More

    ಪೊಲೀಸ್ ಠಾಣೆಯಲ್ಲೇ ಸಣ್ಣಪುಟ್ಟ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಿ: ಹರಪನಹಳ್ಳಿ ಹಿರಿಯ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ಸಲಹೆ

    ಹರಪನಹಳ್ಳಿ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರೈತರು, ಕಾರ್ಮಿಕರು, ಜನರು ಸಣ್ಣ ಪುಟ್ಟ ಸಮಸ್ಯೆಗಳನ್ನು ಕೋರ್ಟ್‌ಗೆ ತರುವ ಬದಲು ಹತ್ತಿರದ ಪೊಲೀಸ್ ಠಾಣೆ ಅಧಿಕಾರಿಗಳ ಬಳಿ ರಾಜೀ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಸ್ಥಳೀಯ ಸಿವಿಲ್ ಹಿರಿಯ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ಹೇಳಿದರು.

    ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಕಾನೂನು ಸಲಹಾ ಕೇಂದ್ರ ಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಸಣ್ಣ ವಿಷಯಗಳನ್ನೇ ಸಮಸ್ಯೆಗಳನ್ನಾಗಿ ಸೃಷ್ಟಿಸಿಕೊಂಡು ಜನ ನ್ಯಾಯಾಲಯದ ಮೆಟ್ಟಿಲು ಏರುತ್ತಿದ್ದಾರೆ. ಇದರಿಂದ ಸಮಯ, ಹಣ ವ್ಯರ್ಥವಾಗಲಿದೆ. ಆದ್ದರಿಂದ ಸಮಸ್ಯೆ ಸಣ್ಣದಿರುವಾಗಲೇ ಹತ್ತಿರದ ಠಾಣೆಯಲ್ಲಿ ನ್ಯಾಯಾಲಯದಿಂದ ಒಬ್ಬ ಕಾನೂನು ಸಲಹೆಗಾರನನ್ನಾಗಿ ನೇಮಿಸಿದ್ದು, ಅವರ ಸಮ್ಮುಖದಲ್ಲಿ ಸ್ಥಳದಲ್ಲೇ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.

    ಸಿಪಿಐ ಕೆ.ಕುಮಾರ್, ಪಿಎಸ್‌ಐ ಸಿ.ಪ್ರಕಾಶ್, ಸರ್ಕಾರಿ ವಕೀಲ ಬಸವರಾಜ್, ವಕೀಲರ ಸಂಘದ ಕಾರ್ಯದರ್ಶಿ ಬಸವರಾಜ್, ಕಾನೂನು ಸಲಹೆಗಾರ ಸಿದ್ದೇಶ್ವರ್ ಎನ್., ವಕೀಲರಾದ ಎಂ.ಮೃತ್ಯುಂಜಯ, ಮಲ್ಲಿಕಾರ್ಜುನ್, ತಿಪ್ಪೇಶ್, ಮಂಜುನಾಥ್, ಆನಂದ, ಹನುಮಂತಪ್ಪ, ಬಸವರಾಜ್, ಕೊಟ್ರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts