More

    ಹಾಶೀಂ ಆಮ್ಲಾ ದಾಖಲೆ ಮುರಿದ ಶುಭಮಾನ್: ಕಳಪೆ ಔಟ್ ಫೀಲ್ಡ್‌ನಿಂದ ರೋಹಿತ್‌ಗೆ ಗಾಯ

    ಧರ್ಮಶಾಲಾ: ಮೈದಾನದ ಕೆಟ್ಟ ಔಟ್‌ಫೀಲ್ಡ್ ಬಗ್ಗೆ ವಿಶ್ವಕಪ್‌ನಲ್ಲಿ ಆಡುತ್ತಿರುವ ವಿವಿಧ ವಿದೇಶಿ ತಂಡಗಳು ದೂರುತ್ತಲೇ ಬಂದಿದ್ದವು. ಭಾನುವಾರ ನ್ಯೂಜಿಲೆಂಡ್ ವಿರುದ್ಧ ಪಂದ್ಯದ ವೇಳೆ ಆತಿಥೇಯ ಟೀಮ್ ಇಂಡಿಯಾ ಆಟಗಾರರಿಗೂ ಇದರ ಅನುಭವವಾಯಿತು. ಕೆಟ್ಟ ಔಟ್‌ಫೀಲ್ಡ್‌ನಿಂದಾಗಿ ಪಂದ್ಯದಲ್ಲಿ ಭಾರತೀಯರ ಫೀಲ್ಡಿಂಗ್ ಕಳಪೆಯಾಗಿತ್ತು. 10ನೇ ಓವರ್‌ನ ಕೊನೇ ಎಸೆತದಲ್ಲಿ ಚೆಂಡನ್ನು ತಡೆಯುವ ಯತ್ನದಲ್ಲಿ ಜಾರಿದ ರೋಹಿತ್ ಶರ್ಮ ಕೈ ಬೆರಳಿಗೆ ಗಾಯ ಮಾಡಿಕೊಂಡರು. ತಕ್ಷಣವೇ ಚಿಕಿತ್ಸೆಗೆ ಮೈದಾನ ತೊರೆದರು. ಬಳಿಕ 35ನೇ ಓವರ್‌ನಲ್ಲಿ ೈನ್ ಲೆಗ್‌ನಲ್ಲಿದ್ದ ಜಸ್‌ಪ್ರೀತ್ ಬುಮ್ರಾ ಚೆಂಡನ್ನು ತಡೆಯುವ ಯತ್ನ ಮಾಡದೆ ಗಾಯದಿಂದ ಪಾರಾದರು.

    2 ಸಾವಿರ ರನ್ ಪೂರೈಸಿದ ಗಿಲ್
    ಯುವ ಬ್ಯಾಟರ್ ಶುಭಮಾನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 2 ಸಾವಿರ ರನ್ ಪೂರೈಸಿದ ಬ್ಯಾಟರ್ ಎನಿಸಿದರು. 24 ವರ್ಷದ, ಶುಭಮಾನ್ ಗಿಲ್ 38 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿ 12 ವರ್ಷದ ದಾಖಲೆಯನ್ನು ಅಳಿಸಿ ಹಾಕಿದರು.2011ರಲ್ಲಿ ದ.ಆಫ್ರಿಕಾದ ಹಾಶೀಂ ಆಮ್ಲಾ 40 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts