More

    ಮೂರು ಪಕ್ಷದಿಂದ ಅಭ್ಯರ್ಥಿಗಳಾರು?: ಭಾರೀ ಕುತೂಹಲ ಹುಟ್ಟಿಸಿದ ಮಂಡ್ಯ ಕ್ಷೇತ್ರ

    ಮಂಡ್ಯ: ಪ್ರತಿಷ್ಠೆಯ ಕಣವಾಗಿರುವ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಕಣಕ್ಕಿಳಿಯುವರ‌್ಯಾರು?. ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರಾ?. ಕೈ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ಬರ್ತಾರಂತೆ?. ಸಂಸದೆ ಸುಮಲತಾ ನಡೆ ಏನು?.
    ಇಂತಹ ಹಲವಾರು ಪ್ರಶ್ನೆಗೆ ಉತ್ತರ ಸಿಗಬೇಕಾದರೆ ನಾಮಪತ್ರ ಸಲ್ಲಿಕೆ ಕೊನೆ ದಿನವಾದ ಗುರುವಾರ(ಏ.20) ಮಧ್ಯಾಹ್ನ 3ಗಂಟೆವರೆಗೆ ಕಾಯಬೇಕಾಗಿದೆ. ವಿಧಾನಸಭಾ ಚುನಾವಣೆ ಕಾವೇರಿರುವ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕ್ಷಣ ಕ್ಷಣಕ್ಕೂ ಬೆಳವಣಿಗೆ ನಡೆಯುತ್ತಿದೆ. ಈಗಾಗಲೇ ಪ್ರಮುಖ ಮೂರು ಪಕ್ಷದಿಂದ ಅಭ್ಯರ್ಥಿ ೋಷಣೆಯಾಗಿದ್ದರೂ ಅಂತಿಮವಾಗಿ ಕಣದಲ್ಲಿ ಉಳಿಯುವವರ‌್ಯಾರು ಎನ್ನುವ ಕೌತುಕ ಮಾತ್ರ ಬಗೆಹರಿದಿಲ್ಲ.
    ಎಚ್‌ಡಿಕೆ ವರ್ಸಸ್ ಸಂಸದೆ: ಕಳೆದ ಡಿಸೆಂಬರ್‌ನಲ್ಲಿ ಹಾಲಿ ಶಾಸಕ ಎಂ.ಶ್ರೀನಿವಾಸ್‌ಗೆ ಟಿಕೆಟ್ ೋಷಣೆಯಾಗಿದ್ದರೂ ಬಿ ಾರ್ಮ್ ಕೊಡಲಿಲ್ಲ. ಅತ್ತ ಕಾಂಗ್ರೆಸ್‌ನ ಪರಿಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ರವಿಕುಮಾರ್ ಗಣಿಗ ಹೆಸರು ೋಷಣೆಯಾದರೂ ಬಿ ಾರ್ಮ್ ಕೊಟ್ಟಿರಲಿಲ್ಲ. ಬಿಜೆಪಿಯಿಂದ ಅಶೋಕ್ ಜಯರಾಂಗೆ ಅವಕಾಶ ಕೊಟ್ಟಿದ್ದರೂ ಸುಮಲತಾ ಸ್ಪರ್ಧೆಯ ಮಾತು ಕೇಳಿಬರುತ್ತಿದೆ.
    ಈ ನಡುವೆ ಬುಧವಾರ ಜೆಡಿಎಸ್ ಅಭ್ಯರ್ಥಿ ಎಂದು ಬಿ.ಆರ್.ರಾಮಚಂದ್ರು ಅವರ ಹೆಸರನ್ನು ೋಷಣೆ ಮಾಡಿ ಬಿ ಾರ್ಮ್ ನೀಡಲಾಗಿದೆ. ಪರಿಣಾಮ ದಳದಲ್ಲಿ ಬಂಡಾಯ ಭುಗಿಲೇಳುವಂತಾಗಿದೆ. ನಗರದಲ್ಲಿ ಶಾಸಕ ಎಂ.ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್ ನೇತೃತ್ವದಲ್ಲಿ ಸಭೆ ಮಾಡಿದರೆ, ಮತ್ತೊಂದೆಡೆ ಕೆ.ವಿ.ಶಂಕರಗೌಡ ಅವರ ಮೊಮ್ಮಗ ಕೆ.ಎಸ್.ವಿಜಯಾನಂದ ಅವರ ನಿವಾಸದಲ್ಲಿ ಹಿತೈಷಿಗಳ ಸಭೆ ಆಯೋಜಿಸಿ ಹಲವು ಹೊತ್ತು ಚರ್ಚೆ ನಡೆಸಲಾಗಿದೆ.
    ಇಷ್ಟೇ ಆಗಿದ್ದರೆ ಅಭ್ಯರ್ಥಿ ಯಾರೆನ್ನುವ ಗೊಂದಲವಿರಲಿಲ್ಲ. ಬದಲಿಗೆ ಬಂಡಾಯದ ಕಾವು ಜೋರಾಗಿರುವುದರಿಂದ ಎಚ್.ಡಿ.ಕುಮಾರಸ್ವಾಮಿ ಅವರೇ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎನ್ನುವ ಮಾತು ಪಕ್ಷದ ಅಂಗಳದಿಂದ ಕೇಳಿಬರುತ್ತಿದೆ. ಎಸ್.ಎಂ.ಕೃಷ್ಣ ಸಹೋದರನ ಮಗ ಎಸ್.ಗುರುಚರಣ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಳ್ಳಲು ಮದ್ದೂರಿಗೆ ಗುರುವಾರ ಎಚ್‌ಡಿಕೆ ಆಗಮಿಸುತ್ತಿದ್ದಾರೆ. ಅದೇ ರೀತಿ ಮಂಡ್ಯಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರೂ ಅಚ್ಚರಿಯಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.
    ಮಾತ್ರವಲ್ಲದೆ ನಾಮಪತ್ರ ಸಲ್ಲಿಸುವ ಕೊನೆ ದಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ಪಕ್ಷದ ಅಭ್ಯರ್ಥಿ ಪರ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್‌ಡಿಕೆ ನಾಮಪತ್ರ ಸಲ್ಲಿಸಿದರೆ ಕಾಂಗ್ರೆಸ್ ಅಭ್ಯಥಿರ್ಘಯಾಗಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅಥವಾ ಪ್ರಭಾವಿ ನಾಯಕರೊಬ್ಬರು ಉಮೇದುವಾರಿಕೆ ಸಲ್ಲಿಸಬಹುದೆನ್ನುವ ಚರ್ಚೆ ಇದೆ. ಅತ್ತ ಸಂಸದೆ ಸುಮಲತಾ ಕೂಡ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಅವರು ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಂತೆಯೇ ಎಚ್‌ಡಿಕೆ ಉಮೇದುವಾರಿಕೆ ಸಲ್ಲಿಸಿದರೆ ಸುಮಲತಾ ಕೂಡ ಬಿಜೆಪಿ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಬಹುದೆನ್ನಲಾಗುತ್ತಿದೆ.
    ಈ ಎಲ್ಲ ಬೆಳವಣಿಗೆ ಸಾಕಷ್ಟು ಕುತೂಹಲ ಮೂಡಿಸಿದ್ದು, ಈಗಾಗಲೇ ೋಷಣೆ ಮಾಡಿರುವ ಅಭ್ಯರ್ಥಿಗಳೇ ನಾಮಪತ್ರ ಸಲ್ಲಿಸುವರೋ ಅಥವಾ ಎಚ್‌ಡಿಕೆ, ಸುಮಲತಾ ಉಮೇದುವಾರಿಕೆ ಹಾಕಲಿದ್ದಾರೋ ಎನ್ನುವುದನ್ನು ಕಾದುನೋಡಬೇಕಿದೆ. ಒಟ್ಟಾರೆ ಗುರುವಾರ ಮಂಡ್ಯದಲ್ಲಿ ಭಾರೀ ಹೈಡ್ರಾಮಾ ನಡೆಯುವ ನಿರೀಕ್ಷೆ ಇದೆ.
    ಸ್ವಾಭಿಮಾನಿ ಪಡೆ ಅಸ್ಥಿತ್ವಕ್ಕೆ: ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಎಂ.ಶ್ರೀನಿವಾಸ್ ಪಕ್ಷದ ಸದಸ್ಯತ್ವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ೋಷಣೆ ಮಾಡಿದ್ದಾರೆ. ಬಿ ಾರ್ಮ್ ಸಿಗದಿರಲು ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಕಾರಣವೆನ್ನುವ ಆರೋಪ ಕೇಳಿಬಂತು. ಜತೆಗೆ ಸ್ವಾಭಿಮಾನಿ ಪಡೆ ಹೆಸರಿನಲ್ಲಿ ಶ್ರೀನಿವಾಸ್, ಎಚ್.ಎನ್.ಯೋಗೇಶ್ ಹಾಗೂ ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ನಾಮಪತ್ರ ಸಲ್ಲಿಸುವುದು. ಅಂತಿಮವಾಗಿ ಯಾರು ಸ್ಪರ್ಧೆ ಮಾಡಬೇಕೆನ್ನುವ ನಿರ್ಧಾರವನ್ನು ಬಳಿಕ ತೀರ್ಮಾನಿಸುವುದಾಗಿ ತಿಳಿಸಿದರು. ಈ ನಡುವೆ ಸಭೆಯಲ್ಲಿ ಎಚ್‌ಡಿಕೆ ವಿರುದ್ಧ ಶಾಸಕರ ಬೆಂಬಲಿಗರು ಟೀಕಾಪ್ರಹಾರ ನಡೆಸಿದರು.
    ಅತ್ತ ಕೆ.ಎಸ್.ವಿಜಯಾನಂದ ಅವರ ನಿವಾಸದಲ್ಲಿಯೂ ಆಯೋಜಿಸಿದ್ದ ಸಭೆಯಲ್ಲಿಯೂ ದಳಪತಿಗಳ ವಿರುದ್ಧ ಆಕ್ರೋಶ ಹೊರಹಾಕಲಾಯಿತು. ಹಣಕ್ಕೆ ಟಿಕೆಟ್ ಮಾರಿಕೊಳ್ಳಲಾಗಿದೆ ಎಂದು ಟೀಕಿಸಲಾಯಿತು. ಮಾತ್ರವಲ್ಲದೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ತೀರ್ಮಾನಿಸಲಾಯಿತು. ನಗರದಲ್ಲಿರುವ ನಿತ್ಯಸಚಿವ ಕೆ.ವಿ.ಶಂಕರೇಗೌಡ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಾಮಪತ್ರ ಸಲ್ಲಿಸುವುದಾಗಿ ೋಷಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts