More

    ಈಶಾನ್ಯ ದೆಹಲಿ ಹಿಂಸಾಚಾರ ರಾಜಕೀಯ ಪಿತೂರಿ: ಹೇಗೆ? ಏನು? ಹೇಳಿದವರು ಯಾರು?

    ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರ ರಾಜಕೀಯ ಪಿತೂರಿಯಾಗಿತ್ತು. ಅದನ್ನು ಅಲ್ಪಸಂಖ್ಯಾತರಲ್ಲಿ ಶಾಶ್ವತ ಭಯ ತುಂಬಲು ನಡೆಸಲಾಯಿತು.

    ಅದೇ ಸಂದರ್ಭದಲ್ಲಿ ಭಾರತಕ್ಕೆ ಆಗಮಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಮುಂದೆ ದೇಶದ ಮಾನವನ್ನು ಹಾನಿ ಮಾಡಲು ಹಿಂಸಾಚಾರವನ್ನು ಬಳಸಲಾಯಿತು ಎಂದು ಕೇಂದ್ರ ಸಚಿವ ನಿತಿನ್​ ಗಡ್ಕರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ದೆಹಲಿ ಹಿಂಸಾಚಾರದ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತಿದೆ. ಆ ವರದಿ ಬಂದ ನಂತರ ಗಲಭೆಗೆ ಕಾರಣವಾದವರ ಮೇಲೆ ಕಠಿಂ ಕ್ರಮಕೈಗೊಳ್ಳಲಾಗುವುದು ಎಂದರು. ಅಲ್ಲದೆ, ಇದು ರಾಜಕೀಯ ಪಿತೂರಿ ಎನ್ನುವುದು ನನ್ನ ವ್ಯಯಕ್ತಿಕ ಅಭಿಪ್ರಾಯ. ಇದರ ಮೇಲೆ ನಡೆಯುತ್ತಿರುವ ತನಿಖೆ ಪೂರ್ಣಗೊಂಡ ಮೇಲೆ ಸತ್ಯ ಬಯಲಿಗೆ ಬರಬೇಕಿದೆ ಎಂದರು.

    ಅಲ್ಲಿದ್ದ ಆ್ಯಸಿಡ್​ ಬಾಂಬ್​ಗಳು ತಯಾರಿಸಿದ ರೀತಿ ನೋಡಿದರೆ ತಿಳಿಯುತ್ತದೆ. ಅಲ್ಲದೆ ಅವುಗಳನ್ನು ತಯಾರಿಸಲು ಆ್ಯಸಿಡ್​ ಕೊಂಡುಕೊಂಡಿದ್ದು ಚೆಕ್​ ಕೊಟ್ಟು ಎಂದು ತಿಳಿದು ಬಂದಿದೆ. ಆದರೆ ಅದರ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ತನಿಖೆ ಪೂರ್ಣಗೊಳ್ಳುವವರೆಗೆ ಕಾಯೋಣ ಎಂದರು.

    ‘ಸಬ್​ಕಾ ಸಾಥ್, ಸಬ್​ಕಾ ವಿಕಾಸ್ ಮತ್ತು ಸಬ್​ ಕಾ ವಿಶ್ವಾಸ’ ಎಂಬ ಘೋಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಅಲ್ಪಸಂಖ್ಯಾತ ಸಮುದಾಯದ ಒಬ್ಬ ಸದಸ್ಯರ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ. ಈ ಕಾಯ್ದೆ ಬಗ್ಗೆ ಪ್ರತಿಪಕ್ಷಗಳು ಮತ್ತು ಅಲ್ಪಸಂಖ್ಯಾತರೊಂದಿಗೆ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ. ವಾಸ್ತವವಾಗಿ ಸಿಎಎ ಅಥವಾ 370 ನೇ ವಿಧಿಯಲ್ಲಿ ಅಲ್ಪಸಂಖ್ಯಾತರ ವಿರುದ್ಧ ಏನೂ ಇಲ್ಲ ಎಂದು ಅವರು ಪುನರುಚ್ಚರಿಸಿದರು. (ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts