More

    ಬನ್ನಿ ಮುಡಿಯುವ ವೇದಿಕೆಗೆ ಶಿವಮೊಗ್ಗದಲ್ಲಿ ಗುದ್ದಲಿ ಪೂಜೆ

    ಶಿವಮೊಗ್ಗ: ನಗರ ಪಾಲಿಕೆಯಿಂದ ಮಹಿಳಾ ದಸರಾ, ಮಕ್ಕಳ ದಸರಾ ಅಂಗವಾಗಿ ಕೆಲವು ಸ್ಪರ್ಧೆಗಳು ನಡೆದ ಬೆನ್ನಲ್ಲೇ ಇದೀಗ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಾಣ ಮಾಡಲು ಬುಧವಾರ ಮೇಯರ್ ಎಸ್.ಶಿವಕುಮಾರ್ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.

    1.50 ಕೋಟಿ ರೂ. ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅಲ್ಲಿಂದ ಮೌಖಿಕವಾಗಿ ಒಪ್ಪಿಗೆ ಸಿಕ್ಕಿದೆಯೇ ಹೊರತು ಕಾನೂನಾತ್ಮಕವಾಗಿ ನಯಾ ಪೈಸೆ ಬಿಡುಗಡೆಯಾಗಿಲ್ಲ. ಆದರೂ ಸರ್ಕಾರದ ಮೇಲಿನ ಭರವಸೆಯಿಂದ ದಸರಾಕ್ಕೆ ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿದೆ. ವೇದಿಕೆ ನಿರ್ಮಾಣ ಗುದ್ದಲಿ ಪೂಜೆಯಲ್ಲಿ ಉಪಮೇಯರ್ ಲಕ್ಷ್ಮೀ ಶಂಕರನಾಯ್ಕ, ಆಯುಕ್ತ ಕೆ.ಮಾಯಣ್ಣ ಗೌಡ, ಸದಸ್ಯರಾದ ಎಸ್.ಜ್ಞಾನೇಶ್ವರ್, ಅನಿತಾ ರವಿಶಂಕರ್, ರೇಖಾ ರಂಗನಾಥ್, ಧೀರರಾಜ್ ಹೊನ್ನವಿಲೆ ಮುಂತಾದವರು ಭಾಗವಹಿಸಿದ್ದರು.
    ಸರ್ಕಾರದ ಅನುದಾನ ಬಿಡುಗಡೆ ಮಾಡದೇ ಇದ್ದರೂ ಜಂಬೂ ಸವಾರಿಗೆ ಆನೆಗಳನ್ನು ಕಳುಹಿಸಲು ಗ್ರೀನ್ ಸಿಗ್ನಲ್ ನೀಡಿದೆ. ಮೂರು ಆನೆಗಳಿಗೆ ಸಕ್ರೆಬೈಲು ಬಿಡಾರದೊಳಗೆ ಹಾಗೂ ಮುಖ್ಯ ರಸ್ತೆಯಲ್ಲಿ ಮಾವುತರು ತರಬೇತಿ ನೀಡುವಲ್ಲಿ ಮಗ್ನರಾಗಿದ್ದಾರೆ. ಮೂರೂ ಆನೆಗಳಿಗೆ ಏಕರೂಪ ನಡಿಗೆ ಕಲಿಸಲಾಗುತ್ತಿದೆ. ಸಾಗರ್‌ಗೆ ಹೇಮಾವತಿ ಹಾಗೂ ನೇತ್ರಾವತಿ ಅಕ್ಕಪಕ್ಕದಲ್ಲಿ ಸಾಥ್ ನೀಡುತ್ತಿದ್ದಾರೆ. ಇನ್ನು 10 ದಿನಗಳ ಬಳಿಕ ಮೂರೂ ಆನೆಗಳು ಶಿವಮೊಗ್ಗ ಪ್ರವೇಶಿಸಲಿವೆ.
    38 ವರ್ಷದ ಸುಮಾರು 3,500 ಕೆಜಿ ತೂಕದ ಸಾಗರ್ ಈ ಬಾರಿಯೂ ಅಂಬಾರಿ ಹೊರಲಿದ್ದಾನೆ. ಬಿಡಾರದ ಕಿರಿಯ ಆನೆಗಳಲ್ಲೊಂದಾದ 1,700 ಕೆಜಿ ತೂಕ ಹಾಗೂ 9 ವರ್ಷದ ಹೇಮಾವತಿ, 2,250 ಕೆಜಿ ಬಾರದ 25 ವರ್ಷದ ನೇತ್ರಾವತಿ ಮೆರವಣಿಗೆಯಲ್ಲಿ ಸಾಗರ್ ಜತೆಗೆ ಶಿವಮೊಗ್ಗದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts