್ಲ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ/ ಮುಖ್ಯಾಧಿಕಾರಿಗೆ ಮನವಿ ಪತ್ರವನ್ನು ಕಂದಾಯ ನಿರೀಕ್ಷಕ ಪಕೀರ ಮೂಲ್ಯ ಅವರ ಮೂಲಕ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts