More

    ಆನ್‌ಲೈನ್‌ನಲ್ಲಿ ವಂಚನೆ – ಚುರುಕಿನ ಕಾರ್ಯಾಚರಣೆ 31 ಪ್ರಕರಣ ಭೇದಿಸಿದ ಪೊಲೀಸರು

    ವಿಜಯಪುರ: ಆನ್‌ಲೈನ್‌ನಲ್ಲಿ ಹಣ ಕಳೆದುಕೊಂಡು ಕಂಗಾಲಾಗಿದ್ದ ಸಾರ್ವಜನಿಕರಿಗೆ ಪೊಲೀಸರು ವಂಚಕರಿಂದ ಹಣ ಹಿಂತಿರುಗಿಸಿ ಮೆಚ್ಚುಗೆ ಗಳಿಸಿದ್ದಾರೆ.

    ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 11ಪ್ರಕರಣಗಳಲ್ಲಿ ಒಟ್ಟು 28,96,865 ರೂ. ವಂಚನೆ ಆಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ 15,32,863 ರೂ.ಗಳನ್ನು ದೂರುದಾರರ ಖಾತೆಗೆ ಜಮಾ ಮಾಡಿಸಲಾಗಿದೆ ಎಂದು ತಿಳಿಸಿದರು.

    ಆನ್‌ಲೈನ್ ವಂಚನೆಯಾದ ದೂರುದಾರರು ಗೋಲ್ಡನ್ ಅವರ್ (1 ಗಂಟೆಗೆ ಒಳಗೆ) ನಲ್ಲಿ ನೇರವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದರು ಹಾಗೂ ಎಂಎಚ್‌ಎ ನ್ಯಾಷನಲ್ ಸೈಬರ್ ಕ್ರೈಮ್ ಪೆಟ್ರೋಲ್ ಹೆಲ್ಪ್‌ಲೈನ್ ನಂ.1930ಗೆ ಕರೆ ಮಾಡಿ ದೂರು ನೀಡಿದ ಅನ್ವಯ ತನಿಖೆ ನಡೆಸಿ, ದೂರುದಾರರ ಖಾತೆಗೆ ಹಣ ಜಮಾ ಮಾಡಿಸಲಾಗಿದೆ ಎಂದರು.

    ಪ್ರಕರಣ ಭೇದಿಸಿದ ಸಿಪಿಐ ರಮೇಶ ಅವಜಿ, ಸಿಬ್ಬಂದಿ ಪಿ.ವೈ.ಅಂಬಿಗೇರ, ಎ.ಎನ್.ಗುಡ್ಡೋಡಗಿ, ಆರ್.ವಿ.ನಾಯ್ಕ, ಎ.ಎಲ್.ದೊಡಮನಿ, ಕುರವಿನಶೆಟ್ಟಿ, ಪಿ.ಎಂ.ಪಾಟೀಲ, ಆರ್.ಎಂ.ಬೂದಿಹಾಳಗೆ ಬಹುಮಾನ ಘೋಷಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts