More

    ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಹೊಣೆ: ಸಚಿವ ದಿನೇಶ್ ಗುಂಡೂರಾವ್

    ಮಂಗಳೂರು: ಸಮಾಜಘಾತುಕ ಸಂಘಟನೆಗಳ ನಿಯಂತ್ರಣ ಸಹಿತ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

    ಜೆಪ್ಪಿನಮೊಗರಿನ ಪ್ರೆಸ್ಟೀಜ್ ಇಂಟರ್‌ನ್ಯಾಷನಲ್ ಸ್ಕೂಲ್ ಆಡಿಟೋರಿಯಂನಲ್ಲಿ ಶನಿವಾರ ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟ ವತಿಯಿಂದ ಎಕ್ಸಲೆನ್ಸ್ ಅವಾರ್ಡ್ಸ್, ಸನ್ಮಾನ ಮತ್ತು ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.

    ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ವಿದ್ಯಾರ್ಥಿಗಳಿಗೆ ಸುರಕ್ಷೆ ನೀಡಲು, ಸಮಾಜಘಾತುಕ ಸಂಘಟನೆಗಳು ಕಾನೂನು ಕೈಗೆತ್ತಿಕೊಳ್ಳದಂತೆ ಕ್ರಮ ವಹಿಸಲು, ಡ್ರಗ್ಸ್ ದಂಧೆಮಟ್ಟ ಹಾಕಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ. ಜನರಿಗೆ ಉತ್ತಮ ಆಡಳಿತ ನೀಡುವುದು ನಮ್ಮ ಜವಾಬ್ದಾರಿ. ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಭಯದ ವಾತಾವರಣ ಇರಬಾರದು. ಡ್ರಗ್ಸ್ ನಿರ್ಮೂಲನೆ ಸಹಿತ ಅವರ ಸುರಕ್ಷೆಗೆ ಆದ್ಯತೆ ನೀಡಲಾಗುವುದು ಎಂದರು.

    ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಎಸ್.ಮಧು ಬಂಗಾರಪ್ಪ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಸಂಸ್ಥೆಗಳ 1.20 ಕೋಟಿ ವಿದ್ಯಾರ್ಥಿಗಳು, ಎರಡು ಕೋಟಿ ಹೆತ್ತವರನ್ನು ತಲುಪುವ ಜವಾಬ್ದಾರಿ ನನ್ನದು ಎಂದರು.

    ಪ್ರಶಸ್ತಿ ಪ್ರದಾನ

    ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ 12 ವಿದ್ಯಾರ್ಥಿಗಳು, ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ ಎಂಟು ಸಂಸ್ಥೆ ಮತ್ತು ಶೇ.100 ಲಿತಾಂಶ ದಾಖಲಿಸಿದ 45 ಶಾಲೆ- ಕಾಲೇಜುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸ್ಪೀಕರ್ ಖಾದರ್, ಸಚಿವರು ಹಾಗೂ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದಿರುವ ಡಾ.ಕಣಚೂರು ಮೋನು, ಡಾ.ನಿಸಾರ್ ಅವರನ್ನು ಗೌರವಿಸಲಾಯಿತು.


    ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೆಸ್ಟೀಜ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹೈದರ್ ಅಲಿ ಕೆ., ಶಿಕ್ಷಣ ಇಲಾಖೆ ನಿರ್ದೇಶಕ ಕೃಷ್ಣ ಜಿ., ಶಬೀಹ್ ಅಹ್ಮದ್ ಖಾಜಿ, ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟ ಸಲಹೆಗಾರ ಉಮರ್ ಟೀಕೆ, ಸಯ್ಯದ್ ಮುಹಮ್ಮದ್ ಬ್ಯಾರಿ, ವಿಶೇಷ ಅತಿಥಿ ರಾಜೇಂದ್ರ ಭಟ್ ಕೆ. ಉಪಸ್ಥಿತರಿದ್ದರು.

    ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯೇ ದೊಡ್ಡ ದೇಶ ಸೇವೆ. ಒಕ್ಕೂಟದ ಕಾನೂನುಬದ್ಧ ಮನವಿಗೆ ಸರ್ಕಾರ ಸ್ಪಂದಿಸಬೇಕು. ಶಾಲೆಗಳಿಗೆ ಅಗ್ನಿಶಾಮಕ, ಲೋಕೋಪಯೋಗಿ ನಿರಾಕ್ಷೇಪಣಾ ಪತ್ರದ ಹೆಸರಲ್ಲಿ ಸತಾಯಿಸಬಾರದು. ವಿದ್ಯಾರ್ಥಿಗಳು ಶಿಕ್ಷಣ, ಮೌಲ್ಯ, ಕೌಶಲ್ಯ ಪಡೆದು ದೇಶಸೇವೆ ಮಾಡಬೇಕು.
    – ಯು.ಟಿ.ಖಾದರ್, ವಿಧಾನಸಭೆ ಸ್ಪೀಕರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts