More

    ಕುರುಬರಿಗೆ ಟಿಕೆಟ್ ಕೊಡದಿದ್ದರೆ ತಕ್ಕ ಉತ್ತರ

    ಹೊಸಪೇಟೆ: ಎಲ್ಲ ಪಕ್ಷಗಳು ಕುರುಬ ಸಮುದಾಯವನ್ನು ರಾಜಕೀಯವಾಗಿ ಬಳಸಿಕೊಂಡಿವೆ. ಈ ಬಾರಿ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಕುರುಬ ಸಮಾಜಕ್ಕೆ ಅವಕಾಶ ನೀಡದಿದ್ದರೆ, ಸಮಾಜದಿಂದ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಗರದ ಹಂಪಿ ರಸ್ತೆಯಲ್ಲಿರುವ ಜಿಲ್ಲಾ ಕುರುಬರ ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆದ ಕುರುಬರ ರಾಜಕೀಯ ಸಾಮಾಜಿಕ ಜಿಲ್ಲಾ ಜಾಗೃತಿ ಸಭೆಯಲ್ಲಿ ನಿರ್ಣಯಿಸಲಾಯಿತು.

    ಸಮಾಜದ ಪ್ರಮುಖ ರಾಜಶೇಖರ್ ಹಿಟ್ನಾಳ್ ಮಾತನಾಡಿ, ಕುರುಬರು ದೊಡ್ಡ ಸಂಖ್ಯೆಯಲ್ಲಿದ್ದರೂ, ರಾಜಕೀಯವಾಗಿ ಶಕ್ತಿ ಸಣ್ಣದಿದೆ. ನಮ್ಮಲ್ಲಿ ಶಿಕ್ಷಣ ಸಂಸ್ಥೆಗಳಿಲ್ಲ. ಸಾಮಾಜಿಕವಾಗಿ ಹಿಂದುಳಿದಿದೆ. ದೊಡ್ಡ ಸಮಾಜವಿದ್ದರೂ ಒಂದು ಪಕ್ಷದಿಂದ ಟಿಕೆಟ್ ಪಡೆಯಲು ಆಗುತ್ತಿಲ್ಲ. ರಾಜಕೀಯವಾಗಿ ತುಳಿಯುವ ಕೆಲಸ ಮಾಡುತ್ತಿದ್ದಾರೆ. ಸಂಘಟನಾ ಶಕ್ತಿ ಬಳಸಿಕೊಂಡು ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಂದಾಗಬೇಕಿದೆ. ಯಾವುದೇ ಸಮಾಜಕ್ಕೆ ಪಕ್ಷ ಅನಿವಾರ್ಯವಲ್ಲ. ಪಕ್ಷಕ್ಕೆ ಸಮಾಜ ಅನಿವಾರ್ಯ ಎಂಬುದನ್ನು ಮನವರಿಕೆ ಮಾಡಬೇಕು ಎಂದರು.

    ಧರ್ಮದರ್ಶಿ ಕುರಿ ಶಿವಮೂರ್ತಿ ಮಾತನಾಡಿ, ಎಲ್ಲ ರಾಜಕೀಯ ಪಕ್ಷಗಳು ಕುರುಬ ಸಮುದಾಯವನ್ನು ವೋಟ್ ಬ್ಯಾಂಕ್ ಆಗಿ ಬಳಕೆ ಮಾಡಿಕೊಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಅಂತಹ ಪಕ್ಷಕ್ಕೆ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

    ಕುರುಬರ ಸಂಘದ ವಿವಿಧ ತಾಲೂಕು ಅಧ್ಯಕ್ಷರಾದ ಹೊಸಗೇರಪ್ಪ, ಗೋಣಿಬಸಪ್ಪ, ಮೂಗಪ್ಪ, ಬಸವರಾಜ, ಭರಮನಗೌಡ, ಎಂ.ವೀರೇಶ್, ಗೌಡ್ರ ರಾಮಣ್ಣ, ಗೋಪಾಲಕೃಷ್ಣ, ಕುಬೇರ, ಮಲಿಯಪ್ಪ, ಯಮನೂರಮೇಟಿ, ಮಹೇಶ್, ಚೇತನ್, ಹನುಮೇಶ್, ಬಿಸಾಟಿ ತಾಯಪ್ಪ, ಕುಮಾರಪ್ಪ, ಮಲ್ಲಿಕಾರ್ಜುನ, ಶ್ರೀಕಾಂತ ಪೂಜಾರಿ, ರಾಯಪ್ಪ, ಜಿ.ರಮೇಶ್‌ಗೌಡ, ವಿನಾಯಕಗೌಡ, ವೆಂಕಟೇಶ, ಹನುಮಂತ ಇದ್ದರು.

    ಸಾಮಾಜಿಕವಾಗಿ ಹಿಂದುಳಿದ ಸಮಾಜಕ್ಕೆ ಎಲ್ಲಿಯೂ ಆದ್ಯತೆ ಇಲ್ಲ. ಯಾವುದೇ ಪಕ್ಷಗಳು ಸಮಾಜವನ್ನು ಅಭಿವೃದ್ಧಿ ಮಾಡುವ ರಾಜಕೀಯ ಇಚ್ಛಾಶಕ್ತಿ ತೋರುತ್ತಿಲ್ಲ. ಕುರುಬರನ್ನು ತುಳಿಯುವವರಿಗೆ ಪಕ್ಷಗಳು ಪದೇಪದೇ ಅವಕಾಶ ನೀಡುತ್ತಿವೆ. ಹರಪನಹಳ್ಳಿ ಅಥವಾ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅನ್ನು ಕುರುಬರಿಗೆ ನೀಡಬೇಕು. ಇಲ್ಲವೇ ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಉತ್ತರ ನೀಡುತ್ತೇವೆ.
    ಬುಡ್ಡಿ ಬಸವರಾಜ ಎಚ್.ಬಿ.ಹಳ್ಳಿ ತಾಲೂಕು ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts