More

    ಇದು ರಾಜಕೀಯ ಪ್ರೇರಿತ… ಇಡಿ ಮುಂದೆ ಇಂದು ಹಾಜರಾಗುವುದಿಲ್ಲ ಅರವಿಂದ್​ ಕೇಜ್ರಿವಾಲ್​

    ನವದೆಹಲಿ: ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಸಂಬಂಧ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್​ ನೀಡಿದ್ದು, ಇಂದಿನ ವಿಚಾರಣೆಗೆ ಕೇಜ್ರಿವಾಲ್​ ಹಾಜರಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

    ಪ್ರಕರಣದ ವಿಚಾರಣೆಗೆ ಹಾಜರಾಗದೇ ಇರಲು ಕಾರಣವುಳ್ಳ ಅಧಿಕೃತ ಪತ್ರವನ್ನು ಇಡಿ ಅಧಿಕಾರಿಗಳು ಕೇಜ್ರಿವಾಲ್‌ರಿಂದ ಇನ್ನೂ ಸ್ವೀಕರಿಸಿಲ್ಲ. ತಮಗೆ ಬಂದಿರುವ ಸಮನ್ಸ್ ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ಕೇಜ್ರಿವಾಲ್ ತನಿಖಾ ಸಂಸ್ಥೆಗೆ ಪತ್ರ ಬರೆದಿದ್ದು, ಬಿಜೆಪಿ ಮನವಿ ಮೇರೆಗೆ ಸಮನ್ಸ್ ಕಳುಹಿಸಲಾಗಿದೆ ಎಂದು ಆರೋಪಿಸಿದ್ದಾರೆ.

    ನಾಲ್ಕ ರಾಜ್ಯಗಳಲ್ಲಿ ಚುನಾವಣಾ ಪ್ರಚಾರವನ್ನು ತಡೆಯುವ ಉದ್ದೇಶದಿಂದ ನನಗೆ ಇಡಿ ನೋಟಿಸ್​ ನೀಡಿದೆ. ತಕ್ಷಣ ಇಡಿ ನೋಟಿಸ್​ ಅನ್ನು ಹಿಂಪಡೆಯಬೇಕೆಂದು ಕೇಜ್ರಿವಾಲ್​ ಆಗ್ರಹಿಸಿದ್ದಾರೆ. ಎಎಪಿ ಮೂಲಗಳ ಪ್ರಕಾರ ದೆಹಲಿ ಸಿಎಂಗೆ ಇಂದು ಮಧ್ಯಪ್ರದೇಶದ ಸಿಂಗ್ರೌಲಿ ಕ್ಷೇತ್ರದಲ್ಲಿ ಪ್ರಚಾರ ಸಭೆ ನಿಗದಿಯಾಗಿದೆ. ಆದಾಗ್ಯೂ, ಕೇಜ್ರಿವಾಲ್ ಅವರು ಇಡಿ ಮುಂದೆ ಹಾಜರಾಗುತ್ತಾರೆಯೇ ಅಥವಾ ಅವರ ಚುನಾವಣಾ ಪ್ರಚಾರವನ್ನು ಮುಂದುವರಿಸುತ್ತಾರೆಯೇ ಎಂಬುದನ್ನು ಕಾಡು ನೋಡಬೇಕಿದೆ.

    ಕೇಜ್ರಿವಾಲ್​ಗೆ ಸಮನ್ಸ್​
    ಈ ವರ್ಷದ ಫೆಬ್ರವರಿಯಲ್ಲಿ ದೆಹಲಿ ಮಾಜಿ ಡಿಸಿಎಂ ಮನೀಷ್ ಸಿಸೋಡಿಯಾ ಮತ್ತು ಅಕ್ಟೋಬರ್ 4 ರಂದು ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಿದ ಅದೇ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಇಡಿ ಸಮನ್ಸ್ ನೀಡಿದೆ. ಕಳೆದ ಏಪ್ರಿಲ್‌ನಲ್ಲಿ ಕೇಜ್ರಿವಾಲ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಸುಮಾರು ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ದೆಹಲಿ ಸರ್ಕಾರದ 2021-22ರ ಅಬಕಾರಿ ನೀತಿಯನ್ನು ಇಡಿ ಮತ್ತು ಸಿಬಿಐ ತನಿಖೆ ನಡೆಸುತ್ತಿದೆ. ಈ ಅಬಕಾರಿ ನೀತಿಯಿಂದ ಕೆಲವು ಮದ್ಯದ ಡೀಲರ್​ಗಳ ಕೇಜ್ರಿವಾಲ್​ ಸರ್ಕಾರ ಒಲವು ತೋರಿದ್ದು, ಅಕ್ರಮ ಹಣ ವರ್ಗಾವಣೆ ನಡೆದಿರುವ ಆಪಾದನೆ ಇದೆ. ಆದರೆ, ಎಎಪಿ ಈ ಆರೋಪಗಳನ್ನು ಬಲವಾಗಿ ತಿರಸ್ಕರಿಸಿದೆ.

    ಬಿಜೆಪಿ ಎಎಪಿಗೆ ಹೆದರುತ್ತಿದೆ. ಈ ಸಂಚಿನ ಭಾಗವಾಗಿ ಇಡಿ ನವೆಂಬರ್ 2 ರಂದು ಅರವಿಂದ್ ಕೇಜ್ರಿವಾಲ್‌ಗೆ ಸಮನ್ಸ್ ನೀಡಿದೆ. ಇದು ಸುಳ್ಳು ಪ್ರಕರಣ ದಾಖಲಿಸಿ ಬಂಧಿಸುವ ಸಂಚು. ನಾನು ಬಿಜೆಪಿಗೆ ಹೇಳ ಬಯಸುತ್ತೇನೆ, ನಾವು ಜೈಲಿಗೆ ಹೋಗುವ ಭಯವಿಲ್ಲ. ನಾವು ಸಾಮಾನ್ಯ ಜನರಿಗಾಗಿ ಕೆಲಸ ಮಾಡುತ್ತಲೇ ಇರುತ್ತೇವೆ” ಎಂದು ಸಚಿವ ಅತಿಶಿ ಎಕ್ಸ್‌ನಲ್ಲಿ ( ಈ ಹಿಂದೆ ಟ್ವಿಟರ್​) ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ಅಬಕಾರಿ ಪ್ರಕರಣ ತನಿಖೆ: ನವೆಂಬರ್ 2 ರಂದು ಇಡಿ ಮುಂದೆ ಹಾಜರಾಗ್ತಾರಾ ಅರವಿಂದ್ ಕೇಜ್ರಿವಾಲ್?

    ನಿಯಮಿತವಾಗಿ ಹಸಿ ಬೆಳ್ಳುಳ್ಳಿ ಸೇವನೆ ಮಾಡಿ ನಿಮ್ಮ ದೇಹದಲ್ಲಾಗುವ ಚಮತ್ಕಾರ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts