More

    ಖಾತೆ ಹಂಚಿಕೆ ಫೈನಲ್​: ಅದಲು-ಬದಲಾಯ್ತು ಹಾಲಿ ಸಚಿವರ ಖಾತೆಗಳು..!

    ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಖಾತೆ ಹಂಚಿಕೆಯ ಸರ್ಕಸ್ ಕೊನೆಯಾಗಿದ್ದು, ನೂತನ ಏಳು ಸಚಿವರಿಗೆ ಖಾತೆಗಳ ಹಂಚಿಕೆ ಜತೆಗೆ ಹಾಲಿ ಸಚಿವರ ಖಾತೆಗಳಲ್ಲಿಯೂ ಬದಲಾವಣೆಗಳನ್ನು ಮಾಡಲಾಗಿದೆ.

    ಬದಲಾವಣೆಗೊಂಡ ಸಚಿವರ ಪಟ್ಟಿ ಈ ಕೆಳಕಂಡಂತಿದೆ
    1. ಸಿಎಂ ಬಿ.ಎಸ್​. ಯಡಿಯೂರಪ್ಪ: ಬೆಂಗಳೂರು ಅಭಿವೃದ್ಧಿ ಮತ್ತು ಇಂಧನ
    2. ಉಮೇಶ್​ ಕತ್ತಿ: ಆಹಾರ ಮತ್ತು ನಾಗರಿಕ ಪೂರೈಕೆ
    3. ಬಸವರಾಜ್​ ಬೊಮ್ಮಾಯಿ: ಗೃಹ ಖಾತೆ ಜತೆಗೆ ಕಾನೂನು ಸಂಸದೀಯ
    4. ಜೆ.ಸಿ. ಮಾಧುಸ್ವಾಮಿ: ವೈದ್ಯಕೀಯ ಶಿಕ್ಷಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ
    5. ಅರವಿಂದ ಲಿಂಬಾವಳಿ: ಅರಣ್ಯ ಖಾತೆ
    6. ಎಂಟಿಬಿ ನಾಗರಾಜ್​: ಅಬಕಾರಿ
    7. ಮುರುಗೇಶ್​ ನಿರಾಣಿ: ಗಣಿಗಾರಿಕೆ
    8. ಕೋಟಾ ಶ್ರೀನಿವಾಸ್​ ಪೂಜಾರಿ: ಮುಜರಾಯಿ ಜೊತೆ ಹಿಂದುಳಿದ ವರ್ಗ
    9. ಆನಂದ್​ ಸಿಂಗ್​: ಪ್ರವಾಸೋದ್ಯಮ ಮತ್ತು ಪರಿಸರ
    10. ಪ್ರಭು ಚೌಹಾಣ್​: ಪಶುಸಂಗೋಪನಾ
    11. ನಾರಾಯಣಗೌಡ: ಯುವಜನ ಸೇವೆ ಮತ್ತು ಕ್ರೀಡೆ, ಹಜ್ ಮತ್ತು ವಕ್ಫ್
    12. ಸಿ.ಪಿ. ಯೋಗೇಶ್ವರ್​: ಸಣ್ಣ ನೀರಾವರಿ
    13. ಆರ್​. ಶಂಕರ್​: ಪೌರಾಡಳಿತ ಮತ್ತು ರೇಷ್ಮೆ
    14. ಗೋಪಾಲಯ್ಯ: ತೋಟಗಾರಿಕೆ ಮತ್ತು ಸಕ್ಕರೆ
    15. ಅಂಗಾರ: ಮೀನುಗಾರಿಕೆ ಮತ್ತು ಬಂದರು
    16. ಸಿಸಿ ಪಾಟೀಲ್​: ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ
    17. ಡಾ. ಸುಧಾಕರ್​: ಆರೋಗ್ಯ ಇಲಾಖೆ
    18. ಶಿವರಾಮ್​ ಹೆಬ್ಬಾರ್​: ಕಾರ್ಮಿಕ ಸಚಿವ

    ಖಾತೆ ಬದಲಾವಣೆ ಬೆನ್ನಲ್ಲೇ ಕೆಲ ಸಚಿವರ ಅಸಮಾಧಾನ ಭುಗಿಲೆದ್ದಿದ್ದು, ಸಚಿವ ಕೆ. ಸುಧಾಕರ್​ ಮನೆಯಲ್ಲಿ ಸಭೆ ಸೇರಿದ್ದಾರೆ. ಖಾತೆ ಬದಲಿಸುವ ಬಗ್ಗೆ ಕೊನೆಯ ಕ್ಷಣದವರೆಗೂ ಸಿಎಂ ಮೇಲೆ ಅಸಮಾಧಾನಿತರು ಒತ್ತಡ ಹಾಕಿದ್ದರು. ಆದರೆ, ಯಾವುದೇ ಒತ್ತಡಕ್ಕೆ ಸಿಎಂ ಮಣಿದಿಲ್ಲ. ನಿನ್ನೆ ರಾತ್ರಿಯೇ ಪಟ್ಟಿಯನ್ನು ತಯಾರು ಮಾಡಿ ರಾಜ್ಯಪಾಲರ ಅಂಕಿತಕ್ಕೆ ಸಿಎಂ ಕಳುಹಿಸಿದ್ದರು. ಇದೀಗ ಕೊನೆಗೂ ಪಟ್ಟಿ ಬಿಡುಗಡೆಯಾಗಿದ್ದು, ಸಚಿವರ ಖಾತೆಗಳ ಬದಲಾವಣೆ ಬೆನ್ನಲ್ಲೇ ಅಸಮಧಾನ ಭುಗಿಲೆದ್ದಿದೆ.

    ಸುಧಕಾರ್ ನಿವಾಸದಲ್ಲಿ ಸತತ ಒಂದು ಗಂಟೆಯಿಂದ ಸಚಿವರ ಮಾತುಕತೆ ಮುಂದೂವರಿದಿದೆ. ಎಂಟಿಬಿ, ಗೋಪಾಲಯ್ಯ ಜತೆ ಸುಧಕಾರ್ ಚರ್ಚೆ ನಡೆಸುತ್ತಿದ್ದಾರೆ. ಮಾತುಕತೆ ವೇಳೆ ಮುಂಬೈ ಟೀಮ್ ಒಗ್ಗಟ್ಟಿನ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಅಂದು ಇಲ್ಲದ ಒಗ್ಗಟ್ಟು ಇಂದು ಇಲ್ಲದಿರುವುದಕ್ಕೆ ಈ ರೀತಿ ಆಗ್ತಿದೆ ಎನ್ನುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸುವ ಬಗ್ಗೆ ಚರ್ಚೆ ಮಡೆಸುತ್ತಿದ್ದಾರೆಂದು ತಿಳಿದುಬಂದಿದೆ.

    ಖಾತೆ ಬದಲಾವಣೆ ಸುಳಿವು ಬೆನ್ನಲ್ಲೇ ಸಚಿವ ಮಾಧುಸ್ವಾಮಿ ಅಸಮಾಧಾನದ ಮಾತು

    ಖಾತೆ ಬದಲಾವಣೆ ಸುಳಿವು: ಸಚಿವರ ಅಸಮಾಧಾನ, ಮಾಧುಸ್ವಾಮಿ ರಾಜೀನಾಮೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts