More

    ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ

    ಕನಕಗಿರಿ: ಜನ ಸಂಖ್ಯೆಗೆ ಅನುಗುಣವಾಗಿ ಮೀಸಲು ಪ್ರಮಾಣ ಹೆಚ್ಚಿಸುವಂತೆ ಒತ್ತಾಯಿಸಿ ವಾಲ್ಮೀಕಿ ಮಹಾಸಭಾ ತಾಲೂಕು ಘಟಕ ಪದಾಧಿಕಾರಿಗಳು ಶುಕ್ರವಾರ ತಹಸೀಲ್ದಾರ್ ರವಿ ಅಂಗಡಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

    ಸಮುದಾಯದ ಮುಖಂಡ ಹನುಮೇಶ ನಾಯಕ ಮಾತನಾಡಿ, ಸಂವಿಧಾನದ ಆಶಯದಂತೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸೌಲಭ್ಯ ಪಡೆಯಲು 40 ವರ್ಷಗಳಿಂದಲೂ ಜನಪ್ರತಿನಿಧಿಗಳು ಹಾಗೂ ಮುಖಂಡರು ಹರಸಾಹಸ ಪಟ್ಟಿದ್ದಾರೆ. ಆದರೂ ಸರ್ಕಾರ ಸ್ಪಂದಿಸಿಲ್ಲ. ಸರ್ಕಾರ ಶೇ 7.5 ಮೀಸಲಾತಿ ಹೆಚ್ಚಿಸಬೇಕೆಂದು ಆಗ್ರಹಿಸಿದರು.

    ಕೆಡಿಪಿ ನಾಮನಿರ್ದೇಶನ ಸದಸ್ಯ ಗುರುನಗೌಡ ಮಾತನಾಡಿದರು. ಗ್ಯಾನಪ್ಪ ಗಾಣಧಾಳ, ಬಸವರಾಜ ಹೇರೂರು, ಶರತ್ಚಂದ್ರ ನಾಯಕ ಮಾತನಾಡಿದರು. ಸಮುದಾಯದ ಗೌರವಾಧ್ಯಕ್ಷ ರಾಮನಗೌಡ ಬುನ್ನಟ್ಟಿ, ಪ್ರಮುಖರಾದ ರಂಗಪ್ಪ ಕೊರಗಟಗಿ, ಶರಣಪ್ಪ ಸೋಮಸಾಗರ, ಕೆ.ಶೇಖರಪ್ಪ ನಾಯಕ ವಡಕಿ, ವೀರಬಸನಗೌಡ, ರಾಮಚಂದ್ರಪ್ಪ ಆಕಳಕುಂಪಿ, ನಾಗರಾಜ ಇದ್ಲಾಪುರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts