More

    ಅಂಚೆ ಮುದ್ರೆ ಮೇಲೆ ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರ

    ತುಮಕೂರು: ಶತಮಾನದ ಸಂತ ಡಾ.ಶಿವಕುಮಾರ ಸ್ವಾಮೀಜಿ ಅವರ ಸೇವೆಯನ್ನು ನೆನಪಿಸಿಕೊಂಡಿರುವ ಭಾರತೀಯ ಅಂಚೆ ಇಲಾಖೆ ಅಂಚೆ ಕಚೇರಿಯಲ್ಲಿ ಸ್ವಾಮೀಜಿ ಭಾವಚಿತ್ರವಿರುವ ಮುದ್ರೆ ಉಪಯೋಗಿಸಲಿದೆ.

    ಮಠದ ವ್ಯಾಪ್ತಿಯಲ್ಲಿರುವ ಕ್ಯಾತಸಂದ್ರ ಅಂಚೆ ಕಚೇರಿಯಿಂದ ಹೋಗುವ ಹಾಗೂ ಇಲ್ಲಿಗೆ ಬರುವ ಎಲ್ಲ ಪತ್ರಗಳ ಮೇಲೆ ಒತ್ತುವ ಮುದ್ರೆ ಇನ್ನೂ ಮುಂದೆ ಸ್ವಾಮೀಜಿ ಭಾವಚಿತ್ರವಿರಲಿದೆ.

    ಫೆ.21 ಹಾಗೂ 23ರಂದು ತುಮಕೂರಿನಲ್ಲಿ ನಡೆಯುವ ವಿಭಾಗೀಯ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಮೇಳ ‘ತುಮಕೂರು ಪೆಕ್ಸ್-2020’ರಲ್ಲಿ ಈ ಮುದ್ರೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಅಂಚೆ ಅಧೀಕ್ಷಕ ಕೆ.ವಿ.ಅನಂತ್‌ರಾಮ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಚೆ ಇಲಾಖೆ ಸ್ವಾಮೀಜಿ ಹೆಸರಿನಲ್ಲಿ ಈಗಾಗಲೇ ಪೋಸ್ಟ್ ಕವರ್ ಎರಡು ಸಲ ಬಿಡುಗಡೆ ಮಾಡಿದ್ದು, ಈಗ ಮುದ್ರೆ ಕೂಡ ಬಿಡುಗಡೆ ಮಾಡಿ ಸ್ವಾಮೀಜಿಗೆ ಗೌರವ ಸೂಚಿಸುತ್ತಿದೆ ಎಂದರು.

    ತುಮಕೂರುಪೆಕ್ಸ್-2020: ಭಾರತೀಯ ಅಂಚೆ ಇಲಾಖೆ ತುಮಕೂರಿನ ಸಿದ್ಧಿ ವಿನಾಯಕ ಸೇವಾ ಮಂಡಳಿ ಭವನದಲ್ಲಿ ೆ.21 ರಿಂದ 23ರವರೆಗೆ ಹವ್ಯಾಸಗಳ ರಾಜ ಎಂದು ಕರೆಯಲ್ಪಡುವ ಫಿಲಾಟೆಲಿ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಿದೆ ಎಂದು ಕೆ.ವಿ.ಅನಂತ್‌ರಾಮ್ ಮಾಹಿತಿ ನೀಡಿದರು.

    ಸ್ಟ್ಯಾಂಪ್ ಸಂಗ್ರಹ ಇಂದು ವಿಶ್ವದ ಅತ್ಯಂತ ಜನಪ್ರಿಯ ಹವ್ಯಾಸ, ಫಿಲಾಟೆಲಿ ಅಂಚೆ ಚೀಟಿಗಳ ಮತ್ತು ಅಂಚೆ ಇತಿಹಾಸ ಸಂಬಂಧಿತ ವಸ್ತುಗಳ ಅಧ್ಯಯನವಾಗಿದೆ. ಫಿಲಾಟೆಲಿಗೆ ಪ್ರೋತ್ಸಾಹ ನೀಡಲು ದೇಶಾದ್ಯಂತ ಇಂದು 68 ಫಿಲಾಟೆಲಿಕ್ ಬ್ಯೂರೋ ಮುಖ್ಯ ಅಂಚೆ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದರು.

    ಜಿಲ್ಲೆಯಲ್ಲಿ 2ನೇ ಬಾರಿಗೆ ಆಯೋಜಿಸಲಾಗಿರುವ ಈ ಪ್ರದರ್ಶನ ಮೇಳ ಬೆಳಗ್ಗೆ 10 ರಿಂದ ಸಂಜೆ 7ರ ವರೆಗೆ ನಡೆಯಲಿದ್ದು, ವೈವಿಧ್ಯಮಯ ಅಂಚೆ ಚೀಟಿಗಳು, ಲಕೋಟೆಗಳು, ಪಿಕ್ಚರ್ ಪೋಸ್ಟ್ ಕಾರ್ಡ್‌ಗಳು ಹಾಗೂ ಫಿಲಾಟೆಲಿಗೆ ಸಂಬಂಧಪಟ್ಟ ವಸ್ತುಗಳು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಅಂಚೆ ಚೀಟಿ ಸಂಗ್ರಹಣೆ ಪ್ರೇಕ್ಷಕರ ಪ್ರದರ್ಶನಕ್ಕಿಡಲಾಗಿದೆ ಎಂದರು.
    70 ಹವ್ಯಾಸಿ ಅಂಚೆ ಚೀಟಿ ಸಂಗ್ರಹಗಾರರು ಭಾಗವಹಿಸಲಿದ್ದು, 3 ವರ್ಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಮಕ್ಕಳು, ಹಿರಿಯರು ಹಾಗೂ ಹವ್ಯಾಸಿ ಅಂಚೆ ಚೀಟಿ ಸಂಗ್ರಹಗಾರರು ಭಾಗವಹಿಸುವರು ಎಂದರು. ಸಹಾಯಕ ಅಂಚೆ ಅಧೀಕ್ಷಕ ಚಂದ್ರನಾಯ್ಕ್ ಇದ್ದರು.

    ಮೇಳದಲ್ಲಿ ಜನರಿಗಿರುವ ಸೌಲಭ್ಯ: ಅಂಚೆ ಚೀಟಿ ಸಂಗ್ರಹಣೆ ಖಾತೆ ತೆರೆಯುವ ವ್ಯವಸ್ಥೆ ‘ My stamp’ ಸ್ಥಳದಲ್ಲಿಯೇ ಸ್ವಂತ ಭಾವಚಿತ್ರವಿರುವ ಅಂಚೆ ಚೀಟಿಗಳನ್ನು ವಿನ್ಯಾಸಗೊಳಿಸುವ ವ್ಯವಸ್ಥೆ. ವಿಶೇಷ ಅಂಚೆ ಚೀಟಿ ಹಾಗೂ ಲಕೋಟೆಗಳ ಮಾರಾಟ. ಸಚಿತ್ರ ಅಂಚೆ ಕಾರ್ಡ್ ಮಾರಾಟ. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ ತೆರೆಯುವ ವ್ಯವಸ್ಥೆ. 10 ವರ್ಷದೊಳಗಿನ ಮಕ್ಕಳು ಹಾಗೂ ಅಂಗವಿಕಲರ ಆಧಾರ್ ಬಯೋಮೇಟ್ರಿಕ್ ಸಂಗ್ರಹಣೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts