More

    ಮಠಾಧೀಶರ ಸಂಧಾನ ಸಫಲ, ರಾಜವಾಳದಲ್ಲಿ ಜಾಕ್‌ವೆಲ್ ನಿರ್ಮಾಣಕ್ಕೆ ಗ್ರಾಮಸ್ಥರ ಒಪ್ಪಿಗೆ

    ಹೂವಿನಹಡಗಲಿ: ತಾಲೂಕಿನ ರಾಜವಾಳದಲ್ಲಿ ಮಾಲವಿ ಜಲಾಶಯದ ಜಾಕ್‌ವೆಲ್ ನಿರ್ಮಾಣ ಕಾಮಗಾರಿಗೆ ಗ್ರಾಮಸ್ಥರಿಂದ ಸೋಮವಾರ ತೀವ್ರ ವಿರೋಧ ವ್ಯಕ್ತವಾಯಿತು. ಬಳಿಕ ವಿವಿಧ ಮಠಾಧೀಶರ ನೇತೃತ್ವದಲ್ಲಿ ಸಂಧಾನ ಹಾಗೂ ಶಾಸಕ ಭೀಮಾನಾಯ್ಕ ಭರವಸೆ ಮೇರೆಗೆ ಭೂಮಿ ಪೂಜೆಗೆ ಅವಕಾಶ ಮಾಡಿಕೊಡಲಾಯಿತು.

    ಸೋಮವಾರ ಬೆಳಗ್ಗೆ ಜಾಕ್‌ವೆಲ್ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ್ದ ಶಾಸಕ ಎಸ್.ಭೀಮಾನಾಯ್ಕ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಹಬೊಹಳ್ಳಿ ಮಾಲವಿ ಜಲಾಶಯಕ್ಕೆ ಹೋಗುವ ಜಾಕ್‌ವೆಲ್ ನಿರ್ಮಿಸಲು ಅವಕಾಶ ನೀಡಲ್ಲ. ಈ ಸ್ಥಳ ದಲಿತರ ರುದ್ರಭೂಮಿಯಾಗಿದೆ. ಅಲ್ಲದೆ. ರಾಜವಾಳ ಸೇರಿ ಏಳು ಗ್ರಾಮಗಳಿಗೆ ಕುಡಿವ ನೀರು ಪೂರೈಸುವ ಪೈಪ್‌ಲೈನ್‌ಗಳು ಹಾದುಹೋಗಿವೆ. ತಾಲೂಕಿನ ರೈತರಿಗೆ ತೊಂದರೆಯಾಗಂದತೆ ಬೇರೆ ಜಾಗದಲ್ಲಿ ಜಾಕ್‌ವೆಲ್ ನಿರ್ಮಿಸಬೇಕು ಎಂದು ಪಟ್ಟುಹಿಡಿದರು.

    ಬಳಿಕ ಶಾಸಕ ಭೀಮಾನಾಯ್ಕ ಮಾತನಾಡಿ, ಮಾಲವಿ ಜಲಾಶಯಕ್ಕೆ ನೀರು ತುಂಬಿಸಿ ಹಬೊಹಳ್ಳಿ ಭಾಗದ ರೈತರು, ಜನರಿಗೆ ಶಾಶ್ವತ ನೀರು ಕೊಡುವುದು ನನ್ನ ಕನಸಿನ ಯೋಜನೆಯಾಗಿದೆ. ಅಲ್ಲದೆ ಹಗರಿಬೊಮ್ಮನಹಳ್ಳಿ ಹಾಗೂ ಶ್ರೀ ಕ್ಷೇತ್ರ ಕೊಟ್ಟೂರೇಶ್ವರ ಜಾತ್ರೆ ವೇಳೆ ನೀರಿಗಾಗಿ ಜನ ಪರಿತಪಿಸುತ್ತಾರೆ. ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾಗಿದೆ. ಆದ್ದರಿಂದ ಕಾಮಗಾರಿಗೆ ಸಹಕರಿಸಬೇಕು ಎಂದು ಕೋರಿದರು.

    ಸ್ವಾಮೀಜಿಗಳ ನೇತೃತ್ವದಲ್ಲಿ ಸಂಧಾನ: ಗ್ರಾಮಸ್ಥರು ಪಟ್ಟು ಸಡಿಸಲಿಸದ ಕಾರಣ ಬಳಿಕ ನಂದಿಪುರ ಕ್ಷೇತ್ರದ ಮಹೇಶ್ವರ ಸ್ವಾಮೀಜಿ, ಕೊಟ್ಟೂರು ಚಾನುಕೋಟೆ ಮಠದ ಸಿದ್ಧಲಿಂಗ ಸ್ವಾಮೀಜಿ, ಹಬೊಹಳ್ಳಿ ಹಾಲಶಂಕರ ಸ್ವಾಮೀಜಿ, ನಂದಿಪುರ ಚರಂತೇಶ್ವರ ಸ್ವಾಮೀಜಿ, ಬೆಣ್ಣಿಹಳ್ಳಿ ಶ್ರೀಗಳ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಿ ಮನವೊಲಿಸಲಾಯಿತು. ಶಾಸಕ ಎಸ್.ಭೀಮಾನಾಯ್ಕ ಮಾತನಾಡಿ, ರಾಜವಾಳ ಗ್ರಾಮಸ್ಥರ ಬೇಡಿಕೆಯಂತೆ ರುದ್ರಭೂಮಿಗೆ ಒಂದು ಎಕರೆ ಸರ್ಕಾರಿ ಸ್ಥಳ ಹಾಗೂ ಗ್ರಾಮದ ದೇವಸ್ಥಾನ ಜೀರ್ಣೋದ್ಧಾರಕ್ಕೆ ಹಣ ನೀಡುವುದಾಗಿ ಭರವಸೆ ನೀಡಿದರು. ಇದಕ್ಕೆ ಗ್ರಾಮಸ್ಥರು ಒಪ್ಪಿಕೊಳ್ಳುವ ಮೂಲಕ ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಜಾಕ್‌ವೆಲ್ ನಿರ್ಮಾಣ ವಿವಾದ ಸುಖಾಂತ್ಯ ಕಂಡಿತು. ನಂತರ ಶಾಸಕ ಭೀಮಾನಾಯ್ಕ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೋಮಲಿಂಗಪ್ಪ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ, ಹೆಗ್ಡಾಳ್ ರಾಮಣ್ಣ, ಹಾಲ್ದಾಳ ವಿಜಯ ಕುಮಾರ್, ಅಡಿವೆಪ್ಪ, ಬಾಬುವಲಿ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೋಣೆಪ್ಪ, ಹುಡೇದ ಗುರುಬಸವರಾಜ್, ಕನ್ನಡ ಸೇನೆ ತಾಲೂಕು ಅಧ್ಯಕ್ಷ ಕಲಿಕೇರಿ ಬಸವರಾಜ್, ಗ್ರಾಪಂ ಉಪಾಧ್ಯಕ್ಷ ಬಿ.ಹಾಲೇಶ, ಎ.ಕೆ.ಹಾಲಪ್ಪ, ಮರಿಯಪ್ಪ, ಹನುಮಂತಪ್ಪ, ಸಿಂಗಟಾಲೂರು ಏತ ನೀರಾವರಿ ಇಇ ಐಗೋಳ್ ಪ್ರಕಾಶ್, ರಾಠೋಡ್, ಗುತ್ತಿಗೆದಾರ ನರೇಂದ್ರ, ಮುಟುಗನಹಳ್ಳಿ ಕೊಟ್ರೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts