More

    ವೇಶ್ಯಾಗೃಹಗಳ ಮೇಲೆ ದಾಳಿ, 19 ಆರೋಪಿಗಳ ಬಂಧನ

    ಚೆನ್ನೈ: ಲಾಕ್​ಡೌನ್​​ನಿಂದಾಗಿ ಕೈಸುಟ್ಟುಕೊಂಡ ಹಲವು ಸಣ್ಣ ಪುಟ್ಟ ವ್ಯಾಪಾರಸ್ಥರು ವೇಶ್ಯಾವಾಟಿಕೆ ಸೇರಿ ಹಲವು ರೀತಿಯ ಅಕ್ರಮ ವ್ಯವಹಾರಗಳತ್ತ ಮುಖ ಮಾಡುತ್ತಿದ್ದಾರೆ.
    ಹೊಟ್ಟೆಪಾಡಿಗೆ ಈ ದಂಧೆ ಮಾಡುತ್ತಿರುವುದಾಗಿ ಅವರೇ ಪೊಲಿಸರ ಮುಂದೆ ಹೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ. ತಮಿಳುನಾಡು ಪೊಲೀಸರು ಬುಧವಾರ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ರಾಜ್ಯದ ತಂಜಾವೂರು ಮತ್ತು ಕೊಯಮತ್ತೂರು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡು ವೇಶ್ಯಾವಾಟಿಕೆ ಜಾಲವನ್ನು ಭೇದಿಸಿ 21 ಆರೋಪಿಗಳನ್ನು ಬಂಧಿಸಿ 10 ಮಹಿಳೆಯರನ್ನು ರಕ್ಷಿಸಿದ್ದಾರೆ.
    ತಂಜಾವೂರಿನಲ್ಲಿ, ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ದೇಶಮುಖ್ ಶೇಖರ್ ಸಂಜಯ್, ವೇಶ್ಯಾವಾಟಿಕೆ ದಂಧೆಯ ಕಾರ್ಯಾಚರಣೆಯ ಬಗ್ಗೆ ಸುಳಿವು ಪಡೆದ ನಂತರ, ನಗರದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲು ಸಬ್ ಇನ್ಸ್‌ಪೆಕ್ಟರ್‌ಗಳ ನೇತೃತ್ವದ ಮೂರು ವಿಶೇಷ ತಂಡಗಳನ್ನು ನಿಯೋಜಿಸಿದರು.

    ಇದನ್ನೂ ಓದಿ:  ಕರೊನಾಕ್ಕೆ ಆಯುರ್ವೇದ ಔಷಧ ಕಂಡುಹಿಡಿದಿದ್ದೇನೆಂದ ವೈದ್ಯನಿಗೆ ‘ಸುಪ್ರೀಂ’ನಿಂದ ದಂಡ


    ಮಸಾಜ್ ಪಾರ್ಲರ್‌ ಹೆಸರಿನಡಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಏಳು ಮನೆಗಳ ಮೇಲೆ ತಂಡಗಳು ದಾಳಿ ನಡೆಸಿವೆ. ಏಳು ಮನೆಗಳ ಪೈಕಿ ಮೂರು ಮಸಾಜ್ ಪಾರ್ಲರ್‌ಗಳು ಮತ್ತು ಉಳಿದ ನಾಲ್ಕು ಮನೆಗಳು ನಕಲಿ ಕಂಪನಿಗಳಾಗಿವೆ.
    ತಮಿಳುನಾಡು ಮತ್ತು ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶ ಸೇರಿದಂತೆ ಇತರ ನೆರೆಯ ರಾಜ್ಯಗಳ ಒಂಬತ್ತು ಮಹಿಳೆಯರನ್ನು ರಕ್ಷಿಸಲಾಗಿದೆ.
    ಪೊಲೀಸರು ವೇಶ್ಯಾಗೃಹ ನಡೆಸುತ್ತಿದ್ದ ಒಟ್ಟು 19 ಜನರನ್ನು ಬಂಧಿಸಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು. ಅವರನ್ನು ನ್ಯಾಯಾಂಗ ಬಂಧನದಲ್ಲಿಡಬೇಕೆಂದು ನ್ಯಾಯಾಲಯ ಆದೇಶ ಹೊರಡಿಸಿದೆ.

    ಇದನ್ನೂ ಓದಿ: ಮಂಗನಿಗೆ ಹೆಂಡ ಕುಡಿಸುತ್ತಿದ್ದ ಕಲಾವಿದ ಸಿಂಗ್ ಪೊಲೀಸರ ಬಲೆಗೆ


    ಏತನ್ಮಧ್ಯೆ, ರಕ್ಷಿಸಿದ ಮಹಿಳೆಯರನ್ನು ನಗರದ ಸರ್ಕಾರಿ ಆಶ್ರಯ ಮನೆಗಳಿಗೆ ಕಳುಹಿಸಲಾಗಿದೆ. ಕೊಯಮತ್ತೂರಿನಲ್ಲಿ ಗ್ರಾಮೀಣ ಪೊಲೀಸರು ಬುಧವಾರ ರಾತ್ರಿ ಮೆಟ್ಟುಪಾಳಯಂ ಬಳಿಯ ಬಾಡಿಗೆ ಲಾಡ್ಜ್‌ನೊಳಗೆ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪತ್ತೆ ಮಾಡಿದ್ದಾರೆ. ಲಾಡ್ಜ್‌ನಿಂದ ಮಾಂಸ ವ್ಯಾಪಾರ ನಡೆಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ ಕರ್ನಾಟಕದ ಬೆಂಗಳೂರಿನ 22 ವರ್ಷದ ಯುವತಿಯನ್ನು ರಕ್ಷಿಸಿದ್ದಾರೆ. ಲಾಕ್‌ಡೌನ್ ಜಾರಿಯಾದ ನಂತರ ಬಂಧಿತ ಆರೋಪಿ ಆರ್ ಗಣೇಶನ್ (36) ಮತ್ತು ಕೆ ಮಹೇಂದ್ರನ್ (46) ಮಹಿಳೆಯನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿದ್ದರು.
    ಲಾಕ್​ಡೌನ್ ನಿಂದಾಗಿ ತಮ್ಮ ವ್ಯವಹಾರದ ನಿಂತುಹೋದ ಮೇಲೆ ಅವರು ಈ ವೇಶ್ಯಾವಾಟಿಕೆ ದಂಧೆಯನ್ನು ನಡೆಸಲು ಪ್ರಾರಂಭಿಸಿದ್ದಾಗಿ ಹೇಳಿದ್ದಾರೆ.
    ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಗುರುವಾರ ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಏತನ್ಮಧ್ಯೆ, ಪೊಲೀಸರು ರಕ್ಷಿಸಿದ ಮಹಿಳೆಯನ್ನು ಸಂಗನೂರ್ ರಸ್ತೆಯಲ್ಲಿರುವ ಸರ್ಕಾರಿ ಆಶ್ರಯ ಮನೆಗೆ ಕಳುಹಿಸಲಾಗಿದೆ.

    ಲಿಫ್ಟ್​ ಕೊಡ್ತೇವೆ ಬಾ ಎಂದು ಮಹಿಳೆಯನ್ನು ಕರೆದೊಯ್ದು ಗ್ಯಾಂಗ್​ ರೇಪ್ ಮಾಡಿದ್ರು ದುರುಳರು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts